Home Bibles ಯೋಹಾನ 19:12 · ಕನ್ನಡ ಬೈಬಲ್
ಯೋಹಾನ 19:12 · ಕನ್ನಡ ಬೈಬಲ್

ಅಂದಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಪಟ್ಟನು. ಆದರೆ ಯೆಹೂದ್ಯರು--ನೀನು ಈ ಮನುಷ್ಯನನ್ನು ಹೋಗಗೊಡಿಸಿದರೆ ಕೈಸರನಿಗೆ ಸ್ನೇಹಿತನಲ್ಲ; ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳು ವವನು ಕೈಸರನಿಗೆ ವಿರೋಧವಾಗಿ ಮಾತನಾಡುತ್ತಾನೆ ಎಂದು ಕೂಗಿ ಹೇಳಿದರು.

Cross references

ಎಜ್ರಾ 4:14

ಆದರೆ ನಾವು ಅರಮನೆಯ ಉಪ್ಪನ್ನು ತಿಂದದ್ದರಿಂದ ಅರಸನ ಅವಮಾನವನ್ನು ನೋಡುವದು ನಮಗೆ ತಕ್ಕದ್ದಲ್ಲ; ಆದದರಿಂದ ನಾವು ಅರಸನ ಬಳಿಗೆ ಇದನ್ನು ಕಳುಹಿಸಿ ತಿಳಿಯಮಾಡಿ ದ್ದೇವೆ.

ಮಾರ್ಕ 6:16

ಹೆರೋದನಾದರೋ ಆತನ ವಿಷಯವಾಗಿ ಕೇಳಿದಾಗ -- ನಾನು ತಲೆ ಹೊಯಿಸಿದ ಯೋಹಾನನು ಇವನೇ; ಇವನು ಸತ್ತವ ರೊಳಗಿಂದ ಎದ್ದು ಬಂದಿದ್ದಾನೆ ಅಂದನು.

ಲೂಕ 23:2

ಅವರು ಆತನ ಮೇಲೆ ದೂರು ಹೇಳಲಾರಂಭಿಸಿ--ಈ ಮನುಷ್ಯನು ಜನಾಂಗವನ್ನು ತಪ್ಪು ದಾರಿಗೆ ನಡಿಸುವನಾಗಿ ತಾನೇ ಕ್ರಿಸ್ತನೆಂಬ ಅರಸನಾಗಿದ್ದನೆಂದೂ ಹೇಳಿ ಕೈಸರನಿಗೆ ಕಂದಾಯ ಕೊಡದಂತೆ ಇವನು ಅಡ್ಡಿ ಮಾಡುತ್ತಿರುವದನ್ನು ನಾವು ನೋಡಿದ್ದೇವೆಅಂದರು.

ಯೋಹಾನ 18:33

ತರುವಾಯ ಪಿಲಾತನು ತಿರಿಗಿ ನ್ಯಾಯಾಲಯ ದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಆತ ನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು.

ಯೋಹಾನ 19:22

ಪಿಲಾತನು ಪ್ರತ್ಯುತ್ತರವಾಗಿ--ನಾನು ಬರೆದದ್ದು ಬರೆದಾಯಿತು ಅಂದನು.

ಅಪೋಸ್ತಲರ ಕೃತ್ಯಗಳು 17:6

ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಪಟ್ಟಣದ ಅಧಿಕಾರಿ ಗಳ ಬಳಿಗೆ ಎಳಕೊಂಡು ಹೋಗಿ--ಲೋಕವನ್ನು ತಲೆಕೆಳಗೆ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ;

ಅಪೋಸ್ತಲರ ಕೃತ್ಯಗಳು 24:24

ಕೆಲವು ದಿವಸಗಳಾದ ಮೇಲೆ ಯೆಹೂದ್ಯಳಾದ ದ್ರೂಸಿಲ್ಲಳೆಂಬ ತನ್ನ ಹೆಂಡತಿಯೊಂದಿಗೆ ಫೇಲಿಕ್ಸನು ಬಂದು ಪೌಲನನ್ನು ಕರೆಯಿಸಿ ಕ್ರಿಸ್ತನಲ್ಲಿ ಇಡಬೇಕಾದ ನಂಬಿಕೆಯ ವಿಷಯವಾಗಿ ಅವನು ಹೇಳಿದ್ದನ್ನು ಕೇಳಿದನು.

Interlinear

Choose Theme