Cross references
ಸರ್ವಶಕ್ತನಾದ ದೇವರು ನಿಮ್ಮ ಬೇರೆ ಸಹೋದರ ನನ್ನೂ ಬೆನ್ಯಾವಿಾನನನ್ನೂ ಕಳುಹಿಸಿ ಕೊಡುವಹಾಗೆ ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ ಅಂದನು.
ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು. ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು. ನಾನು ನಾಶವಾದರೆ ನಾಶವಾಗುವೆನು ಅಂದಳು.ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,
ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.
ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು.
ಅಂದಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಪಟ್ಟನು. ಆದರೆ ಯೆಹೂದ್ಯರು--ನೀನು ಈ ಮನುಷ್ಯನನ್ನು ಹೋಗಗೊಡಿಸಿದರೆ ಕೈಸರನಿಗೆ ಸ್ನೇಹಿತನಲ್ಲ; ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳು ವವನು ಕೈಸರನಿಗೆ ವಿರೋಧವಾಗಿ ಮಾತನಾಡುತ್ತಾನೆ ಎಂದು ಕೂಗಿ ಹೇಳಿದರು.