Home Bibles ಅಪೋಸ್ತಲರ ಕೃತ್ಯಗಳು 17:6 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 17:6 · ಕನ್ನಡ ಬೈಬಲ್

ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಪಟ್ಟಣದ ಅಧಿಕಾರಿ ಗಳ ಬಳಿಗೆ ಎಳಕೊಂಡು ಹೋಗಿ--ಲೋಕವನ್ನು ತಲೆಕೆಳಗೆ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ;

Cross references

ನಿರ್ಗಮಕಾಂಡ 3:8

ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.

1 ಅರಸುಗಳು 18:17

ಅಹಾಬನು ಎಲೀಯನನ್ನು ನೋಡಿದಾಗ ಅವನಿಗೆ--ಇಸ್ರಾಯೇಲ್ಯರನ್ನು ಕಳವಳ ಗೊಳಿಸುವವನು ನೀನಲ್ಲವೋ ಅಂದನು.

ಯೆರೆಮಿಯ 38:2

ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು.

ಆಮೋಸ 7:10

ಆಗ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ-- ಆಮೋಸನು ಇಸ್ರಾಯೇಲಿನ ಮನೆತನದವರ ಮಧ್ಯ ದಲ್ಲಿ ನಿನಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ. ದೇಶವು ಅವನ ಎಲ್ಲಾ ಮಾತುಗಳನ್ನು ತಾಳಲಾರದು.

ಮತ್ತಾಯ 24:14

ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವದು; ತರುವಾಯ ಅಂತ್ಯಬರುವದು.

ಲೂಕ 23:5

ಅದಕ್ಕೆ ಅವರು ಹೆಚ್ಚು ಉಗ್ರತೆಯಿಂದ--ಈತನು ಗಲಿಲಾಯ ಮೊದಲುಗೊಂಡು ಈ ಸ್ಥಳದ ವರೆಗೂ ಎಲ್ಲಾ ಯೂದಾ ಯದಲ್ಲಿ ಬೋಧಿಸುತ್ತಾ ಜನರನ್ನು ರೇಗಿಸುತ್ತಾನೆ ಎಂದು ಹೇಳಿದರು.

ಅಪೋಸ್ತಲರ ಕೃತ್ಯಗಳು 6:12

ಇನ್ನೂ ಅವರು ಜನರನ್ನೂ ಹಿರಿಯರನ್ನೂ ಶಾಸ್ತ್ರಿ ಗಳನ್ನೂ ರೇಗಿಸಿದ್ದಲ್ಲದೆ ಬಂದು ಅವನನ್ನು ಹಿಡಿದು ಆಲೋಚನಾಸಭೆಗೆ ತೆಗೆದುಕೊಂಡು ಹೋಗಿ

ಅಪೋಸ್ತಲರ ಕೃತ್ಯಗಳು 16:19

ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ತಪ್ಪಿತಲ್ಲಾ ಎಂದು ತಿಳಿದು ಪೌಲನನ್ನೂ ಸೀಲನನ್ನೂ ಹಿಡಿದು ಸಂತೆಯ ಸ್ಥಳಕ್ಕೆ ಅಧಿಕಾರಿಗಳ ಬಳಿಗೆ ಎಳ ಕೊಂಡು ಹೋದರು.

ಅಪೋಸ್ತಲರ ಕೃತ್ಯಗಳು 18:12

ಗಲ್ಲಿಯೋನನು ಅಖಾಯದ ಪ್ರತಿನಿಧಿ ಯಾಗಿದ್ದಾಗ ಯೆಹೂದ್ಯರು ಒಮ್ಮನಸ್ಸಿನಿಂದ ಪೌಲನಿಗೆ ವಿರೋಧವಾಗಿ ಧಂಗೆ ಎಬ್ಬಿಸಿ ನ್ಯಾಯಸ್ಥಾನದ ಮುಂದೆ ಹಿಡುಕೊಂಡು ಬಂದು--

ಅಪೋಸ್ತಲರ ಕೃತ್ಯಗಳು 21:28

ಇಸ್ರಾಯೇಲ್‌ ಜನರೇ, ಸಹಾಯ ಮಾಡಿರಿ; ಎಲ್ಲಾ ಕಡೆಯಲ್ಲಿ ಜನರಿಗೂ ಈ ನ್ಯಾಯ ಪ್ರಮಾಣಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲರಿಗೂ ಬೋಧಿಸುತ್ತಿದ್ದವನು ಈ ಮನುಷ್ಯನೇ; ಇದಲ್ಲದೆ ಗ್ರೀಕರನ್ನು ಸಹ ಈ ದೇವಾಲಯದೊಳಗೆ ಕರೆದು ಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆ ಮಾಡಿದ್ದಾನೆ ಎಂದು ಕೂಗಿ

ಅಪೋಸ್ತಲರ ಕೃತ್ಯಗಳು 22:22

ಈ ಮಾತಿನತನಕ ಅವನು ಹೇಳಿದ್ದನ್ನು ಅವರು ಕೇಳಿ ತಮ್ಮ ಧ್ವನಿಗಳನ್ನೆತ್ತಿ--ಇಂಥವನನ್ನು ಭೂಮಿ ಯಿಂದ ತೆಗೆದುಹಾಕಿರಿ; ಇವನು ಜೀವಿಸುವದು ಯುಕ್ತವಲ್ಲ ಎಂದು ಕೂಗಿದರು.

ಅಪೋಸ್ತಲರ ಕೃತ್ಯಗಳು 24:5

ಯಾಕಂದರೆ ಇವನು ಉಪದ್ರವ ಕೊಡುವವನೂ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವ ಎಲ್ಲಾ ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವನೂ ನಜರೇತಿನ ಪಂಗಡದವರ ಮುಖಂ ಡನೂ ಎಂದು ನಾವು ಕಂಡೆವು.

ಅಪೋಸ್ತಲರ ಕೃತ್ಯಗಳು 28:22

ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು.

Interlinear

Choose Theme