Home Bibles ☰ Books ಯೋಬ 33:21 · ಕನ್ನಡ ಬೈಬಲ್
ಯೋಬ 33:21 · ಕನ್ನಡ ಬೈಬಲ್

ಅವನ ಶರೀರವು ಕಾಣದ ಹಾಗೆ ಸವೆಯುತ್ತದೆ; ಕಾಣದಿದ್ದ ಅವನ ಎಲುಬುಗಳು ಬೈಲಾಗುತ್ತವೆ.

Cross references

ಯೋಬ 7:5

ನನ್ನ ಮಾಂಸವು ಹುಳಗಳನ್ನೂ ಮಣ್ಣಿನ ಹೆಂಟೆಯನ್ನೂ ಧರಿಸಿಕೊಂಡಿದೆ. ನನ್ನ ಚರ್ಮವು ಒಡೆದು ಅಸಹ್ಯವಾಗಿದೆ.

ಯೋಬ 13:28

ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.

ಯೋಬ 14:20

ನೀನು ಅವನಿಗೆ ನಿತ್ಯಕ್ಕೂ ಮೇಲುಗೈ ಆಗಿರುವಿ; ಅವನು ಹೊರಟು ಹೋಗುವನು; ಅವನ ಮುಖಭಾವವನ್ನು ಮಾರ್ಪಡಿಸಿ ಅವನನ್ನು ಕಳುಹಿಸಿ ಬಿಡುತ್ತೀ.

ಯೋಬ 14:22

ಆದರೆ ಅವನ ಮೇಲಿರುವ ಮಾಂಸವು ನೋಯುವದು; ಅವನಲ್ಲಿರುವ ಅವನ ಆತ್ಮವು ದುಃಖಪಡುವದು.

ಯೋಬ 16:8

ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ.

ಯೋಬ 19:20

ನನ್ನ ಚರ್ಮಕ್ಕೂ ನನ್ನ ಮಾಂಸಕ್ಕೂ ನನ್ನ ಎಲುಬು ಅಂಟುತ್ತದೆ; ನನ್ನ ಹಲ್ಲುಗಳ ತೊಗಲಿ ನೊಂದಿಗೆ ತಪ್ಪಿಸಿಕೊಂಡೆನು.

ಕೀರ್ತನೆಗಳು 22:15

ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ.

ಕೀರ್ತನೆಗಳು 32:3

ನಾನು ಮೌನವಾಗಿದ್ದಾಗ ದಿನವೆಲ್ಲಾ ನರಳುವದ ರಿಂದ ನನ್ನ ಎಲುಬುಗಳು ಸವೆದು ಹೋದವು.

ಕೀರ್ತನೆಗಳು 39:11

ಅಕ್ರಮ ಕ್ಕೋಸ್ಕರ ಗದರಿಕೆಗಳಿಂದ ನೀನು ಮನುಷ್ಯನನ್ನು ಶಿಕ್ಷಿಸಿದರೆ ಅವನ ಸೌಂದರ್ಯವನ್ನು ನುಸಿಯ ಹಾಗೆ ಹಾಳುಮಾಡುತ್ತೀ; ನಿಶ್ಚಯವಾಗಿ ಪ್ರತಿ ಮನುಷ್ಯನು ವ್ಯರ್ಥವಾದವನೇ--ಸೆಲಾ.

ಕೀರ್ತನೆಗಳು 102:3

ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ.

ಸಾಮೇತಿಗಳು 5:11

ನಿನ್ನ ಮಾಂಸವೂ ದೇಹವೂ ಕ್ಷೀಣಿಸಿದಾಗ ನೀನು ಕೊನೆಯಲ್ಲಿ ಶೋಕಿಸುತ್ತಾ--

Interlinear

Choose Theme