Home Bibles ☰ Books ಯೋಬ 7:5 · ಕನ್ನಡ ಬೈಬಲ್
ಯೋಬ 7:5 · ಕನ್ನಡ ಬೈಬಲ್

ನನ್ನ ಮಾಂಸವು ಹುಳಗಳನ್ನೂ ಮಣ್ಣಿನ ಹೆಂಟೆಯನ್ನೂ ಧರಿಸಿಕೊಂಡಿದೆ. ನನ್ನ ಚರ್ಮವು ಒಡೆದು ಅಸಹ್ಯವಾಗಿದೆ.

Cross references

ಯೋಬ 2:7

ಆಗ ಸೈತಾನನು ಕರ್ತನ ಸಮ್ಮುಖ ದಿಂದ ಹೊರಟು ಯೋಬನಿಗೆ ಅಂಗಾಲಿನಿಂದ ನೆತ್ತಿಯ ವರೆಗೆ ಕೆಟ್ಟ ಹುಣ್ಣುಗಳು ಬರುವ ಹಾಗೆ ಅವನನ್ನು ಹೊಡೆದನು.

ಯೋಬ 9:31

ನನ್ನನ್ನು ಕುಣಿಯಲ್ಲಿ ಮುಣುಗಿಸಿ ಬಿಡುವಿ; ನನ್ನ ಸ್ವಂತ ವಸ್ತ್ರಗಳು ನನ್ನನ್ನು ಹೇಸಿಕೊಳ್ಳು ವವು.

ಯೋಬ 13:28

ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.

ಯೋಬ 17:7

ನನ್ನ ಕಣ್ಣು ದುಃಖದಿಂದ ಮೊಬ್ಬಾಯಿತು; ನನ್ನ ಅಂಗಗಳೆಲ್ಲಾ ನೆರಳಿನ ಹಾಗೆ ಅವೆ.

ಯೋಬ 17:14

ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು.

ಯೋಬ 19:20

ನನ್ನ ಚರ್ಮಕ್ಕೂ ನನ್ನ ಮಾಂಸಕ್ಕೂ ನನ್ನ ಎಲುಬು ಅಂಟುತ್ತದೆ; ನನ್ನ ಹಲ್ಲುಗಳ ತೊಗಲಿ ನೊಂದಿಗೆ ತಪ್ಪಿಸಿಕೊಂಡೆನು.

ಯೋಬ 19:26

ನನ್ನ ಚರ್ಮದ ಹುಳಗಳು ಈ ದೇಹ ವನ್ನು ನಾಶಪಡಿಸಿದಾಗ್ಯೂ ನಾನು ನನ್ನ ಶರೀರದಿಂದ ದೇವರನ್ನು ನೋಡುವೆನು.

ಯೋಬ 24:20

ಗರ್ಭವು ಅವನನ್ನು ಮರೆತುಬಿಡುವದು; ಹುಳವು ಅವನಲ್ಲಿ ಸವಿ ಊಟ ಹೊಂದುವದು; ಇನ್ನು ಅವನ ನೆನಪು ಇರುವದಿಲ್ಲ; ಮರದ ಹಾಗೆ ಅನ್ಯಾಯವು ಮುರಿಯಲ್ಪಡುವದು.

ಯೋಬ 30:18

ನನ್ನ ರೋಗದ ಮಹಾ ಶಕ್ತಿಯಿಂದ ನನ್ನ ವಸ್ತ್ರವು ಬದಲಾಗುತ್ತದೆ; ಅದು ನನ್ನ ಅಂಗಿಯ ಹಾಗೆ ನನ್ನನ್ನು ಬಂಧಿಸುತ್ತದೆ.

ಕೀರ್ತನೆಗಳು 38:5

ನನ್ನ ಬಾಸುಂಡೆಗಳು ನನ್ನ ಮೂಢತ್ವದ ನಿಮಿತ್ತ ನಾರುತ್ತಾ ಕೀವು ತುಂಬಿ ಅವೆ.

ಕೀರ್ತನೆಗಳು 38:6

ನಾನು ಕುಗ್ಗಿದ್ದೇನೆ, ಬಹಳವಾಗಿ ಬೊಗ್ಗಿದ್ದೇನೆ; ದಿನವೆಲ್ಲಾ ದುಃಖವುಳ್ಳವನಾಗಿ ತಿರುಗಾಡುತ್ತೇನೆ.

ಯೆಶಾಯ 1:6

ಅಂಗಾ ಲಿನಿಂದ ನಡುನೆತ್ತಿಯ ವರೆಗೂ ಬಾಸುಂಡೆ ಪೆಟ್ಟು, ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ; ಅವುಗಳನ್ನು ಮುಚ್ಚಿಲ್ಲ, ಕಟ್ಟಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದುಮಾಡಿಲ್ಲ.

ಯೆಶಾಯ 14:11

ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ;

ಯೆಶಾಯ 66:24

ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹ ಮಾಡಿದ ಮನುಷ್ಯರ ಹೆಣಗಳನ್ನು ನೋಡುವರು; ಯಾಕಂದರೆ ಅವರ ಹುಳ ಸಾಯುವದಿಲ್ಲ; ಅವರ ಬೆಂಕಿ ಆರುವದಿಲ್ಲ; ಅವರು ಎಲ್ಲಾ ಮನುಷ್ಯರಿಗೆ ಹೇಸಿಕೆಯಾಗುವರು.

ಯೆಹೆಜ್ಕೇಲ 20:43

ಅಲ್ಲಿ ನೀವು ನಿಮ್ಮ ಮಾರ್ಗಗಳನ್ನು ಬಿಟ್ಟು ನೀವು ಯಾವ ಸಂಗತಿ ಗಳಿಂದ ಅಶುದ್ಧವಾಗಿದ್ದಿರೋ ಆ ನಿಮ್ಮ ಕ್ರಿಯೆಗಳನ್ನೆಲ್ಲಾ ಜ್ಞಾಪಕಮಾಡಿಕೊಳ್ಳುವಿರಿ; ನೀವು ಮಾಡಿದ ನಿಮ್ಮ ಎಲ್ಲಾ ಕೆಟ್ಟತನದ ನಿಮಿತ್ತವಾಗಿ ನಿಮ್ಮ ಸ್ವಂತ ದೃಷ್ಟಿ ಯಲ್ಲಿಯೇ ನೀವು ಅಸಹ್ಯರಾಗುವಿರಿ.

Interlinear

Choose Theme