ನೀನು ಅವನಿಗೆ ನಿತ್ಯಕ್ಕೂ ಮೇಲುಗೈ ಆಗಿರುವಿ; ಅವನು ಹೊರಟು ಹೋಗುವನು; ಅವನ ಮುಖಭಾವವನ್ನು ಮಾರ್ಪಡಿಸಿ ಅವನನ್ನು ಕಳುಹಿಸಿ ಬಿಡುತ್ತೀ.
Cross references
ಅವರು ದೂರದಿಂದ ತಮ್ಮ ಕಣ್ಣುಗಳನ್ನು ಎತ್ತಿದಾಗ ಅವನ ಗುರುತು ತಿಳಿಯದೆ ತಮ್ಮ ಸ್ವರವನ್ನೆತ್ತಿ ಅತ್ತು, ತಮ್ಮ ತಮ್ಮ ನಿಲುವಂಗಿಗಳನ್ನು ಹರಿದು, ತಮ್ಮ ತಲೆಯ ಮೇಲೆ ಧೂಳನ್ನೂ ಆಕಾಶದ ಕಡೆಗೆ ತೂರಿದರು.ಅವರು ಅವನ ಸಂಗಡ ಏಳು ಹಗಲು ಏಳು ರಾತ್ರಿ ನೆಲದ ಮೇಲೆ ಕೂತುಕೊಂಡರು. ಒಬ್ಬನಾದರೂ ಒಂದು ಮಾತನ್ನೂ ಅವನಿಗೆ ಹೇಳಲಿಲ್ಲ; ಯಾಕಂದರೆ ಅವನ ದುಃಖವು ಬಹಳ ಅಧಿಕವೆಂದು ನೋಡಿದರು.
ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ನನಗೆ ನೇಮಕ ಮಾಡಿದ ಸಮಯದ ದಿನಗಳೆಲ್ಲಾ ನನಗೆ ಬದಲು ಬರುವ ವರೆಗೆ ನಾನು ಕಾದುಕೊಂಡಿರುವೆನು.
ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ.
ಈಗ ಅವರ ರೂಪವು ಕಲ್ಲಿದ್ದಲಿಗಿಂತ ಕಪ್ಪಾಗಿದೆ, ಬೀದಿಗಳಲ್ಲಿ ಅವರು ಯಾರೆಂಬದು ತಿಳಿಯಲಿಲ್ಲ; ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ, ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.