ಅವನು ಜೇನೂ ಬೆಣ್ಣೆ ಹರಿಯುವ ಹಳ್ಳ ಗಳನ್ನೂ ನದಿಯನ್ನೂ ಕಾಲಿವೆಗಳನ್ನೂ ನೋಡನು.
Cross references
ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವದಿಲ್ಲ; ಇಲ್ಲವೆ ನನಗೆ ಕೋಪವನ್ನು ಎಬ್ಬಿಸಿದವರು ಸಹ ಅದನ್ನು ನೋಡು ವದಿಲ್ಲ.
ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು.
ಅವರೆಯನ್ನೂ ಹೆಸರನ್ನೂ ಹುರಿದ ಕಡಲೆಯನ್ನೂ ಜೇನು ತುಪ್ಪವನ್ನೂ ಬೆಣ್ಣೆಯನ್ನೂ ಕುರಿಗಳನ್ನೂ ಹಸುವಿನ ಗಿಣ್ಣದ ಗಡ್ಡೆಗಳನ್ನೂ ದಾವೀದನಿಗೂ ಅವನ ಸಂಗಡ ಲಿದ್ದ ಜನರಿಗೂ ತಿನ್ನುವದಕ್ಕೆ ತಂದರು. ಯಾಕಂದರೆ ಅರಣ್ಯದಲ್ಲಿ ಜನರು ಹಸಿದು ದಣಿದು ದಾಹವಾಗಿರು ವರೆಂದು ಅಂದುಕೊಂಡರು.
ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ -- ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೂ ಸಂಭವಿಸಲಾರದು ಅನ್ನಲು ಎಲೀಷನು ಅವನಿಗೆ ಈ ಕಾರ್ಯವನ್ನು ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನುವದಿಲ್ಲ ಅಂದನು.
ನನ್ನ ಹೆಜ್ಜೆಗಳನ್ನು ಬೆಣ್ಣೆ ಯಿಂದ ತೊಳೆಯುತ್ತಾ ಇದ್ದೆನು; ಬಂಡೆಯು ನನ್ನ ಬಳಿಯಲ್ಲಿ ಎಣ್ಣೆಯ ಪ್ರವಾಹಗಳನ್ನು ಹೊಯ್ಯುತ್ತಿತ್ತು.
ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
ಇದಲ್ಲದೆ ಆತನು ಉತ್ತಮವಾದ ಗೋಧಿ ಯಿಂದ ಅವರಿಗೆ ಊಟಕ್ಕೆ ಕೊಟ್ಟು ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವನು.
ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವ ಳಿಕೆಯು ಬರುವ ತನಕ ಬೆಣ್ಣೆ ಮತ್ತು ಜೇನನ್ನು ತಿನ್ನುವನು.
ಆಗ ಅವು ಸಮೃದ್ಧಿಯಾಗಿ ಹಾಲನ್ನು ಕೊಡುವದರಿಂದ ಅವನು ಬೆಣ್ಣೆಯನ್ನು ತಿನ್ನುವನು; ಆ ದೇಶದಲ್ಲಿ ಉಳಿದಿರುವ ವರೆಲ್ಲರೂ ಬೆಣ್ಣೆಯನ್ನು ಮತ್ತು ಜೇನು ತುಪ್ಪವನ್ನು ತಿನ್ನುವರು.
ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿ ಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು.
ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್ ದೇವ ರಾಗಿರುವ ನಾನು ಅವರನ್ನು ಕೈಬಿಡೆನು.
ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
ಅವನು--ತಂದೆಯಾದ ಅಬ್ರಹಾ ಮನೇ, ನನ್ನ ಮೇಲೆ ಕರುಣೆ ಇಟ್ಟು ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡುವಂತೆ ಅವನನ್ನು ಕಳುಹಿಸು; ಯಾಕಂದರೆ ನಾನು ಈ ಉರಿಯಲ್ಲಿ ಯಾತನೆಪಡುತ್ತಾ ಇದ್ದೇನೆ ಎಂದು ಕೂಗಿ ಹೇಳಿದನು.
ಆಮೇಲೆ ಅವನು ಸ್ಫಟಿಕದಂತೆ ಸ್ವಚ್ಛವಾದ ಮತ್ತು ಶುದ್ಧವಾದ ಜೀವಜಲದ ನದಿ ಯನ್ನು ನನಗೆ ತೋರಿಸಿದನು; ಅದು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಹೊರಡುವ ದಾಗಿತ್ತು.