ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
Cross references
ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ ಪಟ್ಟಣವನ್ನು ಹಿಡಿದು ಅದರಲ್ಲಿದ್ದ ಜನ ವನ್ನು ಕೊಂದು ಪಟ್ಟಣವನ್ನು ಕೆಡವಿಬಿಟ್ಟು ಅದರಲ್ಲಿ ಉಪ್ಪು ಎರಚಿಬಿಟ್ಟನು.
ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ -- ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೂ ಸಂಭವಿಸಲಾರದು ಅನ್ನಲು ಎಲೀಷನು ಅವನಿಗೆ ಈ ಕಾರ್ಯವನ್ನು ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನುವದಿಲ್ಲ ಅಂದನು.
ಆ ಅಧಿಕಾರಿ ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ--ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ ಹಾಗಾ ಗುವದೋ ಅಂದನು; ಅದಕ್ಕವನು--ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನು ವದಿಲ್ಲ ಎಂದು ಹೇಳಿದ್ದನು.ಆ ಪ್ರಕಾರವೇ ಅವನಿಗೆ ಸಂಭವಿಸಿತು; ಏನಂದರೆ ಬಾಗಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಸತ್ತನು.
ಕೆಸರಿಲ್ಲದೆ ಆಪು ಬೆಳೆಯುವದೋ? ನೀರಿಲ್ಲದೆ ಜಂಬು ಬೆಳೆಯುವದೋ?
ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ.
ಅವನು ಜೇನೂ ಬೆಣ್ಣೆ ಹರಿಯುವ ಹಳ್ಳ ಗಳನ್ನೂ ನದಿಯನ್ನೂ ಕಾಲಿವೆಗಳನ್ನೂ ನೋಡನು.
ಅರಣ್ಯವನ್ನು ಅದರ ಮನೆಯಾಗಿಯೂ ಉಪ್ಪಿನ ಬೈಲನ್ನು ಅದರ ವಾಸಸ್ಥಳವಾಗಿಯೂ ನೇಮಿಸಿ ದ್ದೇನಲ್ಲಾ.
ಭಕ್ತಿಹೀನರು ಹಾಗಲ್ಲ, ಅವರು ಗಾಳಿ ಬಡು ಕೊಂಡು ಹೋಗುವ ಹೊಟ್ಟಿನ ಹಾಗೆ ಇದ್ದಾರೆ.
ದುಷ್ಟರು ಚಿಗುರುವದು ಮತ್ತು ಅಕ್ರಮಗಾರರು ವೃದ್ಧಿಯಾಗು ವದು ಅವರು ಎಂದೆಂದಿಗೂ ನಿರ್ಮೂಲವಾಗುವದ ಕ್ಕಾಗಿಯೇ.
ಕೀಳುವದಕ್ಕಿಂತ ಮುಂಚೆ ಒಣಗಿ ಹೋಗುವ ಮಾಳಿಗೇ ಹುಲ್ಲಿನ ಹಾಗೆ ಅವರು ಇರಲಿ.
ನೀವು ಎಲೆ ಬಾಡಿದ ಏಲಾಮರದಂತೆಯೂ ನೀರಿಲ್ಲದ ತೋಟದಂತೆಯೂ ಇರುವಿರಿ.ನಿಮ್ಮಲ್ಲಿನ ಬಲಿಷ್ಠನೇ ಸಣಬಿನ ನಾರು, ಅದನ್ನು ಮಾಡುವವನು ಕಿಡಿ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.
ಆದರೆ ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನೆಂದು ಕರ್ತನು ಅನ್ನುತ್ತಾನೆ.
ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಸ್ವಸ್ಥವಾಗುವದಿಲ್ಲ, ಅವು ಉಪ್ಪಿಗೆ ಒಪ್ಪಿಸಲ್ಪಡುವವು.
ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು.