ಅವನಿಗೆ ಹೇಳಿದ್ದೇ ನಂದರೆ--ಅಮ್ಮೋನ್ಯನ ಮಕ್ಕಳ ಅರಸನಾದ ಬಾಲೀ ಸನು ನಿನ್ನನ್ನು ಕೊಂದುಹಾಕುವದಕ್ಕೆ ನೆತನ್ಯನ ಮಗ ನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆಂದು ನಿನಗೆ ತಿಳಿದದೆಯೋ? ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.
Cross references
ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ ಶಾಫಾನನ ಮಗನಾದ ಅಹೀಕಾಮ್‌ನಿಗೂ ವಿಾಕಾ ಯನ ಮಗನಾದ ಅಕ್ಬೋರ್‌ನಿಗೂ ಲೇಖಕನಾದ ಶಾಫಾನನಿಗೂ ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ ಹೇಳಿದ್ದೇನಂದರೆ--
ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತಾನು ಯೆಹೂದ ದೇಶದಲ್ಲಿ ಉಳಿಸಿದ ಜನರ ಮೇಲೆ ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆದ ಗೆದಲ್ಯನನ್ನು ಅಧಿಪತಿಯಾಗಿ ಮಾಡಿದನು.
ಆತನ ವಾಕ್ಯವು ಬರುವ ವರೆಗೆ ಕರ್ತನ ಮಾತು ಅವನನ್ನು ಪುಟಕ್ಕೆ ಹಾಕಿತು.
ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ.
ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--
ಹೀಗೆ ಕಾವಲು ದಂಡಿನ ಅಧಿಪತಿ ಯಾದ ನೆಬೂಜರದಾನನನ್ನೂ ನೆಬೂಷಜ್ಬಾನನನ್ನೂ ರಬ್‌ಶೇರಿಸ್‌ನನ್ನೂ ನೇರ್ಗಲ್‌ಸರೇಚರನನ್ನೂ ರಬ್ಮಾಗ ನನ್ನೂ ಬಾಬೆಲಿನ ಅರಸನ ಪ್ರಧಾನರೆಲ್ಲರನ್ನೂ ಕಳುಹಿಸಿದನು.
ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಪದಲ್ಲಿ ರಹಸ್ಯವಾಗಿ ಗೆದಲ್ಯನ ಸಂಗಡಮಾತನಾಡಿ ಹೇಳಿದ್ದೇನಂದರೆ-- ನನ್ನನ್ನು ಹೋಗಗೊಡಿಸು, ನಾನು ನೆತನ್ಯನ ಮಗನಾದ ಇಷ್ಮಾಯೇಲನನ್ನು ಯಾರಿಗೂ ತಿಳಿಯದ ಹಾಗೆ ಕೊಂದುಹಾಕುತ್ತೇನೆ; ಅವನು ನಿನ್ನನ್ನು ಕೊಂದರೆ ನಿನ್ನ ಬಳಿಗೆ ಕೂಡಿಕೊಳ್ಳುವ ಯೆಹೂದ್ಯರೆಲ್ಲರೂ ಚದರಿ ಹೋಗಿ ಯೆಹೂದದಲ್ಲಿ ಉಳಿದವರು ನಾಶವಾಗು ತ್ತಾರಲ್ಲಾ, ಯಾಕೆ ಹೀಗೆ ಆಗಬೇಕು ಎಂದು ವಿಜ್ಞಾಪಿಸಿ ದನು.ಆದರೆ ಅಹೀಕಾಮನ ಮಗನಾದ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ--ಈ ಕೆಲಸ ಮಾಡಬೇಡ, ನೀನು ಇಷ್ಮಾಯೇಲನ ವಿಷಯವಾಗಿ ಸುಳ್ಳಾಗಿ ಮಾತನಾಡುತ್ತೀ ಅಂದನು.
ಏಳನೇ ತಿಂಗಳಲ್ಲಿ ಆದದ್ದೇನಂದರೆ--ಅರಸನ ಸಂತಾನದವನೂ ಅರಸನ ಪ್ರಧಾನರಲ್ಲಿ ಒಬ್ಬನೂ ಆದಂಥ ಎಲೀಷಾಮನ ಮಗನಾದ ನೆತನ್ಯನ ಮಗನಾದ ಇಷ್ಮಾಯೇಲನೂ ಅವನ ಸಂಗಡ ಹತ್ತು ಮಂದಿ ಮನುಷ್ಯರೂ ಅಹೀಕಾ ಮನ ಮಗನಾದ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಬಂದರು; ಅವರು ಅಲ್ಲಿ ಮಿಚ್ಪದಲ್ಲಿಯೇ ಊಟಮಾಡಿದರು.
ಆಗ ಆದದ್ದೇನಂದರೆ--ಅವರು ಪಟ್ಟಣದ ಮಧ್ಯಕ್ಕೆ ಬಂದಾಗ ನೆತನ್ಯನ ಮಗನಾದ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು ಕುಣಿಯೊಳಗೆ ಹಾಕಿಬಿಟ್ಟರು.