ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಪದಲ್ಲಿ ರಹಸ್ಯವಾಗಿ ಗೆದಲ್ಯನ ಸಂಗಡಮಾತನಾಡಿ ಹೇಳಿದ್ದೇನಂದರೆ-- ನನ್ನನ್ನು ಹೋಗಗೊಡಿಸು, ನಾನು ನೆತನ್ಯನ ಮಗನಾದ ಇಷ್ಮಾಯೇಲನನ್ನು ಯಾರಿಗೂ ತಿಳಿಯದ ಹಾಗೆ ಕೊಂದುಹಾಕುತ್ತೇನೆ; ಅವನು ನಿನ್ನನ್ನು ಕೊಂದರೆ ನಿನ್ನ ಬಳಿಗೆ ಕೂಡಿಕೊಳ್ಳುವ ಯೆಹೂದ್ಯರೆಲ್ಲರೂ ಚದರಿ ಹೋಗಿ ಯೆಹೂದದಲ್ಲಿ ಉಳಿದವರು ನಾಶವಾಗು ತ್ತಾರಲ್ಲಾ, ಯಾಕೆ ಹೀಗೆ ಆಗಬೇಕು ಎಂದು ವಿಜ್ಞಾಪಿಸಿ ದನು.ಆದರೆ ಅಹೀಕಾಮನ ಮಗನಾದ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ--ಈ ಕೆಲಸ ಮಾಡಬೇಡ, ನೀನು ಇಷ್ಮಾಯೇಲನ ವಿಷಯವಾಗಿ ಸುಳ್ಳಾಗಿ ಮಾತನಾಡುತ್ತೀ ಅಂದನು.
Cross references
ಇದಲ್ಲದೆ ಯೆರೆವಿಾಯನು ಇನ್ನೂ ಸೆರೆಮನೆಯ ಅಂಗಳದಲ್ಲಿ ಮುಚ್ಚಲ್ಪಟ್ಟಿರು ವಾಗ ಕರ್ತನ ವಾಕ್ಯವು ಎರಡನೇ ಸಾರಿ ಉಂಟಾಯಿತು.
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಅರಸನಾಗಿ ಇಟ್ಟ ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದ ಲಾಗಿ ಯೋಷೀಯನ ಮಗನಾದ ಚಿದ್ಕೀಯನು ಅರಸ ನಾಗಿ ಆಳಿದನು.
ಆಗ ಯೆರೆವಿಾಯನು ಚಿದ್ಕೀಯನಿಗೆ--ನಾನು ನಿನಗೆ ತಿಳಿಸಿದರೆ ನೀನು ನನ್ನನ್ನು ನಿಶ್ಚಯವಾಗಿ ಕೊಂದು ಹಾಕುವದಿಲ್ಲವೋ? ನಾನು ನಿನಗೆ ಆಲೋಚನೆ ಹೇಳಿದರೆ ನೀನು ಕೇಳುವದಿಲ್ಲ ಅಂದನು.
ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--
ಅವನಿಗೆ ಹೇಳಿದ್ದೇ ನಂದರೆ--ಅಮ್ಮೋನ್ಯನ ಮಕ್ಕಳ ಅರಸನಾದ ಬಾಲೀ ಸನು ನಿನ್ನನ್ನು ಕೊಂದುಹಾಕುವದಕ್ಕೆ ನೆತನ್ಯನ ಮಗ ನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆಂದು ನಿನಗೆ ತಿಳಿದದೆಯೋ? ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.
ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.