Home Bibles ಯೆಶಾಯ 60:10 · ಕನ್ನಡ ಬೈಬಲ್
ಯೆಶಾಯ 60:10 · ಕನ್ನಡ ಬೈಬಲ್

ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು.

Cross references

ಎಜ್ರಾ 6:3

ಅರಸನಾದ ಕೋರೆಷನ ಮೊದಲನೇ ವರುಷ ದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನಲ್ಲಿ ರುವ ದೇವರ ಆಲಯಕ್ಕೋಸ್ಕರ ಕೊಟ್ಟ ಅಪ್ಪಣೆ ಏನಂದರೆ--ಅವರು ಬಲಿಗಳನ್ನು ಅರ್ಪಿಸಿದ ಸ್ಥಳವಾದ ಆಲಯವು ಕಟ್ಟಲ್ಪಡಲಿ. ಅದರ ಅಸ್ತಿವಾರಗಳು ಬಲ ವಾಗಿ ಹಾಕಲ್ಪಡಲಿ; ಅದರ ಎತ್ತರ ಅರುವತ್ತು ಮೊಳ ಅದರ ಅಗಲ ಅರುವತ್ತು ಮೊಳ ಆಗಿರಲಿ;

ಎಜ್ರಾ 7:12

ಅರಸರಿಗೆ ಅರಸನಾದ ಅರ್ತಷಸ್ತನು ಪರಲೋಕದ ದೇವರ ನ್ಯಾಯಪ್ರಮಾಣ ವಿಷಯ ಶಾಸ್ತ್ರಿ ಯಾದ ಎಜ್ರನೆಂಬ ಯಾಜಕನಿಗೆ ಪೂರ್ಣ ಸಮಾಧಾನ ವಾಗಲಿ.

ನೆಹೆಮ್ಯ 2:7

ಇದಲ್ಲದೆ ನಾನು ಅರಸನಿಗೆ--ಅರಸನಿಗೆ ಸಮ್ಮತಿಸಿದರೆ ನಾನು ಯೆಹೂದಕ್ಕೆ ಹೋಗಿ ಸೇರುವ ತನಕ ನದಿಯ ಆಚೆಯಲ್ಲಿ ಇರುವ ಅಧಿಪತಿಗಳು ನನ್ನನ್ನು ಸಾಗಕಳುಹಿಸುವ ಹಾಗೆ ಅವರಿಗೋಸ್ಕರ ನನಗೆ ಪತ್ರಗಳು ಕೊಡಲ್ಪಡಲಿ.

ಕೀರ್ತನೆಗಳು 30:5

ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.

ಯೆಶಾಯ 12:1

ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.

ಯೆಶಾಯ 14:1

ಕರ್ತನು ಯಾಕೋಬ್ಯರನ್ನು ಕರುಣಿಸಿ ಮತ್ತೆ (ಇನ್ನೂ) ಇಸ್ರಾಯೇಲ್ಯರನ್ನು ಆದುಕೊಂಡು ಅವರನ್ನು ತಮ್ಮ ಸ್ವಂತ ದೇಶದಲ್ಲಿ ಸೇರಿಸಬೇಕೆಂದಿದ್ದಾನೆ. ಅನ್ಯರು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.

ಯೆಶಾಯ 49:23

ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.

ಯೆಶಾಯ 54:7

ಕ್ಷಣ ಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ; ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.

ಯೆಶಾಯ 54:8

ರೌದ್ರವೇರಿದಾಗ ನನ್ನ ಮುಖವನ್ನು ನಿನಗೆ ಕ್ಷಣ ಮಾತ್ರವೇ ಮರೆಮಾಡಿಕೊಂಡೆನು; ಆದರೆ ನಿರಂತರ ವಾದ ದಯದಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿ ದ್ದೇನೆ ಎಂದು ನಿನ್ನ ವಿಮೋಚಕನಾದ ಕರ್ತನು ಹೇಳು ತ್ತಾನೆ.

ಯೆಶಾಯ 57:17

ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪ ಗೊಂಡು ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತ ನಾದೆನು; ಅವನು ಮೊಂಡತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.

ಯೆಶಾಯ 60:3

ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು.

ಯೆಶಾಯ 61:5

ಇದಲ್ಲದೆ ಅನ್ಯರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು; ಪರರ ಪುತ್ರರು ನಿಮಗೆ ನೇಗಿಲು ಹೂಡುವವರೂ ದ್ರಾಕ್ಷೇತೋಟ ಕಾಯುವವರೂ ಆಗಿರುವರು.

ಯೆಶಾಯ 66:21

ಅವರಲ್ಲಿ ಯಾಜಕರಿಗಾಗಿಯೂ ಲೇವಿಯರಿಗಾ ಗಿಯೂ ಅವರಿಂದ ತಕ್ಕೊಳ್ಳುವೆನೆಂದು ಕರ್ತನು ಹೇಳುತ್ತಾನೆ.

ಜೆಕರ್ಯ 6:15

ದೂರವಾದವರು ಬಂದು ಕರ್ತನ ದೇವಾ ಲಯವನ್ನು ಕಟ್ಟುವರು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ; ನೀವು ನಿಮ್ಮ ದೇವರಾದ ಕರ್ತನ ಶಬ್ದಕ್ಕೆ ಜಾಗ್ರತೆಯಾಗಿ ಕಿವಿಗೊಟ್ಟರೆ ಇದು ನೆರವೇರುವದು.

ಪ್ರಕಟನೆ 21:24

ರಕ್ಷಿಸಲ್ಪಟ್ಟ ಜನಾಂಗದವರು ಅದರ ಬೆಳಕಿನಲಿ ನಡೆಯುವರು; ಭೂರಾಜರು ತಮ್ಮ ವೈಭವವನ್ನೂ ಘನವನ್ನೂ ಅಲ್ಲಿಗೆ ತರುವರು.

ಪ್ರಕಟನೆ 21:26

ಅವರು ಜನಾಂಗಗಳ ವೈಭವ ವನ್ನೂ ಘನವನ್ನೂ ಅಲ್ಲಿಗೆ ತರುವರು.ಅದರಲ್ಲಿ ಹೊಲೆ ಮಾಡುವಂಥದ್ದು ಯಾವದೂ ಸೇರುವದಿಲ್ಲ. ಅಸಹ್ಯವಾದದ್ದನ್ನೂ ಸುಳ್ಳಾದದ್ದನ್ನೂ ನಡಿಸುವವನು ಅಲ್ಲಿ ಸೇರುವದಿಲ್ಲ. ಆದರೆ ಕುರಿಮರಿಯಾದಾತನ ಜೀವಗ್ರಂಥದಲ್ಲಿ ಬರೆಯಲ್ಪಟ್ಟವರು ಮಾತ್ರ ಸೇರುವರು.

Interlinear

Choose Theme