Home Bibles ನೆಹೆಮ್ಯ 2:7 · ಕನ್ನಡ ಬೈಬಲ್
ನೆಹೆಮ್ಯ 2:7 · ಕನ್ನಡ ಬೈಬಲ್

ಇದಲ್ಲದೆ ನಾನು ಅರಸನಿಗೆ--ಅರಸನಿಗೆ ಸಮ್ಮತಿಸಿದರೆ ನಾನು ಯೆಹೂದಕ್ಕೆ ಹೋಗಿ ಸೇರುವ ತನಕ ನದಿಯ ಆಚೆಯಲ್ಲಿ ಇರುವ ಅಧಿಪತಿಗಳು ನನ್ನನ್ನು ಸಾಗಕಳುಹಿಸುವ ಹಾಗೆ ಅವರಿಗೋಸ್ಕರ ನನಗೆ ಪತ್ರಗಳು ಕೊಡಲ್ಪಡಲಿ.

Cross references

ಎಜ್ರಾ 6:6

ಆದಕಾರಣ ನದಿಯ ಆಚೆಯಲ್ಲಿರುವ ಅಧಿಪತಿ ಯಾದ ತತ್ತೆನೈಯನೇ, ಶೆತರ್ಬೋಜೆನೈಯೇ, ನದಿಯ ಆಚೆಯಲ್ಲಿರುವ ಅಪರ್ಸತ್ಕಾಯರಾದ ನಿಮ್ಮ ಜೊತೆ ಗಾರರು ಸಹ ಆ ಸ್ಥಳವನ್ನು ಬಿಟ್ಟು ದೂರವಾಗಿರ್ರಿ.

ಎಜ್ರಾ 7:21

ಇದಲ್ಲದೆ ಅರಸನಾಗಿರುವ ಆರ್ತಷಸ್ತನಾದ ನಾನು ನದಿಯ ಆಚೆಯಲ್ಲಿರುವ ಎಲ್ಲಾ ಬೊಕ್ಕಸದವ ರಿಗೆ ಕೊಡುವ ಅಪ್ಪಣೆ ಏನಂದರೆ--

ಎಜ್ರಾ 8:22

ಯಾಕಂದರೆ ಆತನನ್ನು ಹುಡುಕುವವರೆಲ್ಲರ ಮೇಲೆ ಒಳ್ಳೇದಾಗುವದಕ್ಕೆ ನಮ್ಮ ದೇವರ ಹಸ್ತ ಉಂಟು. ಆದರೆ ಆತನನ್ನು ಬಿಟ್ಟುಬಿಡುವವರ ಮೇಲೆ ಆತನ ಬಲವೂ ಆತನ ಕೋಪವೂ ಉಂಟು ಎಂದು ನಾವು ಅರಸನಿಗೆ ಹೇಳಿದ್ದರಿಂದ ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಕಾಲ್ಬಲ ವನ್ನೂ ರಾಹುತರನ್ನೂ ಅರಸನಿಂದ ಕೇಳಲು ನಾಚಿಕೆ ಪಟ್ಟೆವು.

ಎಜ್ರಾ 8:36

ಅವರು ಅರಸನ ಆಜ್ಞೆಗಳನ್ನು ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ ಯಜಮಾ ನರಿಗೂ ಒಪ್ಪಿಸಿದರು. ಆಗ ಅವರ ಜನರಿಗೂ ದೇವರ ಆಲಯಕ್ಕೂ ಸಹಾಯಮಾಡಿದರು.

ನೆಹೆಮ್ಯ 2:9

ಆಗ ನಾನು ನದಿಯ ಆಚೆಯಲ್ಲಿರುವ ಅಧಿಪತಿಗಳ ಬಳಿಗೆ ಬಂದು ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು. ಅರಸನು ನನ್ನ ಸಂಗಡ ಸೈನ್ಯಾಧಿಪತಿಗಳನ್ನೂ ಕುದುರೆ ಸವಾರರನ್ನೂ ಕಳುಹಿಸಿದನು.

Interlinear

Choose Theme