ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ.
Cross references
ಆದಕಾರಣ ಸಬ್ಬತ್ ಆಗುವದಕ್ಕಿಂತ ಮುಂಚೆ ಯೆರೂಸಲೇಮಿನ ಬಾಗಲು ಗಳಲ್ಲಿ ಕತ್ತಲು ಆಗಲಾರಂಭಿಸಿದಾಗ ಬಾಗಲುಗಳನ್ನು ಹಾಕುವ ಹಾಗೆಯೂ ಸಬ್ಬತ್ ದಿವಸವು ತೀರುವ ವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಮತ್ತು ಸಬ್ಬತ್ ದಿವಸದಲ್ಲಿ ಹೊರೆ ಏನಾದರೂ ಒಳಗೆ ತಾರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಲುಗಳ ಬಳಿಯಲ್ಲಿ ಇಟ್ಟೆನು.
ಅವರ ಅರಸುಗಳನ್ನು ಸಂಕೋಲೆಗಳಿಂದಲೂ ಅವರ ಘನವುಳ್ಳವರನ್ನು ಕಬ್ಬಿ ಣದ ಬೇಡಿಗಳಿಂದಲೂ ಬಂಧಿಸಲಿ;ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ.
ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.
ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು.
ಬಲಾತ್ಕಾರವೂ ನಿನ್ನ ದೇಶದೊಳಗೆ ಹಾಳಾದದ್ದೂ ನಾಶವೂ ನಿನ್ನ ಮೇರೆ ಗಳಲ್ಲಿ ಕೇಳಲ್ಪಡುವದಿಲ್ಲ; ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿ ಡುವಿ.
ಹಾದುಹೋಗಿರಿ, ಬಾಗಿಲುಗಳನ್ನು ಹಾದು ಹೋಗಿರಿ. ಜನರಿಗೆ ದಾರಿಯನ್ನು ಸಿದ್ಧಮಾಡಿರಿ; ಎತ್ತರ ಮಾಡಿರಿ, ರಾಜ ಮಾರ್ಗವನ್ನು ಎತ್ತರಮಾಡಿರಿ; ಕಲ್ಲುಗಳನ್ನು ಆಯ್ದು ಕೂಡಿಸಿರಿ; ಜನಗಳಿಗೋಸ್ಕರ ಧ್ವಜವನ್ನು ಎತ್ತಿರಿ.
ಅದರ ಹೆಬ್ಬಾಗಿಲು ಗಳನ್ನು ಹಗಲಿನಲ್ಲಿ ಮುಚ್ಚುವದೇ ಇಲ್ಲ. ಯಾಕಂದರೆ ರಾತ್ರಿಯು ಅಲ್ಲಿಲ್ಲ.