ನನ್ನ ದಿವಸಗಳು ಕಡಿಮೆ ಮಾಡಲ್ಪಟ್ಟದ್ದರಿಂದ ನಾನು ಪಾತಾಳದ ದ್ವಾರ ಗಳೊಳಗೆ ಹೋಗಬೇಕು ನನ್ನ ಆಯುಷ್ಯದಲ್ಲಿ ಮಿಕ್ಕಾ ದದ್ದು ನನಗೆ ತಪ್ಪಿಹೋಯಿತು ಎಂದು ಅಂದು ಕೊಂಡನು.
Cross references
ನಾನು ನಿರೀಕ್ಷಿಸುವ ಹಾಗೆ ನನ್ನ ಶಕ್ತಿ ಏನು? ನಾನು ನನ್ನ ಆಯುಷ್ಯವನ್ನು ಹೆಚ್ಚಿಸುವ ಹಾಗೆ ನನ್ನ ಅಂತ್ಯವೇನು?
ನನ್ನ ಜೀವವು ಗಾಳಿ ಯಂತಿದೆ ಎಂದು ಜ್ಞಾಪಕಮಾಡಿಕೋ, ನನ್ನ ಕಣ್ಣು ತಿರುಗಿ ಒಳ್ಳೆಯದನ್ನು ನೋಡದು.
ನನ್ನ ದಿವಸಗಳು ಹಾದು ಹೋದವು: ನನ್ನ ಹೃದ ಯಕ್ಕೆ ಸ್ವಂತವಾಗಿರುವ ನನ್ನ ಉದ್ದೇಶಗಳು ಭಂಗವಾ ದವು.
ಕರ್ತನ ಎಲ್ಲಾ ಪರಿಶುದ್ಧರೇ, ಆತನನ್ನು ಪ್ರೀತಿ ಮಾಡಿರಿ; ಕರ್ತನು ನಂಬಿಕೆಯುಳ್ಳವರನ್ನು ಕಾಯು ತ್ತಾನೆ; ಅಹಂಕಾರ ಮಾಡುವವನಿಗೆ ಬಹಳವಾಗಿ ಮುಯ್ಯಿಗೆಮುಯ್ಯಿ ತೀರಿಸುತ್ತಾನೆ.ಕರ್ತನಲ್ಲಿ ನಿರೀಕ್ಷಿ ಸುವವರೆಲ್ಲರೇ, ಧೈರ್ಯವಾಗಿರ್ರಿ; ಆತನು ನಿಮ್ಮ ಹೃದಯವನ್ನು ದೃಢಪಡಿಸುವನು.
ಓ ನನ್ನ ದೇವರೇ, ನನ್ನ ದಿವಸಗಳ ಮಧ್ಯದಲ್ಲಿ ನನ್ನನ್ನು ಒಯ್ಯಬೇಡ; ನಿನ್ನ ವರುಷಗಳು ತಲತಲಾಂತರಗಳಿಗೂ ಅವೆ ಅಂದೆನು.
ನೀನು ಪೂರ್ವಕಾಲದಲ್ಲಿ ಭೂಮಿ ಯನ್ನು ಸ್ಥಾಪಿಸಿದಿ; ಆಕಾಶಗಳು ನಿನ್ನ ಕೈ ಕೆಲಸಗಳಾ ಗಿವೆ.
ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ.
ಆ ಕಾಲದಲ್ಲಿ ಹಿಜ್ಕೀಯನು ರೋಗಿಯಾಗಿ ಸಾಯುವದಕ್ಕಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಹೇಳಿದನು.
ಆದರೆ ಮರಣವಾಗು ತ್ತದೆಂಬ ನಿರ್ಣಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವ ರಾಗಬೇಕೆಂದು ಹೀಗಾಯಿತು.