Home Bibles ಕೀರ್ತನೆಗಳು 31:23 · ಕನ್ನಡ ಬೈಬಲ್
ಕೀರ್ತನೆಗಳು 31:23 · ಕನ್ನಡ ಬೈಬಲ್

ಕರ್ತನ ಎಲ್ಲಾ ಪರಿಶುದ್ಧರೇ, ಆತನನ್ನು ಪ್ರೀತಿ ಮಾಡಿರಿ; ಕರ್ತನು ನಂಬಿಕೆಯುಳ್ಳವರನ್ನು ಕಾಯು ತ್ತಾನೆ; ಅಹಂಕಾರ ಮಾಡುವವನಿಗೆ ಬಹಳವಾಗಿ ಮುಯ್ಯಿಗೆಮುಯ್ಯಿ ತೀರಿಸುತ್ತಾನೆ.ಕರ್ತನಲ್ಲಿ ನಿರೀಕ್ಷಿ ಸುವವರೆಲ್ಲರೇ, ಧೈರ್ಯವಾಗಿರ್ರಿ; ಆತನು ನಿಮ್ಮ ಹೃದಯವನ್ನು ದೃಢಪಡಿಸುವನು.

Cross references

ದ್ವಿತೀಯೋಪದೇಶಕಾಂಡ 10:12

ಈಗ ಇಸ್ರಾಯೇಲೇ, ನಿನ್ನ ಕರ್ತನಾದ ದೇವರಿಗೆ ಭಯಪಟ್ಟು ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಕೊಂಡು ಆತನನ್ನು ಪ್ರೀತಿಮಾಡಿ ನಿನ್ನ ಕರ್ತನಾದ ದೇವರಿಗೆ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಸೇವೆಮಾಡಿ

ದ್ವಿತೀಯೋಪದೇಶಕಾಂಡ 30:16

ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಮಾರ್ಗಗಳಲ್ಲಿ ನಡೆದುಕೊಂಡು ಆತನ ಆಜ್ಞೆ, ನಿಯಮ, ನ್ಯಾಯಗಳನ್ನು ಕಾಪಾಡಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ; ಹಾಗೆ ಮಾಡಿದರೆ ನೀನು ಬದುಕಿ ಹೆಚ್ಚುವಿ; ನೀನು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸುವನು.

ದ್ವಿತೀಯೋಪದೇಶಕಾಂಡ 32:41

ನಾನು ಮಿಂಚುವ ಕತ್ತಿಯನ್ನು ಹದಮಾಡುವಾಗ, ನನ್ನ ಕೈ ನ್ಯಾಯವನ್ನು ಹಿಡುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ ನನ್ನನ್ನು ಹಗೆಮಾಡುವವರಿಗೆ ಮುಯ್ಯಿ ತೀರಿಸುವೆನು.

ದ್ವಿತೀಯೋಪದೇಶಕಾಂಡ 33:3

ಹೌದು, ಆತನು ಜನಗಳನ್ನು ಪ್ರೀತಿಮಾಡಿದನು. ಆತನ ಪರಿಶುದ್ಧರೆಲ್ಲರು ನಿನ್ನ ಕೈಯಲ್ಲಿ ಇದ್ದಾರೆ. ಅವರು ನಿನ್ನ ಪಾದದ ಬಳಿಯಲ್ಲಿ ಕೂತುಕೊಂಡು ನಿನ್ನ ವಾಕ್ಯಗಳನ್ನು ಹೊಂದುತ್ತಾರೆ.

1 ಸಮುವೇಲ 2:9

ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು.

ಕೀರ್ತನೆಗಳು 30:4

ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.

ಕೀರ್ತನೆಗಳು 34:9

ಆತನ ಪರಿ ಶುದ್ಧರೇ, ನೀವು ಕರ್ತನಿಗೆ ಭಯಪಡಿರಿ; ಆತನಿಗೆ ಭಯಪಡುವವರಿಗೆ ಏನೂ ಕೊರತೆ ಇಲ್ಲ.

ಕೀರ್ತನೆಗಳು 54:5

ನನ್ನ ವಿರೋಧಿಗಳಿಗೆ ಆತನು ಕೇಡನ್ನು ಬದಲು ಕೊಡುವನು; ನಿನ್ನ ಸತ್ಯದಿಂದ ಅವರನ್ನು ಸಂಹರಿಸು.

ಕೀರ್ತನೆಗಳು 89:7

ದೇವರು ಪರಿಶುದ್ಧರ ಸಭೆಯಲ್ಲಿ ಬಹಳ ಭೀಕರನೂ ತನ್ನ ಸುತ್ತಲಿರುವವರೆಲ್ಲರಿಗೆ ಭಯಂ ಕರನೂ ಆಗಿದ್ದಾನೆ.

ಕೀರ್ತನೆಗಳು 94:2

ಭೂಮಿಯ ನ್ಯಾಯಾಧಿಪತಿಯೇ, ನೀನು ಎದ್ದೇಳು; ಗರ್ವಿಷ್ಠರಿಗೆ ಪ್ರತೀಕಾರವನ್ನು ಕೊಡು.

ಕೀರ್ತನೆಗಳು 97:10

ಕರ್ತನನ್ನು ಪ್ರೀತಿಮಾಡುವವರು ಕೆಟ್ಟದ್ದನ್ನು ಹಗೆ ಮಾಡುವರು; ಆತನು ತನ್ನ ಪರಿಶುದ್ಧರ ಪ್ರಾಣ ಗಳನ್ನು ಕಾಪಾಡಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.

ಕೀರ್ತನೆಗಳು 145:10

ಓ ಕರ್ತನೇ, ನಿನ್ನ ಕೆಲಸಗಳೆಲ್ಲಾ ನಿನ್ನನ್ನು ಕೊಂಡಾಡುವವು; ನಿನ್ನ ಪರಿಶುದ್ಧರು ನಿನ್ನನ್ನು ಸ್ತುತಿಸುವರು.

ಕೀರ್ತನೆಗಳು 145:20

ಕರ್ತನು ತನ್ನನ್ನು ಪ್ರೀತಿ ಮಾಡುವ ವರೆಲ್ಲರನ್ನು ಕಾಪಾಡುತ್ತಾನೆ; ಆದರೆ ದುಷ್ಟರೆಲ್ಲರನ್ನು ನಾಶಮಾಡುತ್ತಾನೆ.ನನ್ನ ಬಾಯಿ ಕರ್ತನ ಸ್ತೋತ್ರ ವನ್ನು ನುಡಿಯಲಿ; ಎಲ್ಲಾ ಮನುಷ್ಯರು ಆತನ ಪರಿಶುದ್ಧವಾದ ಹೆಸರನ್ನು ಯುಗಯುಗಾಂತರಗಳಿಗೂ ಸ್ತುತಿಸಲಿ.

ಯೆಶಾಯ 38:10

ನನ್ನ ದಿವಸಗಳು ಕಡಿಮೆ ಮಾಡಲ್ಪಟ್ಟದ್ದರಿಂದ ನಾನು ಪಾತಾಳದ ದ್ವಾರ ಗಳೊಳಗೆ ಹೋಗಬೇಕು ನನ್ನ ಆಯುಷ್ಯದಲ್ಲಿ ಮಿಕ್ಕಾ ದದ್ದು ನನಗೆ ತಪ್ಪಿಹೋಯಿತು ಎಂದು ಅಂದು ಕೊಂಡನು.

ಯೆಶಾಯ 56:6

ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್‌ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ

ಯೆಹೆಜ್ಕೇಲ 37:11

ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್‌ ಮನೆತನಗಳೇ; ಇಗೋ, ನಮ್ಮ ಎಲುಬುಗಳು ಒಣಗಿಸಲ್ಪಟ್ಟಿವೆ ಮತ್ತು ನಮ್ಮ ನಿರೀಕ್ಷೆಯು ಕಳೆದುಹೋಗಿದೆ; ನಾವು ಶುದ್ಧವಾಗಿ ನಮ್ಮ ಭಾಗಗಳನ್ನು ಕತ್ತರಿಸಿಕೊಂಡಿದ್ದೇವೆ ಎಂದು ಅವರು ಹೇಳುವರು.

ಮಾರ್ಕ 12:23

ಆದದ ರಿಂದ ಪುನರುತ್ಥಾನದಲ್ಲಿ ಅವರು ಎದ್ದಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ ಅಂದರು.

ಯೋಹಾನ 10:27

ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ, ನಾನು ಅವುಗಳನ್ನು ಬಲ್ಲೆನು; ಅವು ನನ್ನನ್ನು ಹಿಂಬಾಲಿಸುತ್ತವೆ.

1 ತೆಸಲೋನಿಕದವರಿಗೆ 4:1

ಸಹೋದರರೇ, ನೀವು ಹೇಗೆ ನಡೆದು ಕೊಂಡು ದೇವರನ್ನು ಮೆಚ್ಚಿಸಬೇಕೆಂದು ನಮ್ಮಿಂದ ಕೇಳಿರುವ ಪ್ರಕಾರವೇ ನೀವು ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗಬೇಕೆಂದು ನಾವು ಕರ್ತನಾದ ಯೇಸು ವಿನ ಮೂಲಕ ನಿಮ್ಮನ್ನು ಬೇಡಿಕೊಂಡು ಎಚ್ಚರಿಸುತ್ತೇವೆ.

ಯೂದ 1:1

ಯೇಸು ಕ್ರಿಸ್ತನ ದಾಸನೂ ಯಾಕೋಬನ ಸಹೋ ದರನೂ ಆಗಿರುವ ಯೂದನು ತಂದೆಯಾದ ದೇವ ರಿಂದ ಪರಿಶುದ್ಧರಾದವರಿಗೂ ಯೇಸು ಕ್ರಿಸ್ತನಲ್ಲಿ ಕಾಪಾಡಲ್ಪಟ್ಟವರಿಗೂ ಕರೆಯಲ್ಪಟ್ಟವರಿಗೂ--

ಪ್ರಕಟನೆ 18:6

ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ.

ಪ್ರಕಟನೆ 19:5

ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು.

Interlinear

Choose Theme