ನಾನು ನಿರೀಕ್ಷಿಸುವ ಹಾಗೆ ನನ್ನ ಶಕ್ತಿ ಏನು? ನಾನು ನನ್ನ ಆಯುಷ್ಯವನ್ನು ಹೆಚ್ಚಿಸುವ ಹಾಗೆ ನನ್ನ ಅಂತ್ಯವೇನು?
Cross references
ನನ್ನ ಮಾಂಸವು ಹುಳಗಳನ್ನೂ ಮಣ್ಣಿನ ಹೆಂಟೆಯನ್ನೂ ಧರಿಸಿಕೊಂಡಿದೆ. ನನ್ನ ಚರ್ಮವು ಒಡೆದು ಅಸಹ್ಯವಾಗಿದೆ.
ನನ್ನ ದಿವಸಗಳು ಸ್ವಲ್ಪವಲ್ಲವೋ? ಅವುಗಳನ್ನು ತೀರಿಸಿ ನನ್ನನ್ನು ಬಿಟ್ಟುಬಿಡು.
ಬಡಿಯಲ್ಪಟ್ಟ ಎಲೆಯನ್ನು ನಲಿಗಿಸುವಿಯೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿಯೋ?
ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.
ನನ್ನ ಉಸಿರು ಕಟ್ಟಿದೆ; ನನ್ನ ದಿವಸಗಳು ಮುಗಿದಿವೆ; ಸಮಾಧಿಗಳು ನನಗೆ ಸಿದ್ಧ ವಾಗಿವೆ.
ನಾನು ನಿರೀಕ್ಷಿಸಿದರೆ ಸಮಾಧಿಯೇ ನನ್ನ ಮನೆ; ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿದ್ದೇನೆ.
ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು.
ಹಾಗಾದರೆ ಈಗ ನನ್ನ ನಿರೀಕ್ಷೆ ಎಲ್ಲಿ? ನನ್ನ ನಿರೀಕ್ಷೆಯನ್ನು ಯಾರು ನೋಡುವರು?ನಮ್ಮ ಸಂಗಡ ಧೂಳಿನಲ್ಲಿ ವಿಶ್ರಾಂತಿಯಲ್ಲಿರುವಾಗ ಅವರು ಪಾತಾಳದ ಅಗುಳಿಗಳಿಗೆ ಇಳಿದು ಹೋಗುವರು.
ನಾನಾದರೆ ಮನುಷ್ಯನಿಗೆ ನನ್ನ ದೂರು ಹೇಳುವೆನೋ? ಹೇಳಿ ದರೂ ನನ್ನ ಆತ್ಮವು ಯಾಕೆ ವ್ಯಾಕುಲಪಡಬಾರದು?
ಇಗೋ, ನನ್ನ ದಿವಸ ಗಳನ್ನು ಗೇಣುದ್ದವಾಗಿ ಮಾಡಿದ್ದೀ; ನನ್ನ ಆಯುಷ್ಯವು ನಿನ್ನ ಮುಂದೆ ಏನೂ ಇಲ್ಲದ ಹಾಗಿದೆ; ನಿಶ್ಚಯವಾಗಿ ಉತ್ತಮ ಸ್ಥಿತಿಯಲ್ಲಿರುವ ಪ್ರತಿಯೊಬ್ಬನು ಒಟ್ಟಾರೆಯಲ್ಲಿ ವ್ಯರ್ಥವಾದವನೇ. ಸೆಲಾ.
ಅವರನ್ನು ಪ್ರವಾಹದಂತೆ ಬಡು ಕೊಂಡು ಹೋಗುತ್ತೀ; ಅವರು ನಿದ್ರೆಯಲ್ಲಿದ್ದಂತೆಯೂ ಬೆಳಿಗ್ಗೆ ಚಿಗುರುವ ಹುಲ್ಲಿನ ಹಾಗೆಯೂ ಇದ್ದಾರೆ.
ಆತನು ನನ್ನ ಶಕ್ತಿಯನ್ನು ಮಾರ್ಗದಲ್ಲಿ ಕುಂದಿಸಿ ನನ್ನ ದಿವಸಗಳನ್ನು ಕಡಿಮೆ ಮಾಡಿದನು.
ಆತನು ನಮ್ಮ ಪ್ರಕೃತಿಯನ್ನು ತಿಳುಕೊಂಡು ನಾವು ಧೂಳಿ ಯಾಗಿದ್ದೇವೆಂದು ಜ್ಞಾಪಕಮಾಡಿಕೊಳ್ಳುತ್ತಾನೆ;