Home Bibles ಯೆಶಾಯ 11:11 · ಕನ್ನಡ ಬೈಬಲ್
ಯೆಶಾಯ 11:11 · ಕನ್ನಡ ಬೈಬಲ್

ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್‌, ಕೂಷ್‌, ಏಲಾಮ್‌, ಶಿನಾರ್‌, ಹಮಾಥ್‌ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.

Cross references

ಆದಿಕಾಂಡ 2:13

ಎರಡನೆಯ ನದಿಯ ಹೆಸರು ಗೀಹೋನ್‌; ಅದು ಕೂಷ್‌ ದೇಶವನ್ನೆಲ್ಲಾ ಸುತ್ತುವದು.

ಆದಿಕಾಂಡ 10:5

ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು.

ಆದಿಕಾಂಡ 10:10

ಶಿನಾರ್‌ ದೇಶದಲ್ಲಿರುವ ಬಾಬೆಲ್‌ ಯೆರೆಕ್‌ ಅಕ್ಕದ್‌ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು.

ಆದಿಕಾಂಡ 10:22

ಶೇಮನ ಮಕ್ಕಳು ಯಾರಂದರೆ, ಏಲಾಮ್‌ ಅಶ್ಶೂರ್‌ ಅರ್ಪಕ್ಷದ್‌ ಲೂದ್‌ ಅರಾಮ್‌.

ಆದಿಕಾಂಡ 11:2

ಇದಾದ ಮೇಲೆ ಅವರು ಪೂರ್ವ ದಿಕ್ಕಿನಿಂದ ಹೊರಟು ಪ್ರಯಾಣ ಮಾಡುವಾಗ ಶಿನಾರ್‌ ದೇಶದ ಬೈಲನ್ನು ಕಂಡುಕೊಂಡು ಅಲ್ಲಿ ವಾಸಮಾಡಿದರು.

ಆದಿಕಾಂಡ 14:1

ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಜನಾಂಗಗಳ ಅರಸನಾದ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನಂದರೆ,

ಲೇವ್ಯಕಾಂಡ 26:40

ಆಗ ಅವರು ನನಗೆ ಮಾಡಿದ ತಮ್ಮ ಅಕ್ರಮವನ್ನೂ ತಮ್ಮ ಪಿತೃಗಳಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದು ಕೊಂಡದ್ದರಿಂದ

ದ್ವಿತೀಯೋಪದೇಶಕಾಂಡ 4:27

ಆಗ ಕರ್ತನು ನಿಮ್ಮನ್ನು ಜನಾಂಗ ಗಳಲ್ಲಿ ಚದರಿಸುವನು; ಕರ್ತನು ನಿಮ್ಮನ್ನು ನಡಿಸುವಲ್ಲಿ ಅವರ ಮಧ್ಯದಲ್ಲಿ ಸ್ವಲ್ಪ ಮಂದಿಯಾಗಿ ಉಳಿಯುವಿರಿ.

ದ್ವಿತೀಯೋಪದೇಶಕಾಂಡ 9:29

ಆದಾಗ್ಯೂ ನೀನು ನಿನ್ನ ದೊಡ್ಡ ಶಕ್ತಿಯಿಂದಲೂ ಚಾಚಿದ ನಿನ್ನ ಕೈಯಿಂದಲೂ ಹೊರಗೆ ಬರಮಾಡಿದ ನಿನ್ನ ಜನವೂ ಸ್ವಾಸ್ತ್ಯವೂ ಇವರೇ ಎಂದು ಹೇಳಿದೆನು.

ದ್ವಿತೀಯೋಪದೇಶಕಾಂಡ 30:3

ನಿನ್ನ ದೇವರಾದ ಕರ್ತನು ನಿನ್ನನ್ನು ಸೆರೆಯಿಂದ ಬಿಡಿಸಿ ನಿನ್ನ ಮೇಲೆ ಅಂತಃಕರಣಪಟ್ಟು ತಿರುಗಿಕೊಂಡು ನಿನ್ನನ್ನು ಚದುರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿನ್ನನ್ನು ಕೂಡಿಸುವನು.

2 ಅರಸುಗಳು 17:24

ಅಶ್ಶೂರಿನ ಅರಸನು ಬಾಬೆಲಿನಿಂದಲೂ ಕೂತಾ ಅವ್ವಾ ಹಮಾತ್‌ ಸೆಫರ್ವಯಿಮಿನಿಂದಲೂ ಜನರನ್ನು ಬರಮಾಡಿ ಅವರನ್ನು ಇಸ್ರಾಯೇಲ್‌ ಮಕ್ಕಳಿಗೆ ಬದ ಲಾಗಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದನು. ಇವರು ಸಮಾರ್ಯವನ್ನು ಸ್ವತಂತ್ರಿಸಿಕೊಂಡು ಅವರ ಪಟ್ಟಣಗಳಲ್ಲಿ ವಾಸಿಸಿದರು.

ಎಸ್ತೇರ್ 10:1

ಅರಸನಾದ ಅಹಷ್ವೇರೋಷನು ದೇಶದ ಮೇಲೆಯೂ ಸಮುದ್ರದ ದ್ವೀಪಗಳ ಮೇಲೆಯೂ ತೆರಿಗೆಯನ್ನು ನೇಮಿಸಿದನು.

ಕೀರ್ತನೆಗಳು 68:22

ಬಾಷಾನಿನಿಂದ ತಿರಿಗಿ ಬರಮಾಡುವೆನು, ಸಮು ದ್ರದ ಅಗಾಧಗಳಿಂದ ನನ್ನ ಜನರನ್ನು ತಿರಿಗಿ ಬರ ಮಾಡುವೆನು ಎಂದು ಕರ್ತನು ಹೇಳಿದ್ದಾನೆ.

ಯೆಶಾಯ 10:9

ಕಲ್ನೋ, ಕರ್ಕೆ ವಿಾಷಿನ ಹಾಗಲ್ಲವೋ? ಹಾಮಾತ್‌ ಅರ್ಪದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗ ಲ್ಲವೋ?

ಯೆಶಾಯ 10:20

ಆ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಉಳಿದವರೂ ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಇಸ್ರಾಯೇಲಿನ ಪರಿಶುದ್ಧನಾದ ಕರ್ತನ ಸತ್ಯವನ್ನು ಆಧಾರ ಮಾಡಿಕೊಳ್ಳುವರು.

ಯೆಶಾಯ 11:16

ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು.

ಯೆಶಾಯ 19:23

ಆ ದಿವಸದಲ್ಲಿ ಐಗುಪ್ತದಿಂದ ಅಶ್ಶೂರಕ್ಕೆ ಹೋಗುವ ಒಂದು ರಾಜಮಾರ್ಗವಿರುವದು. ಅಶ್ಶೂ ರ್ಯರು ಐಗುಪ್ತಕ್ಕೂ ಐಗುಪ್ತ್ಯರು ಅಶ್ಶೂರ್ಯಕ್ಕೂ ಹೋಗಿ ಬರುವರು ಮತ್ತು ಐಗುಪ್ತ್ಯರು ಅಶ್ಶೂರ್ಯರೊಂದಿಗೆ (ಕರ್ತನನ್ನು) ಸೇವಿಸುವರು.

ಯೆಶಾಯ 21:2

ಘೋರದರ್ಶನವು ನನಗೆ ತಿಳಿಯಬಂದಿದೆ. ಬಾಧ ಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡು ತ್ತಿದ್ದಾನೆ. ಏಲಾಮೇ, ಏಳು ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.

ಯೆಶಾಯ 22:6

ಏಲಾಮಿನ ಮನುಷ್ಯರ ಕುದುರೆ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿ ಯನ್ನು ತೆಗೆದರು.

ಯೆಶಾಯ 24:15

ಆದದರಿಂದ ನೀವು ಕರ್ತನಿಗೆ ಬೆಂಕಿಯಲ್ಲಿಯೂ ಸಮುದ್ರದ ದ್ವೀಪಗಳಲ್ಲಿಯೂ ಇಸ್ರಾಯೇಲ್ಯರ ದೇವ ರಾದ ಕರ್ತನ ಹೆಸರನ್ನು ಘನಪಡಿಸಿರಿ.

ಯೆಶಾಯ 27:12

ಓ ಇಸ್ರಾಯೇಲ್ಯರ ಮಕ್ಕಳೇ, ಕರ್ತನು ನದಿಯ ಕಾಲುವೆ ಮೊದಲುಗೊಂಡು ಐಗುಪ್ತದೇಶದ ನದಿಯ ವರೆಗೆ ಹೊಡೆಯುವನು; ಆಗ ನಿಮ್ಮನ್ನು ಒಬ್ಬೊಬ್ಬರ ನ್ನಾಗಿ ಕೂಡಿಸುವನು.ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.

ಯೆಶಾಯ 27:13

ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.

ಯೆಶಾಯ 42:4

ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.

ಯೆಶಾಯ 42:10

ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.

ಯೆಶಾಯ 42:12

ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.

ಯೆಶಾಯ 45:14

ಕರ್ತನು ಹೇಳುವದೇನಂದರೆ--ಐಗುಪ್ತದ ಆದಾ ಯವೂ ಇಥಿಯೋಪ್ಯದ ವ್ಯಾಪಾರವೂ ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವ ರಾಗಿ ನಿಮ್ಮನ್ನು ಅನುಸರಿಸುವರು; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊ ಬ್ಬನು ಇಲ್ಲ, ಬೇರೆ ದೇವರು ಇಲ್ಲವೇ ಇಲ್ಲ.

ಯೆಶಾಯ 49:12

ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್‌ ದೇಶದಿಂದ ಬರುತ್ತಿದ್ದಾರೆ.

ಯೆಶಾಯ 60:1

ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು.

ಯೆಶಾಯ 66:19

ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು.

ಯೆರೆಮಿಯ 23:7

ನಾನೇ ಕರ್ತನೆಂದು ನನ್ನನ್ನು ತಿಳುಕೊಳ್ಳುವದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿ ರುವರು; ನಾನು ಅವರ ದೇವರಾಗಿರುವೆನು; ತಮ್ಮ ಪೂರ್ಣ ಹೃದಯದಿಂದ ನನ್ನ ಬಳಿಗೆ ಹಿಂತಿರುಗಿಕೊಳ್ಳು ವರು.

ಯೆರೆಮಿಯ 23:8

ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ ಐಗುಪ್ತದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆಂದು ಕರ್ತನು ಹೇಳುತ್ತಾನೆ.

ಯೆರೆಮಿಯ 30:8

ಇಗೋ, ನಾನು ಅವರನ್ನು ಉತ್ತರ ದೇಶ ದಿಂದ ಬರಮಾಡಿ ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ; ಅವರಲ್ಲಿ ಕುರುಡರೂ ಕುಂಟರೂ ಗರ್ಭಿಣಿಯಾದವರೂ ದಿನತುಂಬಿದ ಗರ್ಭಿಣಿಯರ ಸಹಿತವಾಗಿ ಇರುವರು; ದೊಡ್ಡ ಗುಂಪಾಗಿ ಇಲ್ಲಿಗೆ ಹಿಂತಿರುಗಿ ಬರುವರು.

ಯೆರೆಮಿಯ 31:10

ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆ ಹಾಕಿ, ಸಾಕ್ಷಿಗಳನ್ನಿಟ್ಟು ಬೆಳ್ಳಿಯನ್ನು ತ್ರಾಸಿನಲ್ಲಿ ತೂಕ ಮಾಡಿ ದೆನು.

ಯೆರೆಮಿಯ 31:36

ಹೀಗಾದರೂ ಈಗ ಅದು ಕತ್ತಿಯಿಂದಲೂ ಬರದಿಂದಲೂ ಜಾಡ್ಯದಿಂದಲೂ ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದೆಂದು ನೀವು ಹೇಳುವ ಈ ಪಟ್ಟಣದ ವಿಷಯ ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--

ಯೆರೆಮಿಯ 44:1

ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೇ ವರುಷದಲ್ಲಿ ನೇರೀಯನ ಮಗನಾದ ಬಾರೂಕನ ಈ ಮಾತುಗಳನ್ನು ಯೆರೆವಿಾಯನ ಬಾಯಿಂದ ಬಂದ ಹಾಗೆ ಪುಸ್ತಕದಲ್ಲಿ ಬರೆದ ಮೇಲೆ ಯೆರೆವಿಾಯನು ಅವನಿಗೆ ಹೇಳಿದ ವಾಕ್ಯವೆನಂದರೆ,

ಯೆರೆಮಿಯ 49:23

ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್‌ ಹೇಗೆ ಜನಾಂಗಗಳೊಳಗೆ ಹಾಳಾಯಿತು!

ಯೆಹೆಜ್ಕೇಲ 11:16

ಆದದರಿಂದ ನೀವು ಹೇಳತಕ್ಕದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರನ್ನು ಅನ್ಯ ಜನಾಂಗ ಗಳಿಂದ ದೂರ ಹಾಕಿದ್ದಾಗ್ಯೂ ದೇಶಗಳನ್ನು ಚದರಿಸಿ ದ್ದಾಗ್ಯೂ ಅವರು ಹೋಗುವ ದೇಶಗಳಲ್ಲಿ ನಾನು ಸ್ವಲ್ಪ ಕಾಲದ ವರೆಗೆ ಪವಿತ್ರಾಲಯವಾಗಿರುವೆನು.

ಯೆಹೆಜ್ಕೇಲ 27:6

ನಿನ್ನ ಹುಟ್ಟು ಗೋಲನ್ನು ಬಾಷಾನಿನ ಓಕ್‌ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಯರ ದ್ವೀಪಗಳಿಂದ ತಂದ ದಂತದ ಹಲಗೆಗಳಿಂದ ಅಶ್ಶೂರ್ಯರ ಗುಂಪಿನವರು ಕೆತ್ತಿದ್ದಾರೆ.

Interlinear

Choose Theme