ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಜನಾಂಗಗಳ ಅರಸನಾದ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನಂದರೆ,
Cross references
ಶಿನಾರ್ ದೇಶದಲ್ಲಿರುವ ಬಾಬೆಲ್ ಯೆರೆಕ್ ಅಕ್ಕದ್ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು.
ಶೇಮನ ಮಕ್ಕಳು ಯಾರಂದರೆ, ಏಲಾಮ್ ಅಶ್ಶೂರ್ ಅರ್ಪಕ್ಷದ್ ಲೂದ್ ಅರಾಮ್.
ಇದಾದ ಮೇಲೆ ಅವರು ಪೂರ್ವ ದಿಕ್ಕಿನಿಂದ ಹೊರಟು ಪ್ರಯಾಣ ಮಾಡುವಾಗ ಶಿನಾರ್ ದೇಶದ ಬೈಲನ್ನು ಕಂಡುಕೊಂಡು ಅಲ್ಲಿ ವಾಸಮಾಡಿದರು.
ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.
ಘೋರದರ್ಶನವು ನನಗೆ ತಿಳಿಯಬಂದಿದೆ. ಬಾಧ ಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡು ತ್ತಿದ್ದಾನೆ. ಏಲಾಮೇ, ಏಳು ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.
ಏಲಾಮಿನ ಮನುಷ್ಯರ ಕುದುರೆ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿ ಯನ್ನು ತೆಗೆದರು.
ನನ್ನ ಪಿತೃಗಳು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣ ಗಳನ್ನು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಏದೆನಿನ ಜನ ರನ್ನು ನಾಶಮಾಡುವದಕ್ಕೆ ಹೋದಾಗ ಜನಾಂಗಗಳ ದೇವರುಗಳು ಅವರನ್ನು ಬಿಡುಗಡೆ ಮಾಡಿದವೋ?
ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು.
ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ; ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದುಹೋದವರೇ, ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
ಅವನು ನನಗೆ --ಶಿನಾರ್ ದೇಶದಲ್ಲಿ ಅದಕ್ಕೆ ಮನೆ ಕಟ್ಟುವದಕ್ಕಾಗಿ ತಕ್ಕೊಂಡು ಹೋಗುತ್ತಾರೆ; ಅಲ್ಲಿ ಅದು ಸ್ಥಾಪಿಸಲ್ಪಟ್ಟು ತನ್ನ ಸ್ಥಾನದಲ್ಲಿ ಇರಿಸಲ್ಪಡುವದು ಅಂದನು.