ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು.
Cross references
ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.
ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿಯೂ ಜನಾಂಗ ಗಳಲ್ಲಿಯೂ ಇರುವ ಹಾಮನ ಕುಮಾರರು.
ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್.
ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು.
ಆಗ ಭೂಮಿಯಲ್ಲೆಲ್ಲಾ ಒಂದೇ ಭಾಷೆ, ಒಂದೇ ಮಾತು ಇತ್ತು.
ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.
ಆದದರಿಂದ ಅದಕ್ಕೆ ಬಾಬೆಲ್ ಎಂದು ಹೆಸರಾಯಿತು; ಯಾಕಂದರೆ ಅಲ್ಲಿ ಕರ್ತನು ಭೂಮಿಯ ಮೇಲೆಲ್ಲಾ ಭಾಷೆಗಳನ್ನು ಗಲಿಬಿಲಿ ಮಾಡಿದನು; ಅಲ್ಲಿಂದ ಕರ್ತನು ಅವರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು.
ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು.
ಅರಸನಾದ ಅಹಷ್ವೇರೋಷನು ದೇಶದ ಮೇಲೆಯೂ ಸಮುದ್ರದ ದ್ವೀಪಗಳ ಮೇಲೆಯೂ ತೆರಿಗೆಯನ್ನು ನೇಮಿಸಿದನು.
ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು.
ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.
ಆದದರಿಂದ ನೀವು ಕರ್ತನಿಗೆ ಬೆಂಕಿಯಲ್ಲಿಯೂ ಸಮುದ್ರದ ದ್ವೀಪಗಳಲ್ಲಿಯೂ ಇಸ್ರಾಯೇಲ್ಯರ ದೇವ ರಾದ ಕರ್ತನ ಹೆಸರನ್ನು ಘನಪಡಿಸಿರಿ.
ಇಗೋ, ಆತನ ಎಣಿಕೆಯಲ್ಲಿ ಜನಾಂಗಗಳು ಕಪಿಲೆ ಯಿಂದುದುರುವ ಹನಿಯಂತೆಯೂ ತಕ್ಕಡಿಯಲ್ಲಿನ ದೂಳಿನ ಹಾಗೂ ಇರುತ್ತವೆ. ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಆತನು ಎತ್ತುತ್ತಾನೆ.
ದ್ವೀಪ ನಿವಾಸಿಗಳೆಲ್ಲರೂ ನೋಡಿ ಬೆರಗಾದರು; ಭೂಮಿಯ ಕಟ್ಟಕಡೆಯವರು ನಡುಗಿದರು. ಅವರ ಸವಿಾಪಕ್ಕೆ ಬಂದರು.
ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.
ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.
ಓ ದ್ವೀಪ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ದೂರದ ಜನಗಳೇ, ಕಿವಿಗೊಡಿರಿ! ನಾನು ಗರ್ಭದಲ್ಲಿದ್ದಾಗಲೇ ಕರ್ತನು ನನ್ನನ್ನು ಕರೆ ದನು. ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.
ನನ್ನ ನೀತಿಯು ಸವಿಾಪಿ ಸಿತು; ನನ್ನ ರಕ್ಷಣೆಯು ಹೊರಟಿತು ಮತ್ತು ನನ್ನ ತೋಳುಗಳು ಜನರಿಗೆ ನ್ಯಾಯವನ್ನು ತೀರಿಸುವವು; ದ್ವೀಪಗಳವರು ನನ್ನ ತೋಳಿನ ಮೇಲೆ ಭರವಸವಿಟ್ಟು ನನಗೋಸ್ಕರ ಕಾದುಕೊಂಡಿರುತ್ತಾರೆ.
ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು; ತನ್ನ ವೈರಿ ಗಳಿಗೆ ಕ್ರೋಧವನ್ನೂ ತನ್ನ ಶತ್ರುಗಳಿಗೂ ದ್ವೀಪಗ ಳಿಗೂ ಪ್ರತಿಫಲವನ್ನು ಸಲ್ಲಿಸುವನು.
ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ.
ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ; ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳುಕೊಳ್ಳಿರಿ; ಅಂಥದ್ದು (ಎಲ್ಲಿಯಾದರೂ) ಉಂಟೋ? ನೋಡಿರಿ.
ಆದರೆ ಅರಸನಾದ ಯೆಹೋಯಾಕೀಮನು ಐಗು ಪ್ತಕ್ಕೆ ಜನರನ್ನು, ಅಂದರೆ ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.
ಕರ್ತನು ಅವರಿಗೆ ಭಯಂಕರನಾಗಿ ರುವನು. ಆತನು ಭೂಮಿಯ ಎಲ್ಲಾ ದೇವರುಗಳನ್ನು ಕ್ಷೀಣಮಾಡುವನು; ಅನ್ಯಜನಾಂಗಗಳ ದ್ವೀಪಗಳವ ರೆಲ್ಲರು ತಮ್ಮ ತಮ್ಮ ಸ್ಥಳಗಳಿಂದ ಆತನನ್ನು ಆರಾ ಧಿಸುವರು.