ತರುವಾಯ ಇಜ್ರೇಲನ್ನು ನನಗಾಗಿ ದೇಶದಲ್ಲಿ ಬಿತ್ತುವೆನು; ಕರುಣೆ ಹೊಂದ ದವಳ ಮೇಲೆಯೇ ನಾನು ಕರುಣೆಯನ್ನು ತೋರಿ ಸುವೆನು. ನನ್ನ ಜನವಲ್ಲದ್ದಕ್ಕೆ--ನೀನು ನನ್ನ ಜನ ವೆಂದು ಹೇಳುವೆನು; ಅವರು--ನನ್ನ ದೇವರೇ ಎಂದು ಭಜಿಸುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
Cross references
ನೀನು ಈಹೊತ್ತು ಕರ್ತನು--ನಿನಗೆ ದೇವರಾಗಬೇಕೆಂದೂ ಆತನ ಮಾರ್ಗಗಳಲ್ಲಿ ನಡೆದು ಆತನ ನಿಯಮ ಆಜ್ಞೆ ನ್ಯಾಯಗಳನ್ನು ಕಾಪಾಡಿ ಆತನ ಸ್ವರ ಕೇಳುತ್ತೇನೆಂದೂ ದೃಢವಾಗಿ ಹೇಳಿದಿ.
ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
ಐಗುಪ್ತದಿಂದ ಪ್ರಧಾನರು ಬರುವರು; ಕೂಷ್ ತನ್ನ ಕೈಗಳನ್ನು ದೇವರ ಕಡೆಗೆ ಬೇಗ ಚಾಚುವದು.
ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯ ಮೇಲೆ ಇರುವದು; ಅದರ ಫಲವು ಲೆಬನೋನಿನ ಹಾಗೆ ಕದಲುವದು. ಪಟ್ಟಣದ ವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿಯಾಗುವರು.
ನೀನು ನನ್ನ ದೇವರಾಗಿದ್ದೀ; ನಿನ್ನನ್ನು ಕೊಂಡಾಡುವೆನು; ನನ್ನ ದೇವರೇ, ನಿನ್ನನ್ನು ಘನಪಡಿಸುವೆನು.ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು. ಆತನ ಕರು ಣೆಯು ಯುಗಯುಗಕ್ಕೂ ಅದೆ.
ನನ್ನ ಪ್ರಿಯನು ನನ್ನವನು, ನಾನು ಅವನವಳು.ಅವನು ತಾವರೆ ಹೂವುಗಳ ಮಧ್ಯದಲ್ಲಿ ಮೇಯಿಸು ತ್ತಾನೆ.ನನ್ನ ಪ್ರಿಯನೇ, ತಿರುಗಿಕೊಂಡು ಬೆಳಗಾಗು ವವರೆಗೂ ನೆರಳುಗಳು ಓಡಿಹೋಗುವ ವರೆಗೂ, ಬತೇರ್ ಪರ್ವತಗಳ ಮೇಲಿರುವ ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇರು.
ಒಬ್ಬನು--ನಾನು ಕರ್ತನವನು, ಇನ್ನೊಬ್ಬನು ಯಾಕೋಬನ ಹೆಸರಿನವನು ಎಂದು ಹೇಳಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಕರ್ತನಿಗೆಂದು ಬರೆಯಿಸಿಕೊಂಡು ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡ ಹೆಸರನ್ನು ಇಟ್ಟುಕೊಳ್ಳುವನು.
ಕರ್ತನು ನನಗೆ ಹೀಗೆ ಹೇಳಿದನು--ಹೋಗಿ ಜನರ ಮಕ್ಕಳ ಬಾಗಿಲಲ್ಲಿಯೂ ಯೆಹೂದದ ಅರಸರು ಪ್ರವೇಶಿಸುವಲ್ಲಿಯೂ ಹೊರಡುವಲ್ಲಿಯೂ ಯೆರೂಸ ಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು
ಇಗೋ, ನಾನೇ ಕರ್ತನು, ಸಮಸ್ತ ಜನರ ದೇವರು; ನನಗೆ ಕಠಿಣವಾದ ಕಾರ್ಯ ಒಂದಾದರೂ ಉಂಟೋ?
ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು; ಬೆಳೆ ಬೆಳೆ ಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವದಿಲ್ಲ.
ಅವಳು ತಿರುಗಿ ಬಸುರಾಗಿ ಮಗಳನ್ನು ಹೆತ್ತಳು. ಆಗ ದೇವರು ಅವನಿಗೆ-- ಅವಳನ್ನು ಲೋರುಹಾಮ ಎಂಬ ಹೆಸರಿನಿಂದ ಕರೆ; ಯಾಕಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನ ದವರನ್ನು ಕರುಣಿಸುವದೇ ಇಲ್ಲ; ಆದರೆ ನಾನು ಅವರನ್ನು ಸಂಪೂರ್ಣವಾಗಿ ತೆಗೆದುಬಿಡುತ್ತೇನೆ.
ಆಗ ದೇವರು--ಅವನ ಹೆಸರನ್ನು ಲೋ ಅಮ್ಮಿ ಎಂದು ಕರೆ, ಯಾಕಂದರೆ ನೀವು ನನ್ನ ಜನರಲ್ಲ, ನಾನು ನಿಮ್ಮ ದೇವರಾಗಿರುವದಿಲ್ಲ ಅಂದನು.
ಇಸ್ರಾಯೇಲಿ ನವರು--ನನ್ನ ದೇವರೇ, ನಾವು ನಿನ್ನನ್ನು ತಿಳಿದಿದ್ದೇವೆ ಎಂದು ನನಗೆ ಕೂಗುವರು.
ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
ನಾನು ಅವರನ್ನು ಜನಗಳಲ್ಲಿ ಬಿತ್ತುವೆನು; ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡುವರು; ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು.
ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
ಕರ್ತನು ಭೂಮಿಗೆಲ್ಲಾ ಅರಸನಾಗಿರುವನು; ಆ ದಿನದಲ್ಲಿ ಕರ್ತನು ಒಬ್ಬನೇ ಇರುವನು; ಆತನ ಹೆಸರು ಒಂದೇ.
ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು.
ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
ಸೌಲನು ಅವನ ಕೊಲೆಗೆ ಸಮ್ಮತಿಸು ವವನಾಗಿದ್ದನು. ಆ ಕಾಲದಲ್ಲಿ ಯೆರೂಸ ಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರ ಹೊರತಾಗಿ ಎಲ್ಲರೂ ಯೂದಾಯ ಸಮಾರ್ಯ ಸೀಮೆಗಳಲ್ಲಿ ಚದರಿಹೋದರು.
ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿ ದ್ದಾನೋ? ಅನ್ಯಜನಗಳಿಗೆ ಸಹ ದೇವರಲ್ಲವೇ? ಹೌದು, ಆತನು ಅನ್ಯಜನರಿಗೆ ಸಹ ದೇವರಾಗಿದ್ದಾನೆ;
ಇದಲ್ಲದೆ ಆತನು--ನನ್ನ ಜನರಲ್ಲದವರನ್ನು ನನ್ನ ಜನರೆಂದೂ ನನಗೆ ಪ್ರಿಯಳಲ್ಲದವಳನ್ನು ಪ್ರಿಯಳೆಂದೂ ಕರೆಯು ವೆನು ಎಂದು ಹೋಶೇಯನ ಮೂಲಕ ಹೇಳುತ್ತಾನೆ.
ಕಳೆದುಹೋದ ಕಾಲಗಳಲ್ಲಿ ನೀವು ದೇವರನ್ನು ನಂಬದೆ ಇದ್ದೀರಿ; ಆದಾಗ್ಯೂ ಅವರ ಅಪನಂಬಿಕೆಯ ಮೂಲಕ ನೀವು ಈಗ ಹೇಗೆ ಕರುಣೆ ಯನ್ನು ಹೊಂದಿದ್ದೀರೋ
ಈ ಕಾರಣದಿಂದ ನಾನು ಅನ್ಯಜನಗಳ ಮಧ್ಯದಲ್ಲಿ ನಿನ್ನನು ಅರಿಕೆ ಮಾಡಿ ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದು ಬರೆದಿರುವ ಪ್ರಕಾರ ಅನ್ಯಜನಗಳು ದೇವರ ಕರುಣೆಗಾಗಿ ಆತನನ್ನು ಮಹಿಮೆಪಡಿಸುವರು.
ನಾವು ನಿಮ್ಮಲ್ಲಿ ಹೇಗೆ ಪ್ರವೇಶಿಸಿದೆವೆಂಬದನ್ನೂ ನೀವು ಹೇಗೆ ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂಬದನ್ನೂ ಅವರು ತಾವೇ ಹೇಳುತ್ತಾರೆ.ಇದಲ್ಲದೆ ಆತನು ಸತ್ತವರೊಳ ಗಿಂದ ಎಬ್ಬಿಸಿದಂಥ ಮತ್ತು ಪರಲೋಕದಿಂದ ಬರುವಂಥ ಆತನ ಕುಮಾರನನ್ನು ಎದುರು ನೋಡುವವರಾದಿರೆಂಬ ದನ್ನೂ ತಿಳಿಸುತ್ತಾರೆ. ಈ ಯೇಸುವು ಮುಂದೆ ಬರುವ ಕೋಪದಿಂದ ನಮ್ಮನ್ನು ತಪ್ಪಿಸಿದನು.
ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬ ನು ಅನ್ಯದೇಶಗಳಲ್ಲಿ ಚದರಿರುವ (ಇಸ್ರಾಯೇಲ್) ಹನ್ನೆರಡು ಗೋತ್ರದವರಿಗೆ ವಂದನೆ.
ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ ಗಲಾತ್ಯ ಕಪ್ಪದೋಕ್ಯ ಆಸ್ಯ ಬಿಥೊನ್ಯ ಇವುಗಳಲ್ಲೆಲ್ಲಾ ಚದರಿರುವ ಪರದೇಶಸ್ಥರಿಗೆ
ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.
ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ