ನೀನು ಈಹೊತ್ತು ಕರ್ತನು--ನಿನಗೆ ದೇವರಾಗಬೇಕೆಂದೂ ಆತನ ಮಾರ್ಗಗಳಲ್ಲಿ ನಡೆದು ಆತನ ನಿಯಮ ಆಜ್ಞೆ ನ್ಯಾಯಗಳನ್ನು ಕಾಪಾಡಿ ಆತನ ಸ್ವರ ಕೇಳುತ್ತೇನೆಂದೂ ದೃಢವಾಗಿ ಹೇಳಿದಿ.
Cross references
ನನ್ನನ್ನು ಸಮಾಧಾನ ವಾಗಿ ನನ್ನ ತಂದೆಯ ಮನೆಗೆ ತಿರಿಗಿ ಬರಮಾಡಿದರೆ ಕರ್ತನು ನನಗೆ ದೇವರಾಗಿರುವನು.ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವದು. ಆಗ ನೀನು ನನಗೆ ಕೊಡುವದ ರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು ಅಂದನು.
ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು.
ಜನರೆಲ್ಲಾ ಏಕವಾಗಿ ಉತ್ತರ ಕೊಟ್ಟು--ಕರ್ತನು ಹೇಳಿದವುಗಳನ್ನೆಲ್ಲಾ ಮಾಡುತ್ತೇವೆ ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿರಿಗಿ ಹೇಳಿದನು.
ಅವರು ಮೋಶೆಗೆ--ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮ ಸಂಗಡ ಮಾತನಾಡದಿರಲಿ ಅಂದರು.
ಇದಲ್ಲದೆ ಒಡಂಬಡಿಕೆಯ ಪ್ರುಸ್ತಕವನ್ನು ತೆಗೆದುಕೊಂಡು ಜನರ ಮುಂದೆ ಓದಿದನು. ಆಗ ಅವರು--ಕರ್ತನು ಹೇಳುವದನ್ನೆಲ್ಲಾ ನಾವು ಮಾಡಿ ವಿಧೇಯರಾಗುವೆವು ಅಂದರು.
ನಮ್ಮ ದೇವರಾದ ಕರ್ತನು ಹೋರೇ ಬಿನಲ್ಲಿ ನಮ್ಮ ಸಂಗಡ ಆ ಒಡಂಬಡಿಕೆಯನ್ನು ಮಾಡಿದನು.
ಈಗ ಇಸ್ರಾಯೇಲೇ, ನಿನ್ನ ಕರ್ತನಾದ ದೇವರಿಗೆ ಭಯಪಟ್ಟು ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಕೊಂಡು ಆತನನ್ನು ಪ್ರೀತಿಮಾಡಿ ನಿನ್ನ ಕರ್ತನಾದ ದೇವರಿಗೆ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಸೇವೆಮಾಡಿ
ನಿಮ್ಮ ದೇವರಾದ ಕರ್ತನನ್ನೇ ಅನುಸರಿಸಿ ಆತನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಂಡು ಆತನ ಸ್ವರವನ್ನು ಕೇಳಿ ಆತನಿಗೆ ಸೇವೆಮಾಡಿ ಆತನಿಗೆ ಅಂಟಿಕೊಳ್ಳಬೇಕು.
ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರಿಗಿ ನಿನಗೆ ಕರುಣೆಯನ್ನು ತೋರಿಸಿ ನಿನ್ನ ಮೇಲೆ ಕನಿಕರಪಟ್ಟು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನನ್ನು ಹೆಚ್ಚಿಸುವ ಹಾಗೆ ಆ ಶಾಪವನ್ನು ಹೊಂದಿದ್ದರಲ್ಲಿ ಏನಾದರೂ ನಿನ್ನ ಕೈಗೆ ಅಂಟಿಕೊಳ್ಳಬಾರದು.
ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಎಚ್ಚರಿಕೆಯಿಂದ ಕೇಳಿ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಈ ಎಲ್ಲಾ ಆಜ್ಞೆಯನ್ನು ಕಾಪಾಡಿ ನಡೆದರೆ
ಹೀಗಿರುವದರಿಂದ ನಿನ್ನ ದೇವರಾದ ಕರ್ತನ ಮಾತಿಗೆ ವಿಧೇಯರಾಗಿ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ಆಜ್ಞೆಗಳನ್ನೂ ನಿಯಮಗಳನ್ನೂ ಕೈಕೊಳ್ಳಬೇಕು ಎಂದು ಹೇಳಿದನು.
ನಿಮ್ಮ ಚಿಕ್ಕವರೂ ಪತ್ನಿಯರೂ ನಿನ್ನ ಪಾಳೆಯದಲ್ಲಿರುವ ಪರವಾಸಿಯರೂ ನಿನಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವ ವರೂ ಇದ್ದೀರಿ.
ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಮಾರ್ಗಗಳಲ್ಲಿ ನಡೆದುಕೊಂಡು ಆತನ ಆಜ್ಞೆ, ನಿಯಮ, ನ್ಯಾಯಗಳನ್ನು ಕಾಪಾಡಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ; ಹಾಗೆ ಮಾಡಿದರೆ ನೀನು ಬದುಕಿ ಹೆಚ್ಚುವಿ; ನೀನು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸುವನು.
ಆದರೆ ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಆಜ್ಞೆ ಯನ್ನೂ ನ್ಯಾಯಪ್ರಮಾಣವನ್ನೂ ಜಾಗ್ರತೆಯಾಗಿ ಕೈಕೊಂಡು ನಡೆದು ನಿಮ್ಮ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಆತನ ಆಜ್ಞೆಗಳನ್ನು ಕೈಕೊಂಡು ಆತನನ್ನು ಅಂಟಿ ಕೊಂಡು ಆತನನ್ನು ನಿಮ್ಮ ಪೂರ್ಣಹೃದಯ ದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸಿರಿ ಎಂದು ಹೇಳಿದನು.
ಯೆಹೋಶುವನು ಜನರಿಗೆ--ನೀವು ಕರ್ತನನ್ನು ಸೇವಿಸುವದಕ್ಕೆ ಆತನನ್ನು ಆದು ಕೊಂಡಿರು ವಿರೆಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ ಅಂದನು.
ನೀನು ಏನು ಮಾಡಿದರೂ ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿ ಬುದ್ಧಿಯುಳ್ಳವನಾಗಿರು ವದಕ್ಕೂ ಕರ್ತನು ನನ್ನನ್ನು ಕುರಿತು--ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ನನ್ನ ಮುಂದೆ ಸತ್ಯವಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಇಸ್ರಾ ಯೇಲಿನ ಸಿಂಹಾಸನದ ಮೇಲೆ ಕೂಡ್ರತಕ್ಕವರಲ್ಲಿ ನಿನಗೆ ಕೊರತೆ ಇರುವದಿಲ್ಲ ಎಂದು ಹೇಳಿದ ತನ್ನ ವಾಕ್ಯವನ್ನು ಸ್ಥಿರಪಡಿಸುವದಕ್ಕೂ
ಅರಸನು ತನ್ನ ಸ್ಥಳದಲ್ಲಿ ನಿಂತುಕೊಂಡು ಕರ್ತನನ್ನು ಹಿಂಬಾಲಿಸುವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನೂ ತನ್ನ ಪೂರ್ಣಹೃದಯದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳ ಹಾಗೆ ಮಾಡುವದಕ್ಕೂ ಕರ್ತನ ಮುಂದೆ ಒಡಂಬಡಿಕೆ ಮಾಡಿದನು.
ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ.
ಒಬ್ಬನು--ನಾನು ಕರ್ತನವನು, ಇನ್ನೊಬ್ಬನು ಯಾಕೋಬನ ಹೆಸರಿನವನು ಎಂದು ಹೇಳಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಕರ್ತನಿಗೆಂದು ಬರೆಯಿಸಿಕೊಂಡು ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡ ಹೆಸರನ್ನು ಇಟ್ಟುಕೊಳ್ಳುವನು.
ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೊ ಆ ದೇವರ ದೂತನು ಈ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು--
ಇಲ್ಲವೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಳಪಡಿಸುವವರಾಗಿದ್ದು ಅನೀತಿಯನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿಸುವವರೋ ಎಂಬಂತೆ ನೀತಿಕಾರ್ಯಗಳನ್ನು ನಡಿಸುವ ಸಾಧನಗಳನ್ನಾಗಿ ನಿಮ್ಮ ಅಂಗಗಳನ್ನು ದೇವರಿಗೆ ಒಳಪಡಿಸಿರಿ.
ಏನು? ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಆಲಯವಾಗಿದೆಯೆಂಬದು ನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸೊತ್ತಲ್ಲ;ನೀವು ಕ್ರಯಕ್ಕೆ ಕೊಂಡುಕೊಳ್ಳಲ್ಪಟ್ಟವರಾಗಿದ್ದೀರಿ; ಆದದರಿಂದ ದೇವರ ಸೊತ್ತಾಗಿರುವ ನಿಮ್ಮ ದೇಹದಲ್ಲಿಯೂ ನಿಮ್ಮ ಆತ್ಮದಲ್ಲಿಯೂ ದೇವರನ್ನು ಮಹಿಮೆಪಡಿಸಿರಿ.
ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.