ಇಗೋ, ನಾನೇ ಕರ್ತನು, ಸಮಸ್ತ ಜನರ ದೇವರು; ನನಗೆ ಕಠಿಣವಾದ ಕಾರ್ಯ ಒಂದಾದರೂ ಉಂಟೋ?
Cross references
ಆದಾಗ್ಯೂ ಆತನು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ ಅವನ ಕುಟುಂಬಗಳನ್ನು ಮಂದೆಯ ಹಾಗೆ ಇರಿಸುತ್ತಾನೆ.
ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು.
ಇಗೋ, ನಾನು ನಿಮ್ಮ ಪಕ್ಷದಲ್ಲಿ ಇದ್ದೇವೆ, ನಾನು ನಿಮ್ಮ ಕಡೆಗೆ ತಿರುಗಿ ಕೊಳ್ಳುತ್ತೇನೆ. ನೀವು ಉತ್ತುಬಿತ್ತುವಿರಿ.
ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್ ಮನೆತನದ ವರನ್ನೂ ಅಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿ ಮಾಡುತ್ತೇನೆ, ಪಟ್ಟಣಗಳು ಜನಭರಿತವಾಗುವವು, ಹಾಳಾದ ಪ್ರದೇಶಗಳು ಕಟ್ಟಲ್ಪಡುವವು;
ನಾನು ನಿಮ್ಮಲ್ಲಿ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡು ವೆನು; ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವವು; ನಾನು ನಿಮ್ಮನ್ನು ನಿಮ್ಮ ಹಳೆಯ ಸ್ಥಳಗಳಲ್ಲಿ ವಾಸಿಸುವಂತೆ ಮಾಡಿ ನಿಮ್ಮ ಮೊದಲಿನ ಸ್ಥಿತಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ.
ತರುವಾಯ ಇಜ್ರೇಲನ್ನು ನನಗಾಗಿ ದೇಶದಲ್ಲಿ ಬಿತ್ತುವೆನು; ಕರುಣೆ ಹೊಂದ ದವಳ ಮೇಲೆಯೇ ನಾನು ಕರುಣೆಯನ್ನು ತೋರಿ ಸುವೆನು. ನನ್ನ ಜನವಲ್ಲದ್ದಕ್ಕೆ--ನೀನು ನನ್ನ ಜನ ವೆಂದು ಹೇಳುವೆನು; ಅವರು--ನನ್ನ ದೇವರೇ ಎಂದು ಭಜಿಸುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
ನಾನು ಅವರನ್ನು ಜನಗಳಲ್ಲಿ ಬಿತ್ತುವೆನು; ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡುವರು; ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು.