ಅವನು ಹೇಳಿದ ಅರ್ಥದಂತೆಯೇ ನಮಗಾಯಿತು. ನನ್ನ್ನ ಉದ್ಯೋಗವು ತಿರಿಗಿ ನನಗೆ ದೊರಕಿತು; ಭಕ್ಷ್ಯ ಕಾರರಲ್ಲಿ ಮುಖ್ಯಸ್ಥನೋ ಗಲ್ಲಿಗೆ ಹಾಕಲ್ಪಟ್ಟನು ಅಂದನು.
Cross references
ಅದಕ್ಕೆ ಯೋಸೇಫನು--ಅದರ ಅರ್ಥ ಏನಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ.
ಮೂರನೆಯ ದಿನದಲ್ಲಿ ಫರೋಹನ ಜನನದ ದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯ ಪಾನದಾಯಕನನ್ನೂ ಮುಖ್ಯ ರೊಟ್ಟಿಗಾರನನ್ನೂ ತನ್ನ ಸೇವಕರ ಮುಂದೆ ನಿಲ್ಲಿಸಿದನು.
ಯೋಸೇಫನು ಅವರಿಗೆ ಅವರ ಕನಸಿನ ಅರ್ಥ ಹೇಳಿದಂತೆ ಮುಖ್ಯಪಾನದಾಯಕನನ್ನು ತಿರಿಗಿ ಉದ್ಯೋಗದಲ್ಲಿ ಇರಿಸಿದ್ದರಿಂದ ಅವನು ಫರೋ ಹನ ಕೈಗೆ ಪಾತ್ರೆಯನ್ನು ಕೊಡುವವನಾದನು.
ಆದರೆ ಮುಖ್ಯ ರೊಟ್ಟಿಗಾರನನ್ನು ತೂಗಹಾಕಿಸಿದನು.ಆದಾ ಗ್ಯೂ ಪಾನದಾಯಕಾರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.
ನೋಡು, ನಿನ್ನನ್ನು ಕೀಳುವದಕ್ಕೂ ಕೆಳಗೆ ಹಾಕಿ ಬಿಡುವದಕ್ಕೂ ನಾಶಮಾಡುವದಕ್ಕೂ ಕೆಡವಿಹಾಕುವದಕ್ಕೂ ಕಟ್ಟುವದಕ್ಕೂ ನೆಡುವದಕ್ಕೂ ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ಈ ದಿನ ನಿನ್ನನ್ನು ನೇಮಿಸಿದ್ದೇನೆ ಅಂದನು.
ಇದು, ನಾನು ನೋಡಿದ ದರ್ಶನದ ತೋರ್ವಿಕೆಯ ಪ್ರಕಾರ ಇತ್ತು ನಾನು ಪಟ್ಟಣವನ್ನು ನಾಶಮಾಡುವದಕ್ಕೆ ಬಂದಾಗ ನೋಡಿದ ಆ ದರ್ಶನದ ಹಾಗೆಯೇ ಇತ್ತು; ನಾನು ಕೇಬಾರ್ ನದಿಯ ದಡದ ಮೇಲೆ ನೋಡಿದ ದರ್ಶನಗಳ ಹಾಗೆ ಇತ್ತು; ಆಗ ನಾನು ಬೋರಲು ಬಿದ್ದೆನು.