Home Bibles ಆದಿಕಾಂಡ 40:12 · ಕನ್ನಡ ಬೈಬಲ್
ಆದಿಕಾಂಡ 40:12 · ಕನ್ನಡ ಬೈಬಲ್

ಅದಕ್ಕೆ ಯೋಸೇಫನು--ಅದರ ಅರ್ಥ ಏನಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ.

Cross references

ಆದಿಕಾಂಡ 40:18

ಅದಕ್ಕೆ ಯೋಸೇಫನು ಪ್ರತ್ಯುತ್ತರವಾಗಿ--ಅದರ ಅರ್ಥವು ಇದೇ--ಆ ಮೂರು ಪುಟ್ಟಿಗಳು ಮೂರು ದಿನಗಳು.

ಆದಿಕಾಂಡ 41:12

ಮೈಗಾವಲಿನ ಅಧಿಪತಿಗೆ ಸೇವಕ ನಾಗಿದ್ದ ಇಬ್ರಿಯನಾದ ಯೌವನಸ್ಥನು ಅಲ್ಲಿ ನಮ್ಮ ಸಂಗಡ ಇದ್ದನು. ಅವನಿಗೆ ನಾವು ನಮ್ಮ ಕನಸುಗಳನ್ನು ತಿಳಿಸಿದಾಗ ಅವನು ನಮ್ಮ ನಮ್ಮ ಕನಸಿನ ಪ್ರಕಾರ ಅರ್ಥವನ್ನು ಹೇಳಿದನು.

ಆದಿಕಾಂಡ 41:25

ಆಗ ಯೋಸೇಫನು ಫರೋಹನಿಗೆ--ಫರೋ ಹನ ಕನಸು ಒಂದೇ; ದೇವರು ಮಾಡುವದಕ್ಕಿರು ವದನ್ನು ಫರೋಹನಿಗೆ ತಿಳಿಸಿದ್ದಾನೆ.

ಆದಿಕಾಂಡ 41:26

ಆ ಏಳು ಒಳ್ಳೇ ಹಸುಗಳು ಏಳು ವರುಷಗಳು; ಏಳು ಒಳ್ಳೇ ತೆನೆಗಳು ಏಳು ವರುಷಗಳೇ; ಅದು ಒಂದೇ ಕನಸು.

ಆದಿಕಾಂಡ 41:28

ನಾನು ಫರೋಹನಿಗೆ ಹೇಳಿದ ಮಾತು ಇದೇ--ದೇವರು ಮಾಡುವದಕ್ಕಿರುವದನ್ನು ಫರೋಹನಿಗೆ ತೋರಿಸಿದ್ದಾನೆ.

ನ್ಯಾಯಾಧಿಪತಿಗಳು 7:14

ಅವನ ಜೊತೆಗಾರನು ಪ್ರತ್ಯುತ್ತರ ಕೊಟ್ಟು --ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲ್‌ನ ಮನುಷ್ಯನ ಕತ್ತಿಯೇ ಹೊರತು ಬೇರೆ ಯಲ್ಲ. ದೇವರು ಮಿದ್ಯಾನ್ಯರನ್ನೂ ಈ ಸಮಸ್ತ ದಂಡನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟನು ಅಂದನು.

ದಾನಿಯೇಲ 2:36

ಇದೇ ಕನಸು! ಮತ್ತು ಇದರ ಅರ್ಥವನ್ನು ನಾವು ಅರಸನ ಮುಂದೆ ಹೇಳು ತ್ತೇವೆ.

ದಾನಿಯೇಲ 4:19

ಆಗ ಬೆಲ್ತೆಶಚ್ಚರನೆಂಬ ಹೆಸರುಳ್ಳ ದಾನಿಯೇಲನು ಒಂದು ಗಳಿಗೆ ವಿಸ್ಮಿತನಾಗಿ ತನ್ನ ಆಲೋಚನೆಗಳಲ್ಲಿ ಕಳವಳಗೊಂಡನು. ಆಗ ಅರಸನು ಮಾತನಾಡಿ-- ಬೆಲ್ತೆಶಚ್ಚರನೇ, ಕನಸಾಗಲಿ ಅದರ ಅರ್ಥವಾಗಲಿ ನಿನ್ನನ್ನು ಕಳವಳಪಡಿಸದಿರಲಿ ಅಂದನು. ಆಗ ಬೆಲ್ತೆಶ ಚ್ಚರನು ಪ್ರತ್ಯುತ್ತರವಾಗಿ--ನನ್ನ ಒಡೆಯನೇ, ಆ ಕನಸು ನಿನ್ನ ವೈರಿಗಳಿಗೂ ಅದರ ಅರ್ಥವು ನಿನ್ನ ಶತ್ರುಗಳಿಗೂ ಆಗಲಿ.

ಮತ್ತಾಯ 26:26

ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿ ಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ ಮುರಿದು ತನ್ನ ಶಿಷ್ಯರಿಗೆ ಕೊಟ್ಟು--ತಕ್ಕೊಳ್ಳಿರಿ, ತಿನ್ನಿರಿ; ಇದು ನನ್ನ ದೇಹ ಅಂದನು.

1 ಕೊರಿಂಥದವರಿಗೆ 10:4

ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ.

ಗಲಾತ್ಯದವರಿಗೆ 4:25

ಹಾಗರ್‌ ಅಂದರೆ ಅರಬಸ್ಥಾನದಲ್ಲಿ ಸೀನಾಯಿ ಪರ್ವತ. ಆಕೆಯು ಈಗಿನ ಯೆರೂಸಲೇಮ್‌ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಕೆಯು ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ.

Interlinear

Choose Theme