Home Bibles ಯೆರೆಮಿಯ 1:10 · ಕನ್ನಡ ಬೈಬಲ್
ಯೆರೆಮಿಯ 1:10 · ಕನ್ನಡ ಬೈಬಲ್

ನೋಡು, ನಿನ್ನನ್ನು ಕೀಳುವದಕ್ಕೂ ಕೆಳಗೆ ಹಾಕಿ ಬಿಡುವದಕ್ಕೂ ನಾಶಮಾಡುವದಕ್ಕೂ ಕೆಡವಿಹಾಕುವದಕ್ಕೂ ಕಟ್ಟುವದಕ್ಕೂ ನೆಡುವದಕ್ಕೂ ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ಈ ದಿನ ನಿನ್ನನ್ನು ನೇಮಿಸಿದ್ದೇನೆ ಅಂದನು.

Cross references

1 ಅರಸುಗಳು 17:1

ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.

1 ಅರಸುಗಳು 19:17

ಯೇಹುವಿನ ಕತ್ತಿಗೆ ತಪ್ಪಿದವನನ್ನು ಎಲೀಷನು ಕೊಂದುಹಾಕುವನು.

ಸಭಾಪ್ರಸಂಗಿ 3:3

ಕೊಲ್ಲುವದಕ್ಕೆ ಒಂದು ಸಮಯ, ಸ್ವಸ್ಥಮಾಡುವದಕ್ಕೆ ಒಂದು ಸಮಯ ಕೆಡವಿ ಬಿಡುವದಕ್ಕೆ ಒಂದು ಸಮಯ, ಕಟ್ಟುವದಕ್ಕೆ ಒಂದು ಸಮಯ;

ಯೆಶಾಯ 44:26

ತನ್ನ ಸೇವಕನ ಮಾತು ಗಳನ್ನು ಸ್ಥಾಪಿಸುವವನೂ ತನ್ನ ದೂತರ ಆಲೋ ಚನೆಯನ್ನು ಪೂರೈಸುವವನೂ ಯೆರೂಸಲೇಮಿಗೆ--ನೀನು ನಿವಾಸವಾಗುವಿ; ಯೆಹೂದಪಟ್ಟಣಗಳಿಗೆ--ಕಟ್ಟಲ್ಪಡುವಿ; ಅದರ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು ಎಂದು ಅನ್ನುವವನೂ

ಯೆರೆಮಿಯ 18:7

ನಾನು ಈ ಸ್ಥಳದಲ್ಲಿ ಯೆಹೂದದ, ಯೆರೂಸಲೇಮಿನ ಆಲೋಚನೆಯನ್ನು ಶೂನ್ಯ ಮಾಡುವೆನು; ಅವರ ಶತ್ರುಗಳ ಮುಂದೆಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಿಂದಲೂ ಅವರನ್ನು ಕತ್ತಿಯಿಂದ ಬೀಳು ವಂತೆ ಮಾಡುವೆನು; ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.

ಯೆರೆಮಿಯ 24:6

ಬೇರೆ ದೇವರುಗಳನ್ನು ಸೇವಿಸುವದಕ್ಕೂ ಆರಾಧಿಸುವದಕ್ಕೂ ಹಿಂಬಾಲಿಸಬೇಡಿರಿ; ನಿಮ್ಮ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸಬೇಡಿರಿ; ಆಗ ನಿಮಗೆ ಯಾವ ಕೇಡೂ ಮಾಡೆನು.

ಯೆರೆಮಿಯ 25:13

ಹೀಗಿ ರುವದರಿಂದ ನಿಮ್ಮ ಮಾರ್ಗಗಳನ್ನೂ ಕೃತ್ಯಗಳನೂ ತಿದ್ದಿಕೊಳ್ಳಿರಿ; ನಿಮ್ಮ ದೇವರಾದ ಕರ್ತನ ಸ್ವರಕ್ಕೆ ವಿಧೇಯರಾಗಿರಿ; ಆಗ ಕರ್ತನು ನಿಮಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯಕ್ಕಾಗಿ ಪಶ್ಚಾತ್ತಾಪಪಡು ವನು.

ಯೆರೆಮಿಯ 25:15

ಆದರೂ ನೀವು ನನ್ನನ್ನು ಕೊಂದುಹಾಕಿದರೆ ನಿಮ್ಮ ಮೇಲೆಯೂ ಈ ಪಟ್ಟಣದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಅಪರಾಧವಿಲ್ಲದ ರಕ್ತವನ್ನು ಬರಮಾಡು ತ್ತೀರೆಂದು ನಿಶ್ಚಯವಾಗಿ ತಿಳುಕೊಳ್ಳಿರಿ, ಈ ವಾಕ್ಯಗಳ ನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಅಂದನು.

ಯೆರೆಮಿಯ 27:2

ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಬಾಬೆಲಿನ ಅರಸನ ನೊಗವನ್ನು ಮುರಿದಿದ್ದೇನೆ.

ಯೆರೆಮಿಯ 31:4

ಅವನು ಅದನ್ನು ವಶಪಡಿಸಿಕೊಳ್ಳುವನು; ಯೆಹೂದದ ಅರಸನಾದ ಚಿದ್ಕೀಯನು ಕಸ್ದೀಯರ ಕೈಗೆ ತಪ್ಪಿಸಿಕೊಳ್ಳದೆ ನಿಶ್ಚಯ ವಾಗಿ ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವನು, ಸಾಕ್ಷಾತ್ತಾಗಿ ಅವನ ಸಂಗಡ ಮಾತನಾಡುವನು; ಅವನ ಕಣ್ಣುಗಳು ಅವನ ಕಣ್ಣುಗಳನ್ನು ನೋಡುವವು.

ಯೆರೆಮಿಯ 31:28

ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣವನ್ನು ಕಸ್ದೀಯರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಒಪ್ಪಿಸು ತ್ತೇನೆ; ಅವನು ಅದನ್ನು ವಶಪಡಿಸಿಕೊಳ್ಳುವನು.

ಯೆರೆಮಿಯ 46:1

ಫರೋಹನು ಗಾಜಾವನ್ನು ಹೊಡೆಯುವದಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಬಂದ ಕರ್ತನ ವಾಕ್ಯವು.

ಯೆಹೆಜ್ಕೇಲ 32:18

ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು.

ಯೆಹೆಜ್ಕೇಲ 36:36

ಆಮೇಲೆ ನಿಮ್ಮ ಸುತ್ತಲೂ ಉಳಿದಿರುವ ಅನ್ಯಜನಾಂಗಗಳು ನಶಿಸಿ ಹೋಗಿರುವ ಸ್ಥಳಗಳನ್ನು ಮತ್ತು ಹಾಳಾಗಿರುವ ಸ್ಥಳದಲ್ಲಿ ಗಿಡ ನೆಟ್ಟ ವನು ಕರ್ತನಾದ ನಾನೇ ಎಂದು ತಿಳಿಯುವರು; ಕರ್ತನಾದ ನಾನೇ ಇದನ್ನು ಹೇಳಿದ್ದೇನೆ, ನಾನೇ ಇದನ್ನು ಮಾಡುತ್ತೇನೆ.

ಯೆಹೆಜ್ಕೇಲ 43:3

ಇದು, ನಾನು ನೋಡಿದ ದರ್ಶನದ ತೋರ್ವಿಕೆಯ ಪ್ರಕಾರ ಇತ್ತು ನಾನು ಪಟ್ಟಣವನ್ನು ನಾಶಮಾಡುವದಕ್ಕೆ ಬಂದಾಗ ನೋಡಿದ ಆ ದರ್ಶನದ ಹಾಗೆಯೇ ಇತ್ತು; ನಾನು ಕೇಬಾರ್‌ ನದಿಯ ದಡದ ಮೇಲೆ ನೋಡಿದ ದರ್ಶನಗಳ ಹಾಗೆ ಇತ್ತು; ಆಗ ನಾನು ಬೋರಲು ಬಿದ್ದೆನು.

ಹೊಶೇಯ 6:5

ಆದದರಿಂದ ನಾನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು ನನ್ನ ಬಾಯಿ ಮಾತುಗಳಿಂದ ಅವರನ್ನು ಕೊಂದುಹಾಕಿದ್ದೇನೆ; ನಿನ್ನ ನ್ಯಾಯತೀರ್ಪುಗಳು ಬೆಳಕಿನ ಹಾಗೆ ಹೊರಟವು.

ಆಮೋಸ 3:7

ನಿಶ್ಚಯ ವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಮರ್ಮ ವನ್ನು ತಿಳಿಸದೆ ಕರ್ತನಾದ ದೇವರು ಏನನ್ನೂ ಮಾಡು ವದಿಲ್ಲ.

ಆಮೋಸ 9:11

ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಹರಕುಗಳನ್ನು ಮುಚ್ಚುವೆನು. ಅವನ ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.

ಜೆಕರ್ಯ 1:6

ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.

2 ಕೊರಿಂಥದವರಿಗೆ 10:4

(ನಾವು ಉಪಯೋಗಿಸುವ ಯುದ್ಧಾಯುಧಗಳು ಶರೀರ ಸಂಬಂಧವಾದ ಆಯುಧ ಗಳಲ್ಲ; ಅವು ದೇವರ ಮೂಲಕ ಬಲವಾಗಿದ್ದು ಬಲ ವಾದ ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ).

ಪ್ರಕಟನೆ 11:3

ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.

ಪ್ರಕಟನೆ 19:19

ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು.

Interlinear

Choose Theme