Home Bibles ಆದಿಕಾಂಡ 24:26 · ಕನ್ನಡ ಬೈಬಲ್
ಆದಿಕಾಂಡ 24:26 · ಕನ್ನಡ ಬೈಬಲ್

ಆಗ ಆ ಮನುಷ್ಯನು ಬಾಗಿ ಕರ್ತನಿಗೆ ಅಡ್ಡಬಿದ್ದು ಆತನನ್ನು ಆರಾಧಿ ಸುತ್ತಾ--

Cross references

ಆದಿಕಾಂಡ 22:5

ಅಬ್ರಹಾಮನು ತನ್ನ ಯುವಕರಿಗೆ--ಕತ್ತೆಯ ಸಂಗಡ ಇಲ್ಲಿಯೇ ಇರ್ರಿ. ನಾನೂ ಹುಡುಗನೂ ಅಲ್ಲಿಗೆ ಹೋಗಿ ಆರಾಧನೆ ಮಾಡಿ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇವೆ ಅಂದನು.

ಆದಿಕಾಂಡ 24:48

ನನ್ನ ತಲೆಯನ್ನು ಬಾಗಿಸಿ ಕರ್ತನನ್ನು ಆರಾಧಿಸಿ ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿ ಯಾಗಿ ತಕ್ಕೊಳ್ಳುವದಕ್ಕೆ ನನ್ನನ್ನು ಸರಿಯಾದ ಮಾರ್ಗ ದಲ್ಲಿ ನಡಿಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಕರ್ತನನ್ನು ಕೊಂಡಾಡಿದೆನು.

ಆದಿಕಾಂಡ 24:52

ಅಬ್ರಹಾಮನ ಸೇವಕನು ಅವರ ಮಾತುಗಳನ್ನು ಕೇಳಿದಾಗ ಕರ್ತನ ಮುಂದೆ ಅಡ್ಡಬಿದ್ದು ಆತನನ್ನು ಆರಾಧಿಸಿದನು.

ನಿರ್ಗಮಕಾಂಡ 4:31

ಕರ್ತನು ಇಸ್ರಾಯೇಲ್‌ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

ನಿರ್ಗಮಕಾಂಡ 12:27

ನೀವು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ಐಗುಪ್ತ್ಯರನ್ನು ಸಂಹರಿಸಿ ನಮ್ಮ ಮನೆಗಳನ್ನು ಕಾಪಾಡುವದಕ್ಕಾಗಿ ಇಸ್ರಾಯೇಲ್‌ ಮಕ್ಕಳ ಮನೆಗಳನ್ನು ದಾಟಿಹೋದ ಕರ್ತನ ಪಸ್ಕವೇ ಇದು ಎಂದು ನೀವು ಹೇಳಬೇಕು ಅಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.

ನಿರ್ಗಮಕಾಂಡ 34:8

ಆಗ ಮೋಶೆಯು ತ್ವರೆಪಟ್ಟು ನೆಲಕ್ಕೆ ಬೊಗ್ಗಿ ಆತನನ್ನು ಆರಾಧಿಸಿದನು.

ನ್ಯಾಯಾಧಿಪತಿಗಳು 7:15

ಗಿದ್ಯೋನನು ಆ ಕನಸಿನ ವಿವರವನ್ನೂ ಅದರ ಅರ್ಥವನ್ನೂ ಕೇಳಿದಾಗ ಅವನು ಆರಾಧಿಸಿ ಇಸ್ರಾ ಯೇಲ್‌ ದಂಡಿಗೆ ತಿರುಗಿ ಬಂದು--ಏಳಿರಿ, ಯಾಕಂದರೆ ಕರ್ತನು ಮಿದ್ಯಾನ್ಯರ ದಂಡನ್ನು ನಿಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ ಎಂದು ಹೇಳಿದನು.

1 ದಿನವೃತ್ತಾಂತ 29:20

ದಾವೀದನು ಸಮಸ್ತ ಸಭೆಗೆ--ಈಗ ನಿಮ್ಮ ದೇವರಾದ ಕರ್ತನನ್ನು ಸ್ತುತಿಸಿರಿ ಅಂದನು. ಆಗ ಸಭೆಯವರೆಲ್ಲರೂ ತಮ್ಮ ಪಿತೃಗಳ ದೇವರಾದ ಕರ್ತ ನನ್ನು ಸ್ತುತಿಸುತ್ತಾ ತಮ್ಮ ತಲೆಗಳನ್ನು ಬಾಗಿಸಿ ಕರ್ತನನ್ನೂ ಅರಸನನ್ನೂ ಆರಾಧಿಸಿದರು.

2 ದಿನವೃತ್ತಾಂತ 20:18

ಆಗ ಯೆಹೋ ಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು; ಯೆಹೂದದವರೆಲ್ಲರೂ ಯೆರೂಸಲೇಮಿನ ನಿವಾಸಿಗಳೆ ಲ್ಲರೂ ಕರ್ತನ ಮುಂದೆ ಅಡ್ಡಬಿದ್ದು ಕರ್ತನನ್ನು ಆರಾ ಧಿಸಿದರು.

2 ದಿನವೃತ್ತಾಂತ 29:30

ಇದಲ್ಲದೆ ಅರಸನಾದ ಹಿಜ್ಕೀಯನೂ ಪ್ರಧಾ ನರೂ ದಾವೀದನ ಮತ್ತು ಪ್ರವಾದಿಯಾದ ಆಸಾಫನ ಮಾತುಗಳಿಂದ ಕರ್ತನನ್ನು ಸ್ತುತಿಸಬೇಕೆಂದು ಲೇವಿ ಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಬೊಗ್ಗಿಕೊಂಡು ಆರಾಧಿಸಿದರು.

ನೆಹೆಮ್ಯ 8:6

ಆಗ ಎಜ್ರನು ಮಹಾ ದೇವಾರಾಗಿರುವ ಕರ್ತನನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಪ್ರತ್ಯುತ್ತರವಾಗಿ--ಆಮೆನ್‌, ಆಮೆನ್‌ ಎಂದು ಹೇಳಿ ನೆಲದ ವರೆಗೂ ತಮ್ಮ ತಲೆಗಳನ್ನು ಬೊಗ್ಗಿಸಿ ಕರ್ತ ನನ್ನು ಆರಾಧಿಸಿದರು

ಕೀರ್ತನೆಗಳು 22:29

ಭೂಮಿಯ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರೂ ಆತನ ಮುಂದೆ ಅಡ್ಡಬೀಳುವರು.

ಕೀರ್ತನೆಗಳು 66:4

ಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.

ಕೀರ್ತನೆಗಳು 72:9

ಆತನ ಮುಂದೆ ಅರಣ್ಯ ನಿವಾಸಿಗಳು ಎರಗುವರು; ಆತನ ಶತ್ರುಗಳು ಧೂಳನ್ನು ನೆಕ್ಕುವರು.

ಕೀರ್ತನೆಗಳು 95:6

ಬನ್ನಿರಿ, ನಮ್ಮನ್ನು ಉಂಟುಮಾಡಿದ ಕರ್ತನ ಮುಂದೆ ಮೊಣಕಾಲು ಊರೋಣ ಆತನಿಗೆ ಎರಗಿ ಆರಾಧಿಸೋಣ.

ಮೀಕ 6:6

ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ?

ಫಿಲಿಪ್ಪಿಯವರಿಗೆ 2:10

ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.

Interlinear

Choose Theme