Home Bibles ನ್ಯಾಯಾಧಿಪತಿಗಳು 7:15 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 7:15 · ಕನ್ನಡ ಬೈಬಲ್

ಗಿದ್ಯೋನನು ಆ ಕನಸಿನ ವಿವರವನ್ನೂ ಅದರ ಅರ್ಥವನ್ನೂ ಕೇಳಿದಾಗ ಅವನು ಆರಾಧಿಸಿ ಇಸ್ರಾ ಯೇಲ್‌ ದಂಡಿಗೆ ತಿರುಗಿ ಬಂದು--ಏಳಿರಿ, ಯಾಕಂದರೆ ಕರ್ತನು ಮಿದ್ಯಾನ್ಯರ ದಂಡನ್ನು ನಿಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ ಎಂದು ಹೇಳಿದನು.

Cross references

ಆದಿಕಾಂಡ 24:26

ಆಗ ಆ ಮನುಷ್ಯನು ಬಾಗಿ ಕರ್ತನಿಗೆ ಅಡ್ಡಬಿದ್ದು ಆತನನ್ನು ಆರಾಧಿ ಸುತ್ತಾ--

ಆದಿಕಾಂಡ 24:48

ನನ್ನ ತಲೆಯನ್ನು ಬಾಗಿಸಿ ಕರ್ತನನ್ನು ಆರಾಧಿಸಿ ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿ ಯಾಗಿ ತಕ್ಕೊಳ್ಳುವದಕ್ಕೆ ನನ್ನನ್ನು ಸರಿಯಾದ ಮಾರ್ಗ ದಲ್ಲಿ ನಡಿಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಕರ್ತನನ್ನು ಕೊಂಡಾಡಿದೆನು.

ಆದಿಕಾಂಡ 40:8

ಅವರು ಯೋಸೇಫನಿಗೆ--ನಾವು ಕನಸನ್ನು ಕಂಡಿದ್ದೇವೆ; ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ ಅಂದರು. ಯೋಸೇಫನು ಅವರಿಗೆ ಅರ್ಥ ಹೇಳುವದು ದೇವರದಲ್ಲವೋ ಎಂದು ಹೇಳಿ ಅವುಗಳನ್ನು ನನಗೆ ಹೇಳಿರಿ ಅಂದನು.

ಆದಿಕಾಂಡ 41:11

ನಾವು ಒಂದು ರಾತ್ರಿಯಲ್ಲಿ ಕನಸನ್ನು ಕಂಡೆವು. ಒಬ್ಬೊಬ್ಬನ ಕನಸಿಗೆ ಬೇರೆಬೇರೆ ಅರ್ಥವಿತ್ತು.

ನಿರ್ಗಮಕಾಂಡ 4:30

ಕರ್ತನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಹೇಳಿ ಜನರ ಕಣ್ಣುಗಳ ಮುಂದೆ ಸೂಚಕ ಕಾರ್ಯಗಳನ್ನು ಮಾಡಲು. ಜನರು ನಂಬಿದರು.ಕರ್ತನು ಇಸ್ರಾಯೇಲ್‌ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

ನ್ಯಾಯಾಧಿಪತಿಗಳು 3:28

ಅವರ ಸಂಗಡ--ನೀವು ನನ್ನ ಹಿಂದೆ ಬನ್ನಿರಿ; ಕರ್ತನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು ಎಂದು ಅಂದನು. ಅವರು ಅವನ ಹಿಂದೆ ಬಂದು ಮೋವಾಬ್ಯ ರಿಗೆ ಎದುರಾದ ಯೊರ್ದನಿನ ರೇವುಗಳನ್ನು ಹಿಡಿದು ಒಬ್ಬರನ್ನಾದರೂ ದಾಟಗೊಡದೆ

ನ್ಯಾಯಾಧಿಪತಿಗಳು 4:14

ದೆಬೋರಳು ಬಾರಾಕನಿಗೆ--ನೀನು ಏಳು; ಕರ್ತನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸಿಕೊಡುವ ದಿನವು ಇದೇ; ಕರ್ತನು ನಿನ್ನ ಮುಂದೆ ಹೊರಡಲಿಲ್ಲವೋ ಅಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು ತಾಬೋರ್‌ ಬೆಟ್ಟ ದಿಂದ ಇಳಿದನು.

1 ಸಮುವೇಲ 1:28

ಆದದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವ ವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು. ಅವನು ಅಲ್ಲಿ ಕರ್ತನನ್ನು ಆರಾಧಿಸಿದನು.

1 ಸಮುವೇಲ 14:12

ಠಾಣದ ಮನುಷ್ಯರು ಯೋನಾತಾನನಿಗೂ ಅವನ ಆಯುಧ ಹೊರುವವನಿಗೂ--ನಮ್ಮ ಬಳಿಗೆ ಬನ್ನಿರಿ; ನಿಮಗೆ ಕಾರ್ಯ ತೋರಿಸುತ್ತೇವೆ ಎಂದು ಪ್ರತ್ಯುತ್ತರಕೊಟ್ಟರು. ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ವನಿಗೆ--ನನ್ನ ಹಿಂದೆ ಏರಿ ಬಾ; ಕರ್ತನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಟ್ಟನು ಅಂದನು.

2 ದಿನವೃತ್ತಾಂತ 20:18

ಆಗ ಯೆಹೋ ಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು; ಯೆಹೂದದವರೆಲ್ಲರೂ ಯೆರೂಸಲೇಮಿನ ನಿವಾಸಿಗಳೆ ಲ್ಲರೂ ಕರ್ತನ ಮುಂದೆ ಅಡ್ಡಬಿದ್ದು ಕರ್ತನನ್ನು ಆರಾ ಧಿಸಿದರು.

2 ಕೊರಿಂಥದವರಿಗೆ 10:4

(ನಾವು ಉಪಯೋಗಿಸುವ ಯುದ್ಧಾಯುಧಗಳು ಶರೀರ ಸಂಬಂಧವಾದ ಆಯುಧ ಗಳಲ್ಲ; ಅವು ದೇವರ ಮೂಲಕ ಬಲವಾಗಿದ್ದು ಬಲ ವಾದ ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ).

Interlinear

Choose Theme