ಆದಿಕಾಂಡ 24:25 · ಕನ್ನಡ ಬೈಬಲ್
ಇದಲ್ಲದೆ ಆಕೆಯು ಅವನಿಗೆ--ಹುಲ್ಲೂ ಮೇವೂ ನಮ್ಮಲ್ಲಿ ಸಾಕಷ್ಟು ಇವೆ; ನೀವು ಇಳುಕೊಳ್ಳುವದಕ್ಕೂ ಸ್ಥಳವಿದೆ ಎಂದು ಅವನಿಗೆ ಹೇಳಿದಳು.
Cross references
ಆದಿಕಾಂಡ 18:4
ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ: ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ.
ನ್ಯಾಯಾಧಿಪತಿಗಳು 19:19
ಆದರೂ ನಮ್ಮ ಕತ್ತೆಗಳಿಗೆ ಮೇವೂ ನನಗೂ ನಿನ್ನ ದಾಸಿಗೂ ನಿನ್ನ ಸೇವಕರ ಸಂಗಡ ಇರುವ ಯೌವನಸ್ಥನಿಗೂ ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು; ಏನೂ ಕೊರತೆ ಇಲ್ಲ ಅಂದನು.
ಯೆಶಾಯ 32:8
ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
1 ಪೇತ್ರ 4:9
ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.