ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ: ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ.
Cross references
ಇಗೋ, ಪ್ರಭುಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ಇಳುಕೊಂಡು ರಾತ್ರಿ ಕಳೆಯಿರಿ; ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು ಎಂದು ಬೇಡಿಕೊಂಡನು. ಅದಕ್ಕೆ ಅವರು--ಹಾಗಲ್ಲ; ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ ಅಂದರು.
ಆಗ ಆ ಮನುಷ್ಯನು ಮನೆಯೊಳಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಟ್ಟನು. ಅವನಿಗೆ ಅವನ ಸಂಗಡವಿದ್ದವರಿಗೆ ಕಾಲುಗಳನ್ನು ತೊಳೆಯುವದಕ್ಕೆ ನೀರು ಕೊಟ್ಟನು.
ಆ ಮನುಷ್ಯನು ಅವರನ್ನು ಯೋಸೇಫನ ಮನೆಯೊಳಗೆ ಕರಕೊಂಡು ಬಂದು ಅವರಿಗೆ ನೀರನ್ನು ಕೊಟ್ಟಾಗ ಅವರು ತಮ್ಮ ಕಾಲುಗಳನ್ನು ತೊಳ ಕೊಂಡರು. ಇದಲ್ಲದೆ ಅವರ ಕತ್ತೆಗಳಿಗೆ ಮೇವನ್ನು ಹಾಕಿದನು.
ಅವನನ್ನು ತನ್ನ ಮನೆಗೆ ಕರಕೊಂಡು ಹೋಗಿ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕಾಲು ಗಳನ್ನು ತೊಳೆದು ತಿಂದು ಕುಡಿದರು.
ಆಗ ಅವಳು ಎದ್ದು ಬೋರಲು ಬಿದ್ದು--ಇಗೋ, ನಿನ್ನ ದಾಸಿ ನನ್ನ ಒಡೆ ಯನ ಸೇವಕರ ಪಾದಗಳನ್ನು ತೊಳೆಯುವ ಒಬ್ಬ ಸೇವಕಳಾಗಬೇಕು ಅಂದಳು.
ತರುವಾಯ ಆತನು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನ ನಿಗೆ--ಈ ಸ್ತ್ರೀಯನ್ನು ನೋಡಿದೆಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ; ಇವಳಾದರೋ ನನ್ನ ಪಾದ ಗಳನು ಕಣ್ಣೀರಿನಿಂದ ತೊಳೆದು ತನ್ನ ತಲೇಕೂದಲಿನಿಂದ ಅವುಗಳನ್ನು ಒರೆ
ತರುವಾಯ ಆತನು ಬೋಗುಣಿ ಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ ತಾನು ನಡುವಿಗೆ ಕಟ್ಟಿಕೊಂಡ ಕೈ ಪಾವಡದಿಂದ ಅವುಗಳನ್ನು ಒರಸುವದಕ್ಕೂ ಪ್ರಾರಂಭಿಸಿದನು.
ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ