ಸಾರಳು ಕಾನಾನ್ ದೇಶದಲ್ಲಿರುವ ಹೆಬ್ರೋನ್ ಎಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡುವದಕ್ಕೂ ಅಳುವದಕ್ಕೂ ಬಂದನು.
Cross references
ಆಗ ಅಬ್ರಾಮನು ತನ್ನ ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನ ಲ್ಲಿರುವ ಮಮ್ರೆಯ ಮೈದಾನಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಅವನು ಅಲ್ಲಿ ಕರ್ತನಿಗೆ ಬಲಿ ಪೀಠವನ್ನು ಕಟ್ಟಿದನು.
ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಯಾದ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಹೊಲದ ಗವಿಯಲ್ಲಿ ಹೂಣಿಟ್ಟನು.ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು.
ಇಸಾಕನು ಆಕೆಯನ್ನು ತನ್ನ ತಾಯಿ ಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಅಂಗೀಕರಿಸಿದನು. ಆಕೆಯು ಅವನ ಹೆಂಡತಿಯಾದಳು; ಅವನು ಆಕೆಯನ್ನು ಪ್ರೀತಿಮಾಡಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ವಿಷಯದಲ್ಲಿ ಆದರಣೆ ಹೊಂದಿದನು.
ತಂದೆಯು ಯಾಕೋಬನಿಗೆ ಕೊಟ್ಟ ಆಶೀರ್ವಾದ ಕ್ಕೋಸ್ಕರ ಏಸಾವನು ಅವನನ್ನು ಹಗೆಮಾಡಿ--ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸವಿಾಪ ವಾಗಿವೆ, ತರುವಾಯ ನಾನು ನನ್ನ ಸಹೋದರ ನಾದ ಯಾಕೋಬನನ್ನು ಕೊಲ್ಲುವೆನು ಎಂದು ಹೃದಯದಲ್ಲಿ ಅಂದುಕೊಂಡನು.
ಆಗ ಯೋಸೇಫನು ತನ್ನ ತಂದೆಯ ಮುಖದ ಮೇಲೆ ಬಿದ್ದು ಅತ್ತು ಅವನಿಗೆ ಮುದ್ದಿಟ್ಟನು.
ಅವರು ಯೊರ್ದನಿನ ಆಚೆ ಇರುವ ಆಟಾದ್ ಕಣಕ್ಕೆ ಬಂದು ಅಲ್ಲಿ ಅಧಿಕವಾದ ಮಹಾಗೋಳಾಟದಿಂದ ದುಃಖ ಪಟ್ಟರು. ಅವನು ತನ್ನ ತಂದೆಗಾಗಿ ಏಳು ದಿವಸಗಳ ವರೆಗೆ ದುಃಖಪಟ್ಟನು.
ಅವರು ದಕ್ಷಿಣದ ಕಡೆಯಲ್ಲಿ ಹೆಬ್ರೋನಿನ ವರೆಗೆ ಬಂದರು; ಅಲ್ಲಿ ಅನಾಕನ ಮಕ್ಕಳಾದ ಅಹೀಮನ ಶೇಷೈಯನೂ ತಲ್ಮೈಯನೂ ಇದ್ದರು. ಹೆಬ್ರೋನು ಐಗುಪ್ತದೇಶದ ಚೋವನಿಗಿಂತ ಏಳು ವರುಷಗಳ ಮೊದಲು ಕಟ್ಟಲ್ಪ ಟ್ಟಿತ್ತು.
ಆರೋನನು ತೀರಿಹೋದನೆಂದು ಸಭೆಯಲ್ಲಾ ನೋಡಿದಾಗ ಇಸ್ರಾಯೇಲ್ಯರ ಮನೆಯ ವರೆಲ್ಲರು ಆರೋನನಿಗೋಸ್ಕರ ಮೂವತ್ತು ದಿವಸದ ವರೆಗೂ ದುಃಖಿಸಿದರು.
ಇಸ್ರಾಯೇಲ್ ಮಕ್ಕಳು ಮೋವಾಬಿನ ಬೈಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ಅತ್ತರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಗೋಳಾಟದಲ್ಲಿ ಅಳುವ ದಿವಸಗಳು ಮುಗಿದವು.
ಅದನ್ನೂ ಅದರ ಅರಸನನ್ನೂ ಸಮಸ್ತ ಪಟ್ಟಣ ಗಳನ್ನೂ ಹಿಡಿದು ಅವುಗಳನ್ನು ಕತ್ತಿಯಿಂದ ಹೊಡೆದು ಅದರಲ್ಲಿರುವ ಸಮಸ್ತ ಪ್ರಾಣಗಳನ್ನು ಒಬ್ಬನನ್ನಾ ದರೂ ಉಳಿಸದೆ ಸಂಪೂರ್ಣ ನಾಶಮಾಡಿದನು. ಹೆಬ್ರೋನಿಗೂ ಲಿಬ್ನಕ್ಕೂ ಅದರ ಅರಸನಿಗೂ ಮಾಡಿದ ಹಾಗೆಯೇ ದೆಬೀರಕ್ಕೂ ಅದರ ಅರಸನಿಗೂ ಮಾಡಿದನು.
ಹೀಗೆಯೇ ಕೆನೆಜ್ಯನಾದ ಯೆಫು ನ್ನೆಯ ಮಗನಾದ ಕಾಲೇಬನು ಇಸ್ರಾಯೇಲಿನ ದೇವರಾದ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿ ದ್ದರಿಂದ ಹೆಬ್ರೋನು ಇಂದಿನ ವರೆಗೂ ಅವನ ಬಾಧ್ಯತೆ ಯಾಯಿತು.ಹೆಬ್ರೋನಿನ ಹೆಸರು ಮೊದಲು ಕಿರ್ಯತ್‌ಅರ್ಬ; ಈ ಹೆಸರು ಅನಾಕ್ಯರಲ್ಲಿ ಒಬ್ಬ ದೊಡ್ಡ ಮನುಷ್ಯನದು. ದೇಶವು ಯುದ್ಧವಿಲ್ಲದೆ ಶಾಂತವಾಯಿತು.
ಹಾಗೆಯೇ ಅವರು ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ ಎಫ್ರಾ ಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಯೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯರ್ತ್‌ಬ ವನ್ನೂ ನೇಮಿಸಿದರು.
ಯೂದನು ಪೂರ್ವದಲ್ಲಿ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್, ತಲ್ಮೈರನ್ನು ಕೊಂದುಹಾಕಿದನು.
ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
ಸಮುವೇಲನು ಸತ್ತುಹೋದನು; ಇಸ್ರಾಯೇಲ್ಯರೆಲ್ಲರೂ ಕೂಡಿಬಂದು ಅವನಿ ಗೋಸ್ಕರ ಗೋಳಾಡಿ ರಾಮದಲ್ಲಿರುವ ಅವನ ಮನೆ ಯಲ್ಲಿ ಅವನನ್ನು ಹೂಣಿಟ್ಟರು. ದಾವೀದನು ಎದ್ದು ಪಾರಾನ್ ಅರಣ್ಯಕ್ಕೆ ಹೋದನು.
ಸಮುವೇಲನು ಸತ್ತು ಹೋಗಿದ್ದನು; ಇಸ್ರಾಯೇ ಲ್ಯರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಸ್ವಂತ ಪಟ್ಟಣವಾದ ರಾಮದಲ್ಲಿ ಅವನನ್ನು ಹೂಣಿಟ್ಟಿದ್ದರು. ಇದಲ್ಲದೆ ಸೌಲನು ಯಕ್ಷಿಣಿಗಾರರನ್ನೂ ಮಂತ್ರವಾದಿ ಗಳನ್ನೂ ದೇಶದಲ್ಲಿಂದ ಹೊರಡಿಸಿದ್ದನು.
ಸೌಲನೂ ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಕರ್ತನ ಜನರೂ ಕತ್ತಿಯಿಂದ ಬಿದ್ದ ಕಾರಣ ಅವರಿ ಗೋಸ್ಕರ ಗೋಳಾಡಿ ಅತ್ತು ಸಾಯಂಕಾಲದ ವರೆಗೂ ಉಪವಾಸವಾಗಿದ್ದರು.
ಆಗ ದಾವೀದನು ಸೌಲನ ಮೇಲೆಯೂ ಅವನ ಮಗನಾದ ಯೋನಾತಾನನ ಮೇಲೆಯೂ ಗೋಳಾಟ ದಿಂದ ಈ ಗೀತೆ ಹಾಡಿ ಗೋಳಾಡಿದನು.
ದಾವೀದನು ಹೆಬ್ರೋನಿನಲ್ಲಿ ಯೆಹೂದನ ಮನೆಯವರ ಮೇಲೆ ಅರಸನಾಗಿದ್ದ ದಿವಸಗಳು ಏಳು ವರುಷ ಆರು ತಿಂಗಳು.
ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರೂ ಹೆಬ್ರೋನಿನಲ್ಲಿರುವ ಅರಸನ ಬಳಿಗೆ ಬಂದಾಗ ಅರಸ ನಾದ ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸ ನಾಗಿರಲು ಅಭಿಷೇಕಮಾಡಿದರು.
ಅವನು ಹೆಬ್ರೋನಿನಲ್ಲಿ ಯೆಹೂದ ಜನರ ಮೇಲೆ ಏಳುವರೆ ವರುಷ ಆಳಿದನು. ಯೆರೂಸಲೇಮಿನಲ್ಲಿ ಎಲ್ಲಾ ಇಸ್ರಾಯೇಲ್ಯರ ಮೇಲೆಯೂ ಎಲ್ಲಾ ಯೆಹೂ ದದ ಜನರ ಮೇಲೆಯೂ ಮೂವತ್ತುಮೂರು ವರುಷ ಆಳಿದನು.
ಯೆಹೂದದ ಕುಲಗಳಲ್ಲಿ ಆರೋನನ ಕುಮಾರರಿಗೆ ಕೊಟ್ಟ ಕುಲಗಳಲ್ಲಿ ಯಾವವಂದರೆ ಆಶ್ರಯವಾದ ಹೆಬ್ರೋನೂ ಲಿಬ್ನವೂ, ಅದರ ಉಪನಗರಗಳೂ, ಯತ್ತೀರೂ ಎಷ್ಟೆಮೋವವೂ ಅವುಗಳ ಉಪನಗರಗಳೂ,
ಇದಲ್ಲದೆ ಯೆರೆವಿಾಯನು ಯೋಷೀಯನಿಗೋಸ್ಕರ ಗೋಳಾಡಿದನು. ಹಾಡುಗಾರರೂ ಹಾಡುಗಾರ್ತಿ ಯರೂ ಯೋಷೀಯನಿಗೋಸ್ಕರ ಇದುವರೆಗೂ ತಮ್ಮ ಗೋಳಾಟಗಳಲ್ಲಿ ಹೇಳುತ್ತಾರೆ. ಇದು ಇಸ್ರಾಯೇಲಿ ನಲ್ಲಿ ನೇಮಕವಾಯಿತು. ಇಗೋ, ಅವು ಪ್ರಲಾಪ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
ದೇಶವು ವ್ಯಭಿಚಾರಗಳಿಂದ ತುಂಬಿದೆ; ಶಾಪದಿಂದ ದುಃಖಿಸು ತ್ತದೆ; ಅರಣ್ಯದ ಮನೋಹರವಾದ ಸ್ಥಳಗಳು ಒಣಗಿ ಹೋಗಿವೆ; ಅವರ ಓಟವು ಕೆಟ್ಟದ್ದಾಗಿದೆ; ಅವರ ಶಕ್ತಿಯು ಸರಿ ಇಲ್ಲ.
ಆದರೆ ಯಾರು ಕರ್ತನ ಆಲೋಚನೆಯಲ್ಲಿ ನಿಂತು ಆತನ ವಾಕ್ಯವನ್ನು ತಿಳುಕೊಂಡು ಕೇಳಿದ್ದಾರೆ? ಯಾರು ಆತನ ವಾಕ್ಯದಲ್ಲಿ ಲಕ್ಷ್ಯವಿಟ್ಟು ಕೇಳಿದ್ದಾರೆ?
ಮನುಷ್ಯಪುತ್ರನೇ, ಇಗೋ, ಒಂದೇ ಏಟಿನಿಂದ ನೇತ್ರಾನಂದವಾಗಿರುವದನ್ನು ನಿನ್ನಿಂದ ತೆಗೆಯುತ್ತೇನೆ; ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ.
ಮನೆ ಯಲ್ಲಿ ಆಕೆಯ ಕೂಡ ಇದ್ದು ಆಕೆಯನ್ನು ಆದರಿಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವದನ್ನು ನೋಡಿ--ಆಕೆಯು ಅಳುವದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಾಳೆಂದು ತಿಳಿದು ಆಕೆ ಯನ್ನು ಹಿಂಬಾಲಿಸಿದರು.
ಯೇಸು ಅತ್ತನು.
ಭಕ್ತರಾದ ಜನರು ಸ್ತೆಫನನನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.