Home Bibles 1 ಸಮುವೇಲ 28:3 · ಕನ್ನಡ ಬೈಬಲ್
1 ಸಮುವೇಲ 28:3 · ಕನ್ನಡ ಬೈಬಲ್

ಸಮುವೇಲನು ಸತ್ತು ಹೋಗಿದ್ದನು; ಇಸ್ರಾಯೇ ಲ್ಯರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಸ್ವಂತ ಪಟ್ಟಣವಾದ ರಾಮದಲ್ಲಿ ಅವನನ್ನು ಹೂಣಿಟ್ಟಿದ್ದರು. ಇದಲ್ಲದೆ ಸೌಲನು ಯಕ್ಷಿಣಿಗಾರರನ್ನೂ ಮಂತ್ರವಾದಿ ಗಳನ್ನೂ ದೇಶದಲ್ಲಿಂದ ಹೊರಡಿಸಿದ್ದನು.

Cross references

ನಿರ್ಗಮಕಾಂಡ 22:17

ಅವಳ ತಂದೆಗೆ ಆಕೆಯನ್ನು ಕೊಡುವದಕ್ಕೆ ಮನಸ್ಸಿಲ್ಲದಿದ್ದರೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.

ನಿರ್ಗಮಕಾಂಡ 22:18

ಮಾಟಗಾರ್ತಿಯನ್ನು ಬದುಕ ಗೊಡಿಸಬಾರದು.

ಲೇವ್ಯಕಾಂಡ 19:31

ಮಂತ್ರವಾದಿಗಳನ್ನು ಲಕ್ಷಿಸಬೇಡ, ಅಲ್ಲದೆ ಅವರಿಂದ ಹೊಲೆಯಾಗದಂತೆ ಮಾಟಗಾರ ರನ್ನು ಅನುಸರಿಸಬೇಡ; ನಿಮ್ಮ ದೇವರಾಗಿರುವ ಕರ್ತನು ನಾನೇ.

ಲೇವ್ಯಕಾಂಡ 20:6

ಮಂತ್ರವಾದಿಗಳ ಕಡೆಗೆ ತಿರುಗಿ ಕೊಳ್ಳುವವನಿಗೂ ವ್ಯಭಿಚಾರಮಾಡುವಂತೆ ಮಾಟಗಾರರನ್ನು ಹಿಂಬಾಲಿಸುವವನಿಗೂ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.

ಲೇವ್ಯಕಾಂಡ 20:27

ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು.

ದ್ವಿತೀಯೋಪದೇಶಕಾಂಡ 18:10

ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ

1 ಸಮುವೇಲ 7:17

ಅವನು ರಾಮಕ್ಕೆ ತಿರಿಗಿ ಬರುತ್ತಿದ್ದನು. ಯಾಕಂದರೆ ಅಲ್ಲಿ ಅವನ ಮನೆ ಇತ್ತು; ಅಲ್ಲಿ ಇಸ್ರಾಯೇಲಿಗೆ ನ್ಯಾಯ ತೀರಿಸಿ ದನು; ಕರ್ತನಿಗೆ ಅಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು.

1 ಸಮುವೇಲ 15:23

ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.

1 ಸಮುವೇಲ 25:1

ಸಮುವೇಲನು ಸತ್ತುಹೋದನು; ಇಸ್ರಾಯೇಲ್ಯರೆಲ್ಲರೂ ಕೂಡಿಬಂದು ಅವನಿ ಗೋಸ್ಕರ ಗೋಳಾಡಿ ರಾಮದಲ್ಲಿರುವ ಅವನ ಮನೆ ಯಲ್ಲಿ ಅವನನ್ನು ಹೂಣಿಟ್ಟರು. ದಾವೀದನು ಎದ್ದು ಪಾರಾನ್‌ ಅರಣ್ಯಕ್ಕೆ ಹೋದನು.

1 ಸಮುವೇಲ 28:9

ಆ ಸ್ತ್ರೀಯು ಅವನಿಗೆ--ಇಗೋ, ಸೌಲನು ಯಕ್ಷಿಣಿಗಾರರನ್ನೂ ಮಂತ್ರಗಾರರನ್ನೂ ದೇಶದಲ್ಲಿಂದ ತೆಗೆದುಬಿಟ್ಟನೆಂದು ನೀನು ಬಲ್ಲೆ. ಈಗ ನಾನು ಸಾಯುವದಕ್ಕೆ ಕಾರಣ ವಾಗುವ ಹಾಗೆ ಯಾಕೆ ನನ್ನ ಪ್ರಾಣಕ್ಕೆ ಉರ್ಲಿಡುತ್ತೀ ಅಂದಳು.

ಯೆಶಾಯ 57:1

ನೀತಿವಂತನು ನಾಶವಾಗುವನು, ಅದನ್ನು ಯಾವ ಮನುಷ್ಯನು ಮನಸ್ಸಿಗೆ ತಾರನು. ಕರುಣೆಯುಳ್ಳ ಮನುಷ್ಯರು ತೆಗೆದುಹಾಕಲ್ಪಡುವರು, ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾಗು ತ್ತಾನೆಂಬದನ್ನು ಯಾರೂ ಯೋಚಿಸರು.

ಅಪೋಸ್ತಲರ ಕೃತ್ಯಗಳು 16:16

ಇದಾದ ಮೇಲೆ ನಾವು ಪ್ರಾರ್ಥನೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಕಾಲಜ್ಞಾನದ ದುರಾತ್ಮ ಹಿಡಿದವಳಾಗಿ ಕಣಿ ಹೇಳುವದರಿಂದ ತನ್ನ ಯಜ ಮಾನರಿಗೆ ಬಹು ಆದಾಯವನ್ನು ತರುತ್ತಿದ್ದ ಒಬ್ಬ ಹುಡುಗಿಯು ನಮ್ಮನ್ನು ಸಂಧಿಸಿದಳು.

Interlinear

Choose Theme