ಅವರು ಯೊರ್ದನಿನ ಆಚೆ ಇರುವ ಆಟಾದ್ ಕಣಕ್ಕೆ ಬಂದು ಅಲ್ಲಿ ಅಧಿಕವಾದ ಮಹಾಗೋಳಾಟದಿಂದ ದುಃಖ ಪಟ್ಟರು. ಅವನು ತನ್ನ ತಂದೆಗಾಗಿ ಏಳು ದಿವಸಗಳ ವರೆಗೆ ದುಃಖಪಟ್ಟನು.
Cross references
ಅವ ನಿಗಾಗಿ ದುಃಖಿಸುವ ದಿನಗಳು ಮುಗಿದ ಮೇಲೆ ಯೋಸೇಫನು ಫರೋಹನ ಮನೆಯವರಿಗೆ--ನಾನು ನಿಮ್ಮ ಕಣ್ಣುಗಳ ಮುಂದೆ ಕೃಪೆ ಹೊಂದಿದ್ದರೆ ಫರೋಹನ ಕಿವಿಗಳಲ್ಲಿ ಈ ಮಾತು ಹೇಳಬೇಕು.
ದೇಶದ ನಿವಾಸಿಗಳಾದ ಕಾನಾನ್ಯರು ಆಟಾದ್ ಕಣದಲ್ಲಿ ಆಗುತ್ತಿದ್ದ ದುಃಖವನ್ನು ನೋಡಿ--ಇದು ಐಗುಪ್ತ್ಯರಿಗೆ ಘೋರವಾದ ದುಃಖ ಎಂದು ಹೇಳಿದರು. ಆದದರಿಂದ ಅದಕ್ಕೆ ಆಬೇಲ್ ಮಿಚ್ರಯಾಮ್ ಎಂದು ಹೆಸರಾಯಿತು. ಅದು ಯೊರ್ದನಿನ ಆಚೆಯಲ್ಲಿದೆ.
ಮನುಷ್ಯನ ಹೆಣವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.
ಮೋಶೆಯು ಎಲ್ಲಾ ಇಸ್ರಾಯೇಲ್ಯರಿಗೆ ಯೊರ್ದನಿನ ಈಚೆಯಲ್ಲಿರುವ ಅರಣ್ಯ ದಲ್ಲಿ, ಕೆಂಪು ಸಮುದ್ರಕ್ಕೆ ಎದುರಾಗಿರುವ ಬೈಲಿನಲ್ಲಿ, ಪಾರಾನ್, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬವುಗಳ ಮಧ್ಯದಲ್ಲಿ ಹೇಳಿದ ಮಾತುಗಳು ಇವೇ.
ಇಸ್ರಾಯೇಲ್ ಮಕ್ಕಳು ಮೋವಾಬಿನ ಬೈಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ಅತ್ತರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಗೋಳಾಟದಲ್ಲಿ ಅಳುವ ದಿವಸಗಳು ಮುಗಿದವು.
ಅವರ ಎಲುಬುಗಳನ್ನು ತಕ್ಕೊಂಡು ಅವುಗಳನ್ನು ಯಾಬೇಷಿ ನಲ್ಲಿರುವ ಒಂದು ಮರದ ಕೆಳಗೆ ಹೂಣಿಟ್ಟು ಏಳು ದಿವಸ ಉಪವಾಸಮಾಡಿದರು.
ಆಗ ದಾವೀದನು ಸೌಲನ ಮೇಲೆಯೂ ಅವನ ಮಗನಾದ ಯೋನಾತಾನನ ಮೇಲೆಯೂ ಗೋಳಾಟ ದಿಂದ ಈ ಗೀತೆ ಹಾಡಿ ಗೋಳಾಡಿದನು.
ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶರೀರವನ್ನೂ ಅವನ ಕುಮಾರರ ಶರೀರಗಳನ್ನು ತಕ್ಕೊಂಡು ಯಾಬೇಷಿಗೆ ತಂದು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಅವರ ಎಲುಬುಗಳನ್ನು ಹೂಣಿಟ್ಟು ಏಳುದಿವಸ ಉಪವಾಸ ಮಾಡಿದರು.
ಅವರು ಅವನ ಸಂಗಡ ಏಳು ಹಗಲು ಏಳು ರಾತ್ರಿ ನೆಲದ ಮೇಲೆ ಕೂತುಕೊಂಡರು. ಒಬ್ಬನಾದರೂ ಒಂದು ಮಾತನ್ನೂ ಅವನಿಗೆ ಹೇಳಲಿಲ್ಲ; ಯಾಕಂದರೆ ಅವನ ದುಃಖವು ಬಹಳ ಅಧಿಕವೆಂದು ನೋಡಿದರು.
ಭಕ್ತರಾದ ಜನರು ಸ್ತೆಫನನನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.