Home Bibles ದ್ವಿತೀಯೋಪದೇಶಕಾಂಡ 32:8 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 32:8 · ಕನ್ನಡ ಬೈಬಲ್

ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್‌ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು.

Cross references

ಆದಿಕಾಂಡ 10:5

ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು.

ಆದಿಕಾಂಡ 10:15

ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ

ಆದಿಕಾಂಡ 10:25

ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್‌.

ಆದಿಕಾಂಡ 11:8

ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.

ಆದಿಕಾಂಡ 15:18

ಅದೇ ದಿನದಲ್ಲಿ ಕರ್ತನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು--ಐಗುಪ್ತದ ನದಿಯಿಂದ ಮಹಾನದಿಯಾದ ಯೂಫ್ರೇಟೀಸ್‌ ನದಿಯ ವರೆಗೆ ವಾಸಿಸುವ

ಅಂಕೆಗಳ ಪುಸ್ತಕ 24:16

ದೇವರ ಮಾತುಗಳನ್ನು ಕೇಳಿದವನೂ ಮಹೋನ್ನ ತನ ಜ್ಞಾನವನ್ನು ತಿಳಿದವನೂ ಸರ್ವಶಕ್ತನ ದರ್ಶನವನ್ನು ನೋಡಿದವನೂ ಪರವಶನಾಗಿದ್ದು ತೆರೆದ ಕಣ್ಣುಳ್ಳ ವನೂ ಹೇಳಿದ್ದು--

1 ದಿನವೃತ್ತಾಂತ 16:18

ಹೇಳಿದ್ದೇನಂದರೆ--ನಿನಗೆ ಕಾನಾನ್‌ ದೇಶವನ್ನು ನಿಮ್ಮ ಬಾಧ್ಯ ತೆಯ ಪಾಲಾಗಿ ಕೊಡುವೆನು.

ಯೋಬ 15:19

ಅವರಿಗೆ ಮಾತ್ರ ಭೂಮಿಯು ಕೊಡಲ್ಪಟ್ಟಿತು; ಅವರ ಮಧ್ಯದಲ್ಲಿ ಪರನು ದಾಟಲಿಲ್ಲ.

ಕೀರ್ತನೆಗಳು 7:17

ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.

ಕೀರ್ತನೆಗಳು 50:14

ದೇವರಿಗೆ ಸ್ತೋತ್ರವನ್ನು (ಬಲಿ ಯಾಗಿ) ಅರ್ಪಿಸು; ಮಹೋನ್ನತನಿಗೆ ನಿನ್ನ ಪ್ರಮಾಣ ಗಳನ್ನು ಸಲ್ಲಿಸು.

ಕೀರ್ತನೆಗಳು 82:6

ನಾನು--ನೀವು ದೇವರುಗಳು; ನೀವೆಲ್ಲರು ಮಹೋನ್ನತನ ಮಕ್ಕಳು ಎಂದು ಹೇಳಿದೆನು.

ಕೀರ್ತನೆಗಳು 91:1

ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.

ಕೀರ್ತನೆಗಳು 92:8

ಆದರೆ ಕರ್ತನೇ, ಎಂದೆಂದಿಗೂ ನೀನು ಉನ್ನತನಾಗಿದ್ದೀ;

ಕೀರ್ತನೆಗಳು 115:16

ಆಕಾಶಗಳು ಕರ್ತನವುಗಳೇ. ಆತನು ಭೂಮಿ ಯನ್ನು ನರಪುತ್ರರಿಗೆ ಕೊಟ್ಟಿದ್ದಾನೆ.

ಯೆಶಾಯ 14:14

ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ;

ದಾನಿಯೇಲ 4:17

ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು.

ದಾನಿಯೇಲ 5:18

ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು.

ಅಪೋಸ್ತಲರ ಕೃತ್ಯಗಳು 7:48

ಆದರೂ ಮಹೋನ್ನತನು ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವಾತನಲ್ಲ. ಯಾಕಂದರೆ--

ಅಪೋಸ್ತಲರ ಕೃತ್ಯಗಳು 17:26

ಆತನು ಒಂದೇ ರಕ್ತದಿಂದ ಎಲ್ಲಾ ಜನಾಂಗಗಳ ಮನುಷ್ಯರನ್ನು ಭೂಮುಖದ ಮೇಲೆಲ್ಲಾ ವಾಸಿಸುವದಕ್ಕಾಗಿ ಉಂಟು ಮಾಡಿದನು.

Interlinear

Choose Theme