Home Bibles ಗಲಾತ್ಯದವರಿಗೆ 3:2 · ಕನ್ನಡ ಬೈಬಲ್
ಗಲಾತ್ಯದವರಿಗೆ 3:2 · ಕನ್ನಡ ಬೈಬಲ್

ಒಂದು ಸಂಗತಿಯನ್ನು ಮಾತ್ರ ನಿಮ್ಮಿಂದ ತಿಳುಕೊಳ್ಳಬೇಕೆಂದಿದ್ದೇನೆ. ನೀವು ಆತ್ಮನನ್ನು ಹೊಂದಿದ್ದು ನ್ಯಾಯಪ್ರಮಾಣದ ಕ್ರಿಯೆಗಳಿಂದಲೋ? ಇಲ್ಲವೆ ಕೇಳಿ ನಂಬಿದ್ದ ರಿಂದಲೋ?

Cross references

ಅಪೋಸ್ತಲರ ಕೃತ್ಯಗಳು 2:38

ಆಗ ಪೇತ್ರನು ಅವರಿಗೆ--ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ.

ಅಪೋಸ್ತಲರ ಕೃತ್ಯಗಳು 8:15

ಇವರು ಅಲ್ಲಿಗೆ ಬಂದು ಪವಿತ್ರಾತ್ಮನನ್ನು ಅವರು ಹೊಂದಬೇಕೆಂದು ಅವರಿ ಗೋಸ್ಕರ ಪ್ರಾರ್ಥನೆ ಮಾಡಿದರು.

ಅಪೋಸ್ತಲರ ಕೃತ್ಯಗಳು 10:44

ಪೇತ್ರನು ಈ ಮಾತುಗಳನ್ನು ಇನ್ನೂ ಹೇಳು ತ್ತಿರುವಾಗ ವಾಕ್ಯವನ್ನು ಕೇಳಿದವರೆಲ್ಲರ ಮೇಲೆ ಪವಿ ತ್ರಾತ್ಮನು ಇಳಿದನು.

ಅಪೋಸ್ತಲರ ಕೃತ್ಯಗಳು 11:15

ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.

ಅಪೋಸ್ತಲರ ಕೃತ್ಯಗಳು 15:8

ಹೃದಯ ಗಳನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮ ನನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಅವರ ವಿಷಯದಲ್ಲಿ ಸಾಕ್ಷಿಕೊಟ್ಟನು.

ಅಪೋಸ್ತಲರ ಕೃತ್ಯಗಳು 19:2

ಅವರಿಗೆ--ನೀವು ನಂಬಿದಾಗ ಪವಿತ್ರಾತ್ಮನನ್ನು ಹೊಂದಿದಿರೋ ಎಂದು ಕೇಳಿದ್ದಕ್ಕೆ ಅವರು ಅವನಿಗೆ--ಪವಿತ್ರಾತ್ಮನು ಇದ್ದಾ ನೆಂಬದು ನಾವು ಕೇಳಲೇ ಇಲ್ಲ ಅಂದರು.

ರೋಮಾಪುರದವರಿಗೆ 1:17

ನೀತಿವಂತನು ನಂಬಿಕೆಯಿಂದಲೇ ಜೀವಿಸುವನು ಎಂದು ಬರೆಯಲ್ಪಟ್ಟಂತೆ ದೇವರ ನೀತಿಯು ಅದರಲ್ಲಿ ವಿಶ್ವಾಸದಿಂದ ವಿಶ್ವಾಸಕ್ಕೆ ಪ್ರಕಟವಾಯಿತು.

ರೋಮಾಪುರದವರಿಗೆ 10:16

ಆದರೆ ಅವರೆಲ್ಲರೂ ಸುವಾರ್ತೆಗೆ ವಿಧೇಯರಾಗಲಿಲ್ಲ. ಆದದರಿಂದ ಯೆಶಾಯನು--ಕರ್ತನೇ, ನಮ್ಮ ವಾರ್ತೆಯನ್ನು ಯಾರು ನಂಬಿದರು ಅನ್ನುತ್ತಾನೆ.

1 ಕೊರಿಂಥದವರಿಗೆ 12:7

ಆದರೆ ಪವಿತ್ರಾತ್ಮನ ಪ್ರಕಟನೆಯು ಪ್ರತಿಯೊಬ್ಬನ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿದೆ.

2 ಕೊರಿಂಥದವರಿಗೆ 11:4

ಯಾಕಂದರೆ ನಾವು ಸಾರದಿದ್ದ ಬೇರೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವನು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೊಂದು ಆತ್ಮವನ್ನು ಹೊಂದುವಾಗಲೂ ಅಂಗೀಕರಿಸದಿದ್ದ ಬೇರೊಂದು ಸುವಾರ್ತೆಯನ್ನು ಸ್ವೀಕರಿಸುವಾಗಲೂ ನೀವು ಚೆನ್ನಾಗಿ ಸಹಿಸಿಕೊಳ್ಳು ತ್ತಿದ್ದೀರಿ.

ಗಲಾತ್ಯದವರಿಗೆ 3:5

ಆತನು ಆತ್ಮನನ್ನು ನಿಮಗೆ ಕೊಟ್ಟು ನಿಮ್ಮಲ್ಲಿ ಮಹತ್ಕಾರ್ಯಗಳನ್ನು ನಡಿಸಿದನಲ್ಲಾ. ಹಾಗೆ ಮಾಡಿದ್ದು ನ್ಯಾಯಪ್ರಮಾಣದ ಕ್ರಿಯೆಗಳಿಂದಲೋ ಇಲ್ಲವೆ ಕೇಳಿ ನಂಬಿದ್ದರಿಂದಲೋ?

ಗಲಾತ್ಯದವರಿಗೆ 3:14

ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಆನ್ಯಜನರಿಗೆ ಉಂಟಾಗು ವಂತೆ ದೇವರು ವಾಗ್ದಾನ ಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತಾಯಿತು.

ಎಫೆಸದವರಿಗೆ 1:13

ನಿಮ್ಮ ರಕ್ಷಣೆಯ ವಿಷಯವಾದ ಸುವಾರ್ತೆಯೆಂಬ ಸತ್ಯ ವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಸಹ ವಾಗ್ದಾನ ಮಾಡಲ್ಪಟ್ಟ ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿದಿರಿ.

ಹೆಬ್ರಿಯರಿಗೆ 2:4

ದೇವರು ಸಹ ಅವರ ಕೈಯಿಂದ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯ ಗಳನ್ನೂ ನಾನಾವಿಧವಾದ ಮಹತ್ಕಾರ್ಯಗಳನ್ನೂ ನಡಿಸಿ ತನ್ನ ಸ್ವಂತ ಚಿತ್ತಾನುಸಾರವಾಗಿ ಪವಿತ್ರಾತ್ಮ ದಾನಗಳಿಂದ ಅವರಿಗೆ ಸಾಕ್ಷಿ ಕೊಡುತ್ತಿದ್ದನು.

ಹೆಬ್ರಿಯರಿಗೆ 6:4

ಒಂದು ಸಾರಿ ಬೆಳಕನ್ನು ಹೊಂದಿ ಪರಲೋಕ ದಿಂದಾದ ದಾನದ ರುಚಿಯನ್ನು ನೋಡಿ ಪವಿತ್ರಾತ್ಮನಲ್ಲಿ ಪಾಲುಗಾರರಾಗಿ

1 ಪೇತ್ರ 1:12

ಪರಲೋಕದಿಂದ ಕಳುಹಿಸಲ್ಪಟ್ಟ ಪರಿಶುದ್ಧಾತ್ಮನಿಂದ ನಿಮಗೆ ಸುವಾರ್ತೆಯನ್ನು ಸಾರಿದವರು ಈಗ ನಿಮಗೆ ತಿಳಿಸುವಂಥ ಮತ್ತು ದೂತರು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುವಂಥ ಕಾರ್ಯಗಳಲ್ಲಿ ತಮಗೋಸ್ಕರವಲ್ಲ ನಮಗೋಸ್ಕರವೇ ಸೇವೆ ಮಾಡಿದರೆಂದು ಅವರಿಗೆ ಪ್ರಕಟವಾಯಿತು.

Interlinear

Choose Theme