Home Bibles ☰ Books 2 ಕೊರಿಂಥದವರಿಗೆ 11:4 · ಕನ್ನಡ ಬೈಬಲ್
2 ಕೊರಿಂಥದವರಿಗೆ 11:4 · ಕನ್ನಡ ಬೈಬಲ್

ಯಾಕಂದರೆ ನಾವು ಸಾರದಿದ್ದ ಬೇರೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವನು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೊಂದು ಆತ್ಮವನ್ನು ಹೊಂದುವಾಗಲೂ ಅಂಗೀಕರಿಸದಿದ್ದ ಬೇರೊಂದು ಸುವಾರ್ತೆಯನ್ನು ಸ್ವೀಕರಿಸುವಾಗಲೂ ನೀವು ಚೆನ್ನಾಗಿ ಸಹಿಸಿಕೊಳ್ಳು ತ್ತಿದ್ದೀರಿ.

Cross references

ಅಪೋಸ್ತಲರ ಕೃತ್ಯಗಳು 4:12

ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.

ರೋಮಾಪುರದವರಿಗೆ 8:15

ನೀವು ತಿರಿಗಿ ಭಯವುಳ್ಳವರಾಗಿರುವಂತೆ ದಾಸನ ಭಾವವನ್ನು ಹೊಂದಿದವರಲ್ಲ; ಆದರೆ ದತ್ತುಪುತ್ರ ಸ್ವೀಕಾರದ ಆತ್ಮನನ್ನು ಹೊಂದಿರುವದರಿಂದ ದೇವರನ್ನು ನಾವು ಅಪ್ಪಾ, ತಂದೆಯೇ ಎಂದು ಕೂಗುತ್ತೇವೆ.

1 ಕೊರಿಂಥದವರಿಗೆ 3:11

ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.

1 ಕೊರಿಂಥದವರಿಗೆ 12:4

ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ಆತ್ಮನು ಒಬ್ಬನೇ;

ಗಲಾತ್ಯದವರಿಗೆ 1:6

ಕ್ರಿಸ್ತನ ಕೃಪೆಯಲ್ಲಿ ನಿಮ್ಮನ್ನು ಕರೆದಾತನಿಂದ ನೀವು ಇಷ್ಟು ಬೇಗನೆ ಬೇರೆ ಸುವಾರ್ತೆಗೆ ತಿರುಗಿಕೊಂಡಿರೆಂದು ನಾನು ಆಶ್ಚರ್ಯಪಡುತ್ತೇನೆ.

ಗಲಾತ್ಯದವರಿಗೆ 3:2

ಒಂದು ಸಂಗತಿಯನ್ನು ಮಾತ್ರ ನಿಮ್ಮಿಂದ ತಿಳುಕೊಳ್ಳಬೇಕೆಂದಿದ್ದೇನೆ. ನೀವು ಆತ್ಮನನ್ನು ಹೊಂದಿದ್ದು ನ್ಯಾಯಪ್ರಮಾಣದ ಕ್ರಿಯೆಗಳಿಂದಲೋ? ಇಲ್ಲವೆ ಕೇಳಿ ನಂಬಿದ್ದ ರಿಂದಲೋ?

ಎಫೆಸದವರಿಗೆ 4:4

ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ,

1 ತಿಮೋಥೆಯ 2:5

ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ;

Interlinear

Choose Theme