ಇವರು ಅಲ್ಲಿಗೆ ಬಂದು ಪವಿತ್ರಾತ್ಮನನ್ನು ಅವರು ಹೊಂದಬೇಕೆಂದು ಅವರಿ ಗೋಸ್ಕರ ಪ್ರಾರ್ಥನೆ ಮಾಡಿದರು.
Cross references
ನಾನು ನಿಮಗೆ ತಿರಿಗಿ ಹೇಳುವದೇನಂದರೆ --ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವ ವಿಷಯಕ್ಕಾದರೂ ಭೂಮಿಯ ಮೇಲೆ ಸಮ್ಮತಿಸಿದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದು.
ನನ್ನ ಹೆಸರಿನಲ್ಲಿ ನೀವು ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ಮಾಡುವೆನು. ಹೀಗೆ ಮಗನಲ್ಲಿ ತಂದೆಯು ಮಹಿಮೆ ಹೊಂದುವನು.
ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು.
ಆಗ ಪೇತ್ರನು ಅವರಿಗೆ--ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ.
ಆದದರಿಂದ ಅನ್ಯಭಾಷೆಯಲ್ಲಿ ಮಾತನಾಡುವವನು ಅದರ ಅರ್ಥ ಹೇಳುವಂತೆ ಪ್ರಾರ್ಥಿಸಲಿ.
ನಿಮ್ಮ ಪ್ರಾರ್ಥನೆಯಿಂದಲೂ ಯೇಸು ಕ್ರಿಸ್ತನ ಆತ್ಮನ ಸಹಾಯ ದಿಂದಲೂ ಇದು ನನ್ನ ರಕ್ಷಣೆಗೆ ಪರಿಣಮಿಸುವದೆಂದು ನಾನು ಬಲ್ಲೆನು.