Home Bibles ನಿರ್ಗಮಕಾಂಡ 9:15 · ಕನ್ನಡ ಬೈಬಲ್
ನಿರ್ಗಮಕಾಂಡ 9:15 · ಕನ್ನಡ ಬೈಬಲ್

ಈಗ ನನ್ನ ಕೈಚಾಚಿ ನಿನ್ನನ್ನೂ ನಿನ್ನ ಜನರನ್ನೂ ವ್ಯಾಧಿಯಿಂದ ಹೊಡೆಯುವೆನು; ನಿನ್ನನ್ನೂ ಭೂಮಿ ಯೊಳಗಿಂದ ನಿರ್ಮೂಲ ಮಾಡುವೆನು.

Cross references

ನಿರ್ಗಮಕಾಂಡ 3:20

ಹೀಗಿರುವದರಿಂದ ನನ್ನ ಕೈಯನ್ನು ಚಾಚಿ ನಾನು ಅದರೊಳಗೆ ಮಾಡುವ ಎಲ್ಲಾ ಅದ್ಭುತಗಳಿಂದ ಐಗುಪ್ತವನ್ನು ಹೊಡೆಯುವೆನು. ತರು ವಾಯ ಅವನು ನಿಮ್ಮನ್ನು ಕಳುಹಿಸಿಬಿಡುವನು.

ನಿರ್ಗಮಕಾಂಡ 9:3

ಇಗೋ, ಕರ್ತನ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವದು. ಕುದುರೆ ಕತ್ತೆ ಒಂಟೆ ಎತ್ತು ಕುರಿ ಇವುಗಳ ಮೇಲೆ ಮಹಾ ಕಠಿಣವಾದ ರೋಗವು ಬರುವದು.

ನಿರ್ಗಮಕಾಂಡ 9:6

ಮರುದಿನ ಕರ್ತನು ಆ ಕಾರ್ಯವನ್ನು ಮಾಡಿ ದನು; ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲ್‌ ಮಕ್ಕಳ ಪಶುಗಳಲ್ಲಿ ಒಂದೂ ಸಾಯ ಲಿಲ್ಲ.

ನಿರ್ಗಮಕಾಂಡ 9:16

ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ.

ನಿರ್ಗಮಕಾಂಡ 11:4

ಆಗ ಮೋಶೆಯು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ--ಸುಮಾರು ಮಧ್ಯರಾತ್ರಿಯಲ್ಲಿ ನಾನು ಐಗುಪ್ತದ ಮಧ್ಯದಲ್ಲಿ ಹಾದು ಹೋಗುವೆನು.

ನಿರ್ಗಮಕಾಂಡ 12:29

ಮಧ್ಯರಾತ್ರಿಯಲ್ಲಿ ನಡೆದದ್ದೇನಂದರೆ, ಸಿಂಹಾ ಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನ ವರೆಗೂ ಅಂದರೆ ಐಗುಪ್ತದೇಶ ದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಕರ್ತನು ಸಂಹರಿಸಿದನು.

ನಿರ್ಗಮಕಾಂಡ 14:28

ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು.

2 ಸಮುವೇಲ 7:23

ಭೂಲೋಕದಲ್ಲಿ ನಿನ್ನ ಜನರಾದ ಇಸ್ರಾಯೇಲ್ಯರಿಗೆ ಸಮಾನವಾದ ಜನಾಂಗ ಯಾವದು? ಅವರನ್ನು ಸ್ವಜನರಾಗಿ ವಿಮೋಚಿಸು ವಂತೆಯೂ ತನಗೆ ಹೆಸರನ್ನು ಪಡಕೊಳ್ಳುವಂತೆಯೂ ದೇವರು ಹೋದನು; ಅವರಿಗೋಸ್ಕರ ನಿನ್ನ ದೇಶಕ್ಕೆ, ಐಗುಪ್ತದಿಂದ ಜನಾಂಗಗಳಿಂದಲೂ ಅವರ ದೇವರು ಗಳಿಂದಲೂ ವಿಮೋಚಿಸಿದ ನಿನ್ನ ಜನರ ಮುಂದೆ ಈ ಮಹಾಭಯಂಕರವಾದ ಕಾರ್ಯಗಳನ್ನು ಮಾಡು ವದಕ್ಕಾಗಿಯೇ ದೇವರು ಹೋದನು.

1 ಅರಸುಗಳು 13:34

ಯಾರೊಬ್ಬಾಮನ ಮನೆಯವರನ್ನು ಭೂಲೋಕದಿಂದ ಸಂಹರಿಸುವದಕ್ಕೂ ನಾಶಮಾಡು ವದಕ್ಕೂ ಈ ಕಾರ್ಯವು ಅವರಿಗೆ ಪಾಪವಾಯಿತು.

2 ಅರಸುಗಳು 19:35

ಅದೇ ರಾತ್ರಿಯಲ್ಲಿ ಏನಾಯಿತಂದರೆ, ಕರ್ತನ ದೂತನು ಹೊರಟು ಅಶ್ಶೂರಿನ ದಂಡಿನಲ್ಲಿ ಒಂದು ಲಕ್ಷ ಎಂಭತ್ತೈದು ಸಾವಿರ ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ ಇಗೋ, ಅವರೆಲ್ಲರೂ ಸತ್ತು ಹೆಣಗಳಾಗಿದ್ದರು.

ಸಾಮೇತಿಗಳು 2:22

ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ಅಪರಾಧಿ ಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು.

Interlinear

Choose Theme