Home Bibles ನಿರ್ಗಮಕಾಂಡ 9:6 · ಕನ್ನಡ ಬೈಬಲ್
ನಿರ್ಗಮಕಾಂಡ 9:6 · ಕನ್ನಡ ಬೈಬಲ್

ಮರುದಿನ ಕರ್ತನು ಆ ಕಾರ್ಯವನ್ನು ಮಾಡಿ ದನು; ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲ್‌ ಮಕ್ಕಳ ಪಶುಗಳಲ್ಲಿ ಒಂದೂ ಸಾಯ ಲಿಲ್ಲ.

Cross references

ನಿರ್ಗಮಕಾಂಡ 9:19

ಹೀಗಿರುವದರಿಂದ (ಯಾವನನ್ನಾದರೂ) ಕಳುಹಿಸಿ ನಿನ್ನ ಪಶುಗಳನ್ನೂ ಹೊಲದಲ್ಲಿ ನಿನಗಿರುವವುಗಳನ್ನೂ ಕೂಡಿಸು. ಯಾಕಂ ದರೆ ಮನೆಗಳಿಗೆ ತಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೂ ಪಶುಗಳಮೇಲೂ ಆನೆಕಲ್ಲಿನ ಮಳೆಯು ಸುರಿದು ಕೊಲ್ಲುವದು ಎಂದು ಹೇಳು ಅಂದನು.

ನಿರ್ಗಮಕಾಂಡ 9:25

ಆ ಆನೆಕಲ್ಲಿನ ಮಳೆಯು ಐಗುಪ್ತದೇಶದಲ್ಲೆಲ್ಲಾ ಮನುಷ್ಯರನ್ನೂ ಪಶುಗಳನ್ನೂ ಹೊಲದಲ್ಲಿದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳುಮಾಡಿ ಎಲ್ಲಾ ಮರಗಳನ್ನೂ ಮುರಿದು ಹಾಕಿತು.

ನಿರ್ಗಮಕಾಂಡ 9:26

ಇಸ್ರಾಯೇಲ್‌ ಮಕ್ಕಳು ಇದ್ದ ಗೋಷೆನ್‌ ಸೀಮೆಯಲ್ಲಿ ಆನೆಕಲ್ಲಿನ ಮಳೆಯು ಬೀಳಲಿಲ್ಲ.

ನಿರ್ಗಮಕಾಂಡ 12:12

ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು.

ಕೀರ್ತನೆಗಳು 78:48

ಅವರ ದನಗಳನ್ನು ಕಲ್ಮ ಳೆಗೂ ಮಂದೆಗಳನ್ನು ಸಿಡಿಲಿಗೂ ಒಪ್ಪಿಸಿಬಿಟ್ಟನು.

ಕೀರ್ತನೆಗಳು 78:50

ತನ್ನ ಕೋಪಕ್ಕೆ ದಾರಿಮಾಡಿ ಅವರ ಪ್ರಾಣವನ್ನು ಸಾವಿನಿಂದ ಉಳಿಸದೆ ಅವರ ಜೀವವನ್ನು ಜಾಡ್ಯಕ್ಕೆ ಒಪ್ಪಿಸಿ

Interlinear

Choose Theme