Home Bibles ನಿರ್ಗಮಕಾಂಡ 9:3 · ಕನ್ನಡ ಬೈಬಲ್
ನಿರ್ಗಮಕಾಂಡ 9:3 · ಕನ್ನಡ ಬೈಬಲ್

ಇಗೋ, ಕರ್ತನ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವದು. ಕುದುರೆ ಕತ್ತೆ ಒಂಟೆ ಎತ್ತು ಕುರಿ ಇವುಗಳ ಮೇಲೆ ಮಹಾ ಕಠಿಣವಾದ ರೋಗವು ಬರುವದು.

Cross references

ಆದಿಕಾಂಡ 47:17

ಆಗ ಅವರು ತಮ್ಮ ಪಶುಗಳನ್ನು ಯೋಸೇಫನ ಬಳಿಗೆ ತಂದರು. ಯೋಸೇಫನು ಅವರ ಕುದುರೆ ಮಂದೆ ದನ ಕತ್ತೆ ಇವುಗಳ ಬದಲಾಗಿ ರೊಟ್ಟಿಯನ್ನು ಕೊಟ್ಟು. ಆ ವರುಷವೆಲ್ಲಾ ಅವರನ್ನು ಪೋಷಿಸಿದನು.

ನಿರ್ಗಮಕಾಂಡ 5:3

ಆಗ ಅವರು ಫರೋಹ ನಿಗೆ--ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡಿ ದ್ದಾನೆ; ಆದದರಿಂದ ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿ ಅರ್ಪಿಸುವದಕ್ಕಾಗಿ ನಾವು ಹೋಗಬೇಕು; ಇಲ್ಲ ವಾದರೆ ಆತನು ವ್ಯಾಧಿಯಿಂದಲಾದರೂ ಕತ್ತಿಯಿಂದ ಲಾದರೂ ನಮ್ಮನ್ನು ಸಂಹಾರ ಮಾಡಾನು ಎಂದು ಅಂದರು.

ನಿರ್ಗಮಕಾಂಡ 7:4

ಆದರೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆದಾಗ್ಯೂ ನನ್ನ ಕೈಯನ್ನು ಐಗುಪ್ತದ ಮೇಲೆ ಇಟ್ಟು ದೊಡ್ಡ ನ್ಯಾಯತೀರ್ಪು ಗಳಿಂದ ನನ್ನ ಜನರಾದ ಇಸ್ರಾಯೇಲ್‌ ಸೈನ್ಯವನ್ನೆಲ್ಲಾ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡುವೆನು.

ನಿರ್ಗಮಕಾಂಡ 8:19

ಆಗ ಮಂತ್ರಗಾರರು ಫರೋಹ ನಿಗೆ--ಇದು ದೇವರ ಕೈಯಾಗಿದೆ ಅಂದರು. ಆದರೆ ಕರ್ತನು ಹೇಳಿದಂತೆ ಫರೋಹನ ಹೃದಯವು ಕಠಿಣ ವಾಯಿತು; ಆದದರಿಂದ ಅವನು ಅವರ ಮಾತನ್ನು ಕೇಳಲಿಲ್ಲ.

1 ಸಮುವೇಲ 5:6

ಆದರೆ ಕರ್ತನ ಕೈ ಅಷ್ಡೋದಿನವರ ಮೇಲೆ ಭಾರ ವಾಗಿದ್ದು ಅವರನ್ನು ನಾಶಮಾಡಿ ಅಷ್ಡೋದನ್ನೂ ಅದರ ಮೇರೆಗಳನ್ನೂ ಗಡ್ಡೆರೋಗದಿಂದ ಹೊಡೆದನು.

1 ಸಮುವೇಲ 6:9

ಅದು ತನ್ನ ಮೇರೆಯಾದ ಬೇತ್ಷೆಮೆಷಿನ ಮಾರ್ಗವನ್ನು ಹಿಡಿದು ಹೋದರೆ ಆತನು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾನೆ; ಇಲ್ಲದೆ ಹೋದರೆ ಆತನ ಹಸ್ತವು ನಮ್ಮನ್ನು ಮುಟ್ಟಲಿಲ್ಲ; ಅದು ನಮಗೆ ಪ್ರಾಪ್ತಿಯಾಯಿತೆಂದು ತಿಳುಕೊಳ್ಳಿರಿ ಅಂದರು.

ಆಮೋಸ 4:10

ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮ್ಮೊಳಗೆ ಕಳುಹಿಸಿದ್ದೇನೆ.ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದುಹಾಕಿದ್ದೇನೆ. ನಿಮ್ಮ ದಂಡುಗಳ ದುರ್ವಾಸ ನೆಯು ನಿಮ್ಮ ಮೂಗುಗಳಲ್ಲಿ ಸೇರುವ ಹಾಗೆ ಮಾಡಿ ದ್ದೇನೆ. ಆದಾಗ್ಯೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.

ಅಪೋಸ್ತಲರ ಕೃತ್ಯಗಳು 13:11

ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈ ಹಿಡಿದು ನಡಿಸುವವರನ್ನು ಹುಡುಕುತ್ತಾ ತಿರುಗಾಡಿದನು.

Interlinear

Choose Theme