ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ?
Cross references
ಕರ್ತನಿಗೆ ಅಸಾಧ್ಯವಾದದ್ದು ಯಾವದಾದರೂ ಇದೆಯೋ? ಬರುವ ವರುಷ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ತಿರಿಗಿ ಬರುವೆನು; ಆಗ ಸಾರಳಿಗೆ ಮಗನು ಇರುವನು ಅಂದನು.
ಓ ಕರ್ತನೇ, ನನ್ನ ತುಟಿಗಳನ್ನು ತೆರೆ; ಆಗ ನನ್ನ ಬಾಯಿ ನಿನ್ನ ಸ್ತೋತ್ರವನ್ನು ಪ್ರಕಟಮಾಡುವದು.
ಕಿವಿ ಯನ್ನು ಕೊಟ್ಟವನು ಕೇಳನೋ? ಕಣ್ಣನ್ನು ರೂಪಿಸಿದವನು ತಿಳಿಯನೋ?
ಕರ್ತನು ಸೆರೆಯವರನ್ನು ಬಿಡಿಸುತ್ತಾನೆ. ಕರ್ತನು ಕುರುಡರ ಕಣ್ಣುಗಳನ್ನು ತೆರೆಯುತ್ತಾನೆ; ಕರ್ತನು ದೀನರನ್ನು ಎತ್ತು ತ್ತಾನೆ; ಕರ್ತನು ನೀತಿವಂತರನ್ನು ಪ್ರೀತಿಮಾಡುತ್ತಾನೆ;
ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ.
ಅದನ್ನು ನನ್ನ ಬಾಯಲ್ಲಿ ಇಟ್ಟು--ಇಗೋ, ಇದು ನಿನ್ನ ತುಟಿಗೆ ತಗಲಿತು; ನಿನ್ನ ದೋಷವು ತೊಲಗಿ ನಿನ್ನ ಪಾಪವು ನೀಗಿ ಶುದ್ಧವಾಯಿತು ಎಂದು ಹೇಳಿದನು.
ಆಗ ಕುರುಡರ ಕಣ್ಣುಗಳು ತೆರೆಯಲ್ಪಡು ವವು, ಕಿವುಡರ ಕಿವಿಗಳು ಕೇಳುವವು.
ಕರ್ತನಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
ಆಗ ನಾನು--ಹಾ! ಕರ್ತನಾದ ದೇವರೇ ಇಗೋ, ನಾನು ಮಾತನಾಡಲಾರೆನು, ನಾನು ಚಿಕ್ಕವನು ಅಂದೆನು.
ಆಗ ಕರ್ತನು ಕೈಚಾಚಿ ನನ್ನ ಬಾಯಿಯನ್ನು ಮುಟ್ಟಿದನು; ನನಗೆ--ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
ಇದಲ್ಲದೆ ನಾಲಿ ಗೆಯು ನಿನ್ನ ಅಂಗಳಕ್ಕೆ ಹತ್ತುವ ಹಾಗೆ ಮಾಡುವೆನು. ಆಗ ನೀನು ಮೂಕನಾಗಿ ಅವರನ್ನು ಗದರಿಸುವ ವನಾಗಲಾರೆ; ಯಾಕಂದರೆ ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.
ಆಗ ಅವನು ತಪ್ಪಿಸಿಕೊಂಡು ಬರುವ ದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ಕರ್ತನ ಕೈ ನನ್ನ ಮೇಲೆ ಇತ್ತು. ಅವನು ಮುಂಜಾನೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿದೆ; ನನ ಬಾಯಿ ತೆರೆದಿತ್ತು. ನಾನು ಮೂಕನಾಗಿರಲಿಲ್ಲ.
ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವದಿಲ್ಲವೇ? ಪಟ್ಟಣದಲ್ಲಿ ಕೇಡು ಇರು ವದಾದರೆ ಅದು ಕರ್ತನಿಂದ ಅಲ್ಲವೇ?
ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.