Home Bibles ಯೆರೆಮಿಯ 1:6 · ಕನ್ನಡ ಬೈಬಲ್
ಯೆರೆಮಿಯ 1:6 · ಕನ್ನಡ ಬೈಬಲ್

ಆಗ ನಾನು--ಹಾ! ಕರ್ತನಾದ ದೇವರೇ ಇಗೋ, ನಾನು ಮಾತನಾಡಲಾರೆನು, ನಾನು ಚಿಕ್ಕವನು ಅಂದೆನು.

Cross references

ನಿರ್ಗಮಕಾಂಡ 4:1

ಮೋಶೆಯು ಪ್ರತ್ಯುತ್ತರವಾಗಿ--ಆದರೆ ಇಗೋ, ಅವರು ನನ್ನನ್ನು ನಂಬುವದಿಲ್ಲ, ನನ್ನ ಮಾತನ್ನು ಕೇಳುವದೂ ಇಲ್ಲ. ಅವರು--ಕರ್ತನು ನಿನಗೆ ಕಾಣಿಸಿಕೊಳ್ಳಲಿಲ್ಲ ಎಂದು ಹೇಳುವರು ಅಂದನು.

ನಿರ್ಗಮಕಾಂಡ 4:10

ಮೋಶೆಯು ಕರ್ತನಿಗೆ--ಓ ನನ್ನ ಕರ್ತನೇ, ನಾನು ಮೊದಲಿನಿಂದಲೂ ನೀನು ನಿನ್ನ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿ ಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಅಂದನು.

ನಿರ್ಗಮಕಾಂಡ 6:12

ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ--ಇಗೋ, ಇಸ್ರಾಯೇಲ್‌ ಮಕ್ಕಳೇ ನನ್ನ ಮಾತನ್ನು ಕೇಳದಿರುವಲ್ಲಿ ತೊದಲು ನಾಲಿಗೆಯವನಾದ ನನ್ನ ಮಾತನ್ನು ಫರೋಹನು ಕೇಳುವದು ಹೇಗೆ ಎಂದು ಹೇಳಿದನು.

ನಿರ್ಗಮಕಾಂಡ 6:30

ಅದಕ್ಕೆ ಮೋಶೆಯು ಕರ್ತನ ಮುಂದೆ--ಇಗೋ, ನಾನು ತೊದಲು ನಾಲಿಗೆಯುಳ್ಳವನು. ಫರೋಹನು ನನ್ನ ಮಾತನ್ನು ಹೇಗೆ ಕೇಳಾನು ಅಂದನು.

1 ಅರಸುಗಳು 3:7

ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ.

ಯೆಶಾಯ 6:5

ಆಗ ನಾನು--ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು.

ಯೆರೆಮಿಯ 4:10

ಆಗ ನಾನು ಹೇಳಿದ್ದೇನಂದರೆ--ಹಾ! ಕರ್ತನೇ, ದೇವರೇ, ನಿಶ್ಚಯ ವಾಗಿ ನೀನು ಈ ಜನರಿಗೂ ಯೆರೂಸಲೇಮಿಗೂ-- ನಿಮಗೆ ಸಮಾಧಾನವಾಗುವದೆಂದು ಹೇಳಿ ಬಹಳ ಮೋಸಮಾಡಿದ್ದೀ; ಕತ್ತಿಯು ಪ್ರಾಣದ ವರೆಗೂ ತಾಕುತ್ತ ದಲ್ಲವೋ?

ಯೆರೆಮಿಯ 14:13

ನಿನ್ನ ಆಸ್ತಿಯನ್ನೂ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ನಿನ್ನ ಎಲ್ಲಾ ಪಾಪಗಳ ನಿಮಿತ್ತ ಕ್ರಯವಿಲ್ಲದೆ ಕೊಳ್ಳೆಯಾಗಿ ಕೊಟ್ಟುಬಿಡುವೆನು.

ಯೆರೆಮಿಯ 32:17

ಕರ್ತನು ಹೀಗೆ ಹೇಳು ತ್ತಾನೆ--ದಾವೀದನಿಗೆ ಇಸ್ರಾಯೇಲಿನ ಮನೆಯ ಸಿಂಹಾಸನದಲ್ಲಿ ಕೂತುಕೊಳ್ಳುವ ಮನುಷ್ಯನು ಇಲ್ಲದೆ ಹೋಗುವದಿಲ್ಲ.

ಯೆರೆಮಿಯ 34:6

ಆದರೆ ಅವರು ಹೇಳಿದ್ದೇನಂದರೆ--ನಾವು ದ್ರಾಕ್ಷಾರಸ ಕುಡಿಯುವದಿಲ್ಲ; ನಮ್ಮ ತಂದೆಯಾದ ರೇಕಾಬನ ಮಗನಾದ ಯೋನಾದಾಬನು ನಮಗೆ ಈ ಆಜ್ಞೆ ಕೊಟ್ಟನು; ಏನಂದರೆ--ನೀವಾದರೂ ನಿಮ್ಮ ಮಕ್ಕಳಾ ದರೂ ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯ ಬೇಡಿರಿ;

Interlinear

Choose Theme