ಆಗ ಅವನು ತಪ್ಪಿಸಿಕೊಂಡು ಬರುವ ದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ಕರ್ತನ ಕೈ ನನ್ನ ಮೇಲೆ ಇತ್ತು. ಅವನು ಮುಂಜಾನೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿದೆ; ನನ ಬಾಯಿ ತೆರೆದಿತ್ತು. ನಾನು ಮೂಕನಾಗಿರಲಿಲ್ಲ.
Cross references
ಕರ್ತನ ವಾಕ್ಯವು ಕಸ್ದೀಯರ ದೇಶದ ಕೆಬಾರ್ ನದಿಯ ಬಳಿಯಲ್ಲಿ ಬೂಜಿಯ ಮಗನೂ ಯಾಜಕನೂ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು, ಕರ್ತನ ಕೈ ಅವನ ಮೇಲಿತ್ತು.
ಆಗ ಅಲ್ಲಿ ಕರ್ತನ ಹಸ್ತವು ನನ್ನ ಮೇಲಿತ್ತು; ನನಗೆ ಆತನು ಹೇಳಿದ್ದೇನಂದರೆ--ಎದ್ದೇಳು, ಬಯಲು ಸೀಮೆಗೆ ಹೋಗು ಅಲ್ಲಿ ನಾನು ನಿನ್ನ ಸಂಗಡ ಮಾತನಾಡುವೆನು ಅಂದನು.
ಇದಲ್ಲದೆ ನಾಲಿ ಗೆಯು ನಿನ್ನ ಅಂಗಳಕ್ಕೆ ಹತ್ತುವ ಹಾಗೆ ಮಾಡುವೆನು. ಆಗ ನೀನು ಮೂಕನಾಗಿ ಅವರನ್ನು ಗದರಿಸುವ ವನಾಗಲಾರೆ; ಯಾಕಂದರೆ ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.
ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.
ಇದಲ್ಲದೆ ಮನುಷ್ಯಪುತ್ರನೇ, ಅವರ ಮಹತ್ತಾದ ಸಂತೋಷವನ್ನೂ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವದನ್ನೂ ಕುಮಾರ ಕುಮಾರ್ತೆಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ
ಆ ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಕಿವಿಗಳಿಗೆ ಸುದ್ದಿಯನ್ನು ತರುವ ಹಾಗೆ ನಿನ್ನ ಬಳಿಗೆ ಬರುವನಲ್ಲವೆ?ಆ ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿತೆರೆದಿರುವದು ನೀನು ಇನ್ನು ಮೂಕನಾಗಿರದೆ ಮಾತನಾಡುವಿ ಮತ್ತು ಅವರಿಗೆ ಮುಂಗುರುತಾಗಿರುವಿ, ಆಗ ನಾನೇ ಕರ್ತನೆಂದು ತಿಳಿಯುವರು.
ಆ ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿತೆರೆದಿರುವದು ನೀನು ಇನ್ನು ಮೂಕನಾಗಿರದೆ ಮಾತನಾಡುವಿ ಮತ್ತು ಅವರಿಗೆ ಮುಂಗುರುತಾಗಿರುವಿ, ಆಗ ನಾನೇ ಕರ್ತನೆಂದು ತಿಳಿಯುವರು.
ಕರ್ತನ ಕೈ ನನ್ನ ಮೇಲೆ ಇತ್ತು; ಅದು ಕರ್ತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಗಳ ಮಧ್ಯ ತಳದಲ್ಲಿ ನನ್ನನ್ನು ಬಿಟ್ಟಿತು.
ನಮ್ಮ ಸೆರೆಯ ಇಪ್ಪತ್ತೈದನೆಯ ವರ್ಷದ ಆರಂಭದ ತಿಂಗಳಿನ ಹತ್ತನೇ ದಿನದಲ್ಲಿ ಪಟ್ಟಣವು ಒಡೆದು ಹಾಕಲ್ಪಟ್ಟ ಮೇಲೆ, ಹದಿನಾಲ್ಕನೇ ವರುಷದ ಅದೇ ದಿನದಲ್ಲಿ, ಕರ್ತನ ಕೈ ನನ್ನ ಮೇಲೆ ಇದ್ದು ನನ್ನನ್ನು ಅಲ್ಲಿಗೆ ಬರಮಾಡಿತು.
ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು ಅವನ ನಾಲಿಗೆಯು ಸಡಿಲವಾಯಿತು ಮತ್ತು ಅವನು ಮಾತ ನಾಡಿ ದೇವರನ್ನು ಕೊಂಡಾಡಿದನು.