Home Bibles ನಿರ್ಗಮಕಾಂಡ 30:34 · ಕನ್ನಡ ಬೈಬಲ್
ನಿರ್ಗಮಕಾಂಡ 30:34 · ಕನ್ನಡ ಬೈಬಲ್

ಕರ್ತನು ಮೋಶೆಗೆ--ನೀನು ಪರಿಮಳಗಳನ್ನು ಅಂದರೆ ಹಾಲುಮಡ್ಡಿ ಗುಗ್ಗುಲ ಗಂಧದ ಚೆಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಂಬ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.

Cross references

ನಿರ್ಗಮಕಾಂಡ 25:6

ದೀಪಕ್ಕಾಗಿ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರವೂ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳೂ

ನಿರ್ಗಮಕಾಂಡ 30:7

ಪ್ರತಿದಿನ ಬೆಳಿಗ್ಗೆ ಆರೋನನು ಪರಿಮಳ ಧೂಪ ವನ್ನು ಅದರ ಮೇಲೆ ಸುಡಬೇಕು. ಅವನು ದೀಪಗಳನ್ನು ಸಿದ್ಧಮಾಡುವಾಗ ಪರಿಮಳ ಧೂಪವನ್ನು ಅದರ ಮೇಲೆ ಸುಡಬೇಕು.

ನಿರ್ಗಮಕಾಂಡ 30:23

ಉತ್ತಮ ವಾದ ತೈಲಗಳನ್ನು ಅಂದರೆ ಐದುನೂರು ಶೆಕೆಲ್‌ ಸ್ವಚ್ಚವಾದ ರಕ್ತ ಬೋಳವು, ಅದರ ಅರ್ಧದಷ್ಟು ಅಂದರೆ ಇನ್ನೂರೈವತ್ತು ಶೆಕೆಲಿನ ಸುಗಂಧವಾದ ಲವಂಗ ಪಟ್ಟೆ ಯನ್ನು ಮತ್ತು ಇನ್ನೂರೈವತ್ತು ಶೆಕೆಲ್‌ ಸುಗಂಧವಾದ ಬಜೆಯನ್ನು,

ನಿರ್ಗಮಕಾಂಡ 37:29

ಅನಂತರ ಅವನು ವೈದ್ಯನ ಪದ್ಧತಿಯ ಪ್ರಕಾರ ಪವಿತ್ರವಾದ ಅಭಿಷೇಕ ತೈಲವನ್ನೂ ಪರಿಮಳ ದ್ರವ್ಯ ದಿಂದ ಶುದ್ಧವಾದ ಧೂಪವನ್ನೂ ತಯಾರಿಸಿದನು.

ಲೇವ್ಯಕಾಂಡ 2:1

ಯಾರಾದರೂ ಕರ್ತನಿಗೆ ಆಹಾರ ಸಮರ್ಪಣೆಯನ್ನು ಸಮರ್ಪಿಸುವದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರ ಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಯ ಬೇಕು; ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.

ಲೇವ್ಯಕಾಂಡ 2:15

ನೀನು ಅದರ ಮೇಲೆ ಎಣ್ಣೆಯನ್ನು ಹಾಕಿ ಅದರ ಮೇಲೆ ಸಾಂಬ್ರಾಣಿಯನ್ನು ಇಡಬೇಕು; ಅದು ಆಹಾರ ಸಮರ್ಪಣೆಯಾಗಿದೆ.ಯಾಜಕನು ಬಡಿದ ಕಾಳುಗಳಲ್ಲಿ ಸ್ವಲ್ಪ ಭಾಗವನ್ನು ಮತ್ತು ಎಣ್ಣೆಯ ಸ್ವಲ್ಪ ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿ ಯನ್ನು ಜ್ಞಾಪಕಾರ್ಥವಾಗಿ ಸುಡಬೇಕು: ಇದು ಕರ್ತ ನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.

ಲೇವ್ಯಕಾಂಡ 5:11

ಆದರೆ ಅವನು ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವದಕ್ಕೆ ಅಶಕ್ತನಾಗಿದ್ದರೆ ಪಾಪಮಾಡಿದವನು ತನ್ನ ಸಮರ್ಪಣೆ ಗಾಗಿ ಒಂದು ಎಫದ ಹತ್ತನೆಯ ಭಾಗದಷ್ಟು ನಯ ವಾದ ಹಿಟ್ಟನ್ನು ಪಾಪದ ಬಲಿಗಾಗಿ ತರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಅದು ಪಾಪದ ಬಲಿಯಾಗಿದೆ.

ಲೇವ್ಯಕಾಂಡ 16:12

ಅವನು ಕರ್ತನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಧೂಪ ಸುಡುವ ಪಾತ್ರೆಯ ತುಂಬ ಬೆಂಕಿಯಿಂದ ಉರಿಯುವ ಕೆಂಡ ಗಳನ್ನು ಮತ್ತು ತನ್ನ ಕೈಗಳ ತುಂಬ ಸಣ್ಣದಾಗುವಂತೆ ಕಟ್ಟಿದ ಧೂಪವನ್ನು ತೆಗೆದುಕೊಂಡು ಅದನ್ನು ತೆರೆಯ ಒಳಗಡೆ ತರಬೇಕು.

ಲೇವ್ಯಕಾಂಡ 24:7

ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾ ಗಿರುವಂತೆಯೂ ಬೆಂಕಿಯ ಮೂಲಕ ಕರ್ತನಿಗೆ ಸಮ ರ್ಪಣೆಯಾಗುವಂತೆಯೂ ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.

ಅಂಕೆಗಳ ಪುಸ್ತಕ 7:14

ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ,

1 ದಿನವೃತ್ತಾಂತ 9:29

ಅವರಲ್ಲಿ ಕೆಲವರು ಸಾಮಾನುಗಳನ್ನೂ ಪರಿಶುದ್ಧಸ್ಥಾನದಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಯವಾದ ಹಿಟ್ಟನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಸಾಂಬ್ರಾಣಿಯನ್ನೂ ಸುಗಂಧದ್ರವ್ಯಗಳನ್ನೂ ಕಾಯಲು ನೇಮಿಸಲ್ಪಟ್ಟಿದ್ದರು.

ನೆಹೆಮ್ಯ 13:5

ಲೇವಿಯರಿಗೂ ಹಾಡುಗಾರರಿಗೂ ದ್ವಾರ ಪಾಲಕರಿಗೂ ನೇಮಿಸಲ್ಪಟ್ಟ ಕಾಣಿಕೆಗಳನ್ನೂ ಧೂಪ ವನ್ನೂ ಪಾತ್ರೆಗಳನ್ನೂ ಧಾನ್ಯದ ಹತ್ತನೇ ಪಾಲುಗ ಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇರಿಸುತ್ತಿದ್ದ ದೊಡ್ಡ ಕೊಠಡಿಯನ್ನು ಅವನಿಗೋಸ್ಕರ ಸಿದ್ಧಮಾಡಿದ್ದನು.

ಪರಮಗೀತ 3:6

ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು?

ಮತ್ತಾಯ 2:11

ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು.

Interlinear

Choose Theme