ನೀನು ಅದರ ಮೇಲೆ ಎಣ್ಣೆಯನ್ನು ಹಾಕಿ ಅದರ ಮೇಲೆ ಸಾಂಬ್ರಾಣಿಯನ್ನು ಇಡಬೇಕು; ಅದು ಆಹಾರ ಸಮರ್ಪಣೆಯಾಗಿದೆ.ಯಾಜಕನು ಬಡಿದ ಕಾಳುಗಳಲ್ಲಿ ಸ್ವಲ್ಪ ಭಾಗವನ್ನು ಮತ್ತು ಎಣ್ಣೆಯ ಸ್ವಲ್ಪ ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿ ಯನ್ನು ಜ್ಞಾಪಕಾರ್ಥವಾಗಿ ಸುಡಬೇಕು: ಇದು ಕರ್ತ ನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.
Cross references
ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ
ಕರ್ತನು ಮೋಶೆಗೆ--ನೀನು ಪರಿಮಳಗಳನ್ನು ಅಂದರೆ ಹಾಲುಮಡ್ಡಿ ಗುಗ್ಗುಲ ಗಂಧದ ಚೆಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಂಬ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.
ಯಾರಾದರೂ ಕರ್ತನಿಗೆ ಆಹಾರ ಸಮರ್ಪಣೆಯನ್ನು ಸಮರ್ಪಿಸುವದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರ ಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಯ ಬೇಕು; ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.
ಆದರೆ ಅವನು ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವದಕ್ಕೆ ಅಶಕ್ತನಾಗಿದ್ದರೆ ಪಾಪಮಾಡಿದವನು ತನ್ನ ಸಮರ್ಪಣೆ ಗಾಗಿ ಒಂದು ಎಫದ ಹತ್ತನೆಯ ಭಾಗದಷ್ಟು ನಯ ವಾದ ಹಿಟ್ಟನ್ನು ಪಾಪದ ಬಲಿಗಾಗಿ ತರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಅದು ಪಾಪದ ಬಲಿಯಾಗಿದೆ.
ತರುವಾಯ ಕರ್ತನಿಗೆ ತನ್ನ ಅರ್ಪಣೆಯನ್ನು ತರುವವನು ತರಬೇಕಾದದ್ದೇನಂದರೆಆಹಾರದ ಅರ್ಪಣೆಗಾಗಿ ಹಿಟ್ಟಿನ ನಾಲ್ಕನೆಯ ಪಾಲಷ್ಟು ಎಣ್ಣೇ ಬೆರೆಸಿದ ಹಿಟ್ಟಿನ ದಶಮ ಭಾಗವನ್ನು