Home Bibles ನಿರ್ಗಮಕಾಂಡ 30:7 · ಕನ್ನಡ ಬೈಬಲ್
ನಿರ್ಗಮಕಾಂಡ 30:7 · ಕನ್ನಡ ಬೈಬಲ್

ಪ್ರತಿದಿನ ಬೆಳಿಗ್ಗೆ ಆರೋನನು ಪರಿಮಳ ಧೂಪ ವನ್ನು ಅದರ ಮೇಲೆ ಸುಡಬೇಕು. ಅವನು ದೀಪಗಳನ್ನು ಸಿದ್ಧಮಾಡುವಾಗ ಪರಿಮಳ ಧೂಪವನ್ನು ಅದರ ಮೇಲೆ ಸುಡಬೇಕು.

Cross references

ನಿರ್ಗಮಕಾಂಡ 27:20

ಇದಲ್ಲದೆ ಬೆಳಕಿಗೋಸ್ಕರ ಯಾವಾಗಲೂ ದೀಪ ವನ್ನು ಉರಿಸುವಂತೆ ಶುದ್ಧವಾದ ಕುಟ್ಟಿದ ಹಿಪ್ಪೆಯ ಎಣ್ಣೆಯನ್ನು ನಿನಗೆ ತರುವ ಹಾಗೆ ಇಸ್ರಾಯೇಲ್‌ ಮಕ್ಕಳಿಗೆ ಅಪ್ಪಣೆಕೊಡಬೇಕು.ಸಭೆಯ ಗುಡಾರ ದಲ್ಲಿ ಮಂಜೂಷದ ಮುಂದೆ ಇರುವ ತೆರೆಯ ಹೊರಗೆ ಅರೋನನೂ ಅವನ ಮಕ್ಕಳೂ ಅದನ್ನು ಸಾಯಂಕಾಲ ದಿಂದ ಉದಯದ ವರೆಗೂ ಕರ್ತನ ಮುಂದೆ ದೀಪ ವನ್ನು ಸರಿಪಡಿಸುತ್ತಿರಬೇಕು. ಇದು ಇಸ್ರಾಯೇಲ್‌ ಮಕ್ಕಳ ಪರವಾಗಿ ಅವರ ಸಂತತಿಯವರಿಗೆ ಶಾಶ್ವತವಾದ ಕಟ್ಟಳೆಯಾಗಿರಬೇಕು.

ನಿರ್ಗಮಕಾಂಡ 30:34

ಕರ್ತನು ಮೋಶೆಗೆ--ನೀನು ಪರಿಮಳಗಳನ್ನು ಅಂದರೆ ಹಾಲುಮಡ್ಡಿ ಗುಗ್ಗುಲ ಗಂಧದ ಚೆಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಂಬ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.

ನಿರ್ಗಮಕಾಂಡ 40:27

ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು.

ಲೇವ್ಯಕಾಂಡ 6:5

ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ ಪಡೆದವುಗಳೆಲ್ಲವುಗಳನ್ನೂ ಅಲ್ಲದೆ ಅವನು ಅದರ ಅಸಲಿಗೆ ಐದನೇ ಪಾಲನ್ನೂ ಕೂಡಿಸಿ ಹಿಂದಕ್ಕೆ ಕೊಡಬೇಕು. ಅತಿಕ್ರಮ ಬಲಿ ಅರ್ಪಿಸುವ ದಿನದಲ್ಲಿ ಅದರ ಯಜಮಾನನು ಯಾವ ನಾಗಿರುವನೋ ಅವನಿಗೆ ಕೊಡಬೇಕು.

ದ್ವಿತೀಯೋಪದೇಶಕಾಂಡ 33:10

ಅವರು ಯಾಕೋಬನಿಗೆ ನಿನ್ನ ನ್ಯಾಯಗಳನ್ನೂ ಇಸ್ರಾಯೇಲಿಗೆ ನಿನ್ನ ನ್ಯಾಯಪ್ರಮಾಣವನ್ನೂ ಬೋಧಿಸುವರು; ನಿನ್ನ ಮುಂದೆ ಧೂಪವನ್ನೂ ನಿನ್ನ ಬಲಿಪೀಠದ ಮೇಲೆ ಸರ್ವಾಂಗ ದಹನಬಲಿಯನ್ನೂ ಇಡುವರು.

1 ಸಮುವೇಲ 2:28

ನನ್ನ ಯಜ್ಞ ವೇದಿಯ ಮೇಲೆ ಬಲಿಯನ್ನು ಅರ್ಪಿಸುವದಕ್ಕೂ ಧೂಪವನ್ನು ಸುಡುವದಕ್ಕೂ ನನ್ನ ಮುಂದೆ ಏಫೋ ದನ್ನು ಧರಿಸಿಕೊಂಡಿರುವದಕ್ಕೂ ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರ ಬೇಕೆಂದು ನಾನು ಅವನನ್ನು ಆದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲ್‌ ಮಕ್ಕಳು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ?

1 ಸಮುವೇಲ 3:3

ದೇವರ ಮಂಜೂಷವಿರುವ ಕರ್ತನ ಮಂದಿರದಲ್ಲಿ ದೇವರ ದೀಪವು ಆರಿಹೋಗು ವದಕ್ಕಿಂತ ಮುಂಚೆ ಸಮುವೇಲನು ಮಲಗಿದ್ದನು; ಆಗ ಕರ್ತನು ಸಮುವೇಲನನ್ನು ಕರೆದನು.

1 ದಿನವೃತ್ತಾಂತ 6:34

ಇವನು ಸಮುವೇಲನ ಮಗನು, ಇವನು ಎಲ್ಕಾನನ ಮಗನು, ಇವನು ಯೆರೋಹಾಮನ ಮಗನು, ಇವನು ಎಲೀಯೇಲನ ಮಗನು,

1 ದಿನವೃತ್ತಾಂತ 23:13

ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು.

2 ದಿನವೃತ್ತಾಂತ 2:3

ಇದ ಲ್ಲದೆ ಸೊಲೊಮೋನನು ತೂರಿನ ಅರಸನಾದ ಹೂರಾಮನಿಗೆ--ವಾಸವಾಗಿರುವ ಮನೆಯನ್ನು ತನಗೆ ಕಟ್ಟಿಸಲು ನೀನು ನನ್ನ ತಂದೆಯಾದ ದಾವೀದನಿಗೆ ದೇವದಾರು ಮರಗಳನ್ನು ಕಳುಹಿಸಿ ಅವನಿಗೋಸ್ಕರ ಹೇಗೆ ಮಾಡಿದಿಯೋ ಹಾಗೆಯೇ ನನಗೂ ಮಾಡು.

2 ದಿನವೃತ್ತಾಂತ 26:18

ಉಜ್ಜೀಯನೇ, ಕರ್ತ ನಿಗೆ ಧೂಪಸುಡುವದು ನಿನಗೆ ಸೇರಿದ್ದಲ್ಲ; ಧೂಪ ಸುಡುವದು ಪರಿಶುದ್ಧ ಮಾಡಲ್ಪಟ್ಟ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು; ನೀನು ಪರಿಶುದ್ಧ ಸ್ಥಾನದಿಂದ ಹೊರಟುಹೋಗು; ನೀನು ಅಪರಾಧ ಮಾಡಿದ್ದೀ. ದೇವರಾದ ಕರ್ತನಿಂದ ಇದು ನಿನಗೆ ಮಾನವಲ್ಲ ಅಂದರು.

2 ದಿನವೃತ್ತಾಂತ 29:7

ಇದಲ್ಲದೆ ಅವರು ದ್ವಾರಾಂಗಳದ ಬಾಗಲುಗಳನ್ನು ಮುಚ್ಚಿ ದೀಪಗಳನ್ನು ಆರಿಸಿ ಇಸ್ರಾಯೇಲಿನ ದೇವರಿಗೆ ಪರಿಶುದ್ಧ ಸ್ಥಾನದಲ್ಲಿ ಧೂಪವನ್ನು ಸುಡದೆ, ದಹನಬಲಿಗಳನ್ನು ಅರ್ಪಿ ಸದೆ ಹೋದರು.

ಕೀರ್ತನೆಗಳು 141:2

ನನ್ನ ಪ್ರಾರ್ಥನೆ ನಿನ್ನ ಮುಂದೆ ಧೂಪವಾಗಿಯೂ ನನ್ನ ಕೈ ಎತ್ತುವದು ಸಾಯಂಕಾಲದ ಬಲಿಯಾಗಿಯೂ ಸಿದ್ಧವಾಗಿರಲಿ.

ಲೂಕ 1:9

ಯಾಜಕೋದ್ಯೋಗದ ಪದ್ಧತಿಯ ಪ್ರಕಾರ ಅವನು ಕರ್ತನ ಆಲಯದಲ್ಲಿ ಪ್ರವೇಶಿಸಿ ಧೂಪವನ್ನು ಸುಡುವದು ಅವನ ಪಾಲಿಗೆ ಬಂತು.

ಅಪೋಸ್ತಲರ ಕೃತ್ಯಗಳು 6:4

ಆದರೆ ನಾವು ಪ್ರಾರ್ಥನೆಯಲ್ಲಿಯೂ ವಾಕ್ಯೋಪದೇಶದಲ್ಲಿಯೂ ನಿರತರಾಗಿರುವಂತೆ ನಮ್ಮನ್ನು ಒಪ್ಪಿಸಿಕೊಡುವೆವು ಎಂದು ಹೇಳಿದನು.

Interlinear

Choose Theme