ಯೆಹೆಜ್ಕೇಲ 46:14 · ಕನ್ನಡ ಬೈಬಲ್
ಅದಕ್ಕೆ ಅರ್ಪಣೆಯಾಗಿ ಪ್ರತಿದಿನದ ಮುಂಜಾನೆಯಲ್ಲಿ ನೀನು ಏಫದ ಆರನೇ ಪಾಲನ್ನು ಗೋಧಿ ಹಿಟ್ಟಿನಲ್ಲಿ ಕಲಿಸುವ ಹಾಗೆ ಎಣ್ಣೆಯ ಹಿನ್ನಿನಲ್ಲಿ ಮೂರನೇ ಪಾಲನ್ನು ಸಿದ್ಧಮಾಡಬೇಕು. ಇದು ಕರ್ತನಿಗೆ ನಿತ್ಯನಿಯಮದ ಪ್ರಕಾರ ಎಡೆಬಿಡದೆ ಆಹಾರದ ಅರ್ಪಣೆಯಾಗಿದೆ.
Cross references
ಅಂಕೆಗಳ ಪುಸ್ತಕ 28:5
ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.