ಅಂಕೆಗಳ ಪುಸ್ತಕ 29:16 · ಕನ್ನಡ ಬೈಬಲ್
ಪಾಪಬಲಿಗೆ ಒಂದು ಮೇಕೆಮರಿ; ಇದಲ್ಲದೆ ನಿತ್ಯ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆ ಯನ್ನೂ ಪಾನದ ಅರ್ಪಣೆಯನ್ನೂ ಅರ್ಪಿಸಬೇಕು.
Cross references
ನಿರ್ಗಮಕಾಂಡ 29:40
ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು.
ಲೇವ್ಯಕಾಂಡ 4:23
ಇಲ್ಲವೆ ಅವನು ಮಾಡಿದ ಆ ಪಾಪವು ಅವನಿಗೆ ತಿಳಿದು ಬಂದರೆ, ಅವನು ಬಲಿಗಾಗಿ ಮೇಕೆಗಳಲ್ಲಿ ದೋಷವಿಲ್ಲದ ಒಂದು ಗಂಡು ಮರಿಯನ್ನು ತರಬೇಕು.
ಅಂಕೆಗಳ ಪುಸ್ತಕ 28:10
ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
ಅಂಕೆಗಳ ಪುಸ್ತಕ 28:15
ಇದಲ್ಲದೆ ನಿತ್ಯ ದಹನ ಬಲಿಯ ಹೊರತು ಕರ್ತನಿಗೆ ಪಾಪ ಬಲಿಗಾಗಿ ಒಂದು ಮೇಕೆಮರಿಯನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆ ಯನ್ನೂ ಅರ್ಪಿಸಬೇಕು.