Home Bibles ಲೇವ್ಯಕಾಂಡ 7:11 · ಕನ್ನಡ ಬೈಬಲ್
ಲೇವ್ಯಕಾಂಡ 7:11 · ಕನ್ನಡ ಬೈಬಲ್

ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ:

Cross references

ಲೇವ್ಯಕಾಂಡ 3:1

ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.

ಲೇವ್ಯಕಾಂಡ 7:29

ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತ ನಾಡಿ ಹೀಗೆ ಹೇಳು--ಕರ್ತನಿಗೆ ತನ್ನ ಯಜ್ಞದ ಸಮಾಧಾನ ಬಲಿಯನ್ನು ಅರ್ಪಿಸುವವನು ಯಜ್ಞದ ಸಮಾಧಾನ ಬಲಿಯ ತನ್ನ ಕಾಣಿಕೆಯನ್ನು ಕರ್ತನಿಗೆ ತರಬೇಕು.

ಲೇವ್ಯಕಾಂಡ 19:6

ಅದನ್ನು ನೀವು ಸಮರ್ಪಿಸಿದ ದಿನ ದಲ್ಲಿಯೂ ಮಾರನೆಯ ದಿನದಲ್ಲಿಯೂ ತಿನ್ನಬೇಕು; ಆದರೆ ಅದು ಮೂರನೆಯ ದಿನದ ವರೆಗೆ ಉಳಿದರೆ ಅದನ್ನು ಬೆಂಕಿಯಲ್ಲಿ ಸುಡಬೇಕು.

ಲೇವ್ಯಕಾಂಡ 22:18

ಆರೋನನೊಂದಿಗೂ ಅವನ ಕುಮಾರರೊಂದಿಗೂ ಇಸ್ರಾಯೇಲ್‌ ಎಲ್ಲಾ ಮಕ್ಕ ಳೊಂದಿಗೂ ಮಾತನಾಡಿ ಅವರಿಗೆ ಹೇಳಬೇಕಾದ ದ್ದೇನಂದರೆ--ಇಸ್ರಾಯೇಲ್‌ ಮನೆತನದವರಲ್ಲಾಗಲಿ ಇಸ್ರಾಯೇಲ್ಯರ ಪರಕೀಯರಲ್ಲಾಗಲಿ ಯಾವನಾದರೂ ತನ್ನ ಎಲ್ಲಾ ಪ್ರಮಾಣಗಳ ನಿಮಿತ್ತವಾಗಿ ಕಾಣಿಕೆಯನ್ನು ದಹನಬಲಿಯಾಗಿ ಕರ್ತನಿಗೆ ಅರ್ಪಿಸುವ ಉಚಿತವಾದ ಅರ್ಪಣೆಗಳಲ್ಲಿ

ಲೇವ್ಯಕಾಂಡ 22:29

ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು ಸಮರ್ಪಿಸುವಾಗ ನಿಮ್ಮ ಸ್ವಇಷ್ಟದಿಂದ ಅರ್ಪಿಸಿರಿ.

2 ದಿನವೃತ್ತಾಂತ 29:31

ಹಿಜ್ಕೀಯನು ಅವರಿಗೆ ಉತ್ತರಕೊಟ್ಟು--ಈಗ ನೀವು ನಿಮ್ಮನ್ನು ಕರ್ತನಿಗೆ ಪ್ರತಿಷ್ಠೆಮಾಡಿದ್ದ ರಿಂದ ಸವಿಾಪಕ್ಕೆ ಬಂದು ಬಲಿಗಳನ್ನೂ ಸ್ತೋತ್ರ ಅರ್ಪಣೆಗಳನ್ನೂ ಕರ್ತನ ಆಲಯಕ್ಕೆ ತಕ್ಕೊಂಡು ಬನ್ನಿರಿ ಅಂದನು. ಆಗ ಕೂಟದವರು ಬಲಿಗಳನ್ನೂ ಸ್ತೋತ್ರದ ಅರ್ಪಣೆಗಳನ್ನೂ ಉಚಿತಾರ್ಥ ವಾಗಿ ಕೊಡಲು ಮನಸ್ಸುಳ್ಳವರು ದಹನಬಲಿಗಳನ್ನೂ ತಂದರು.

2 ದಿನವೃತ್ತಾಂತ 33:16

ಅವನು ಕರ್ತನ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ಸಮಾಧಾನದ ಬಲಿಗಳನ್ನೂ ಸ್ತೋತ್ರದ ಬಲಿಗಳನ್ನೂ ಅರ್ಪಿಸಿ ಇಸ್ರಾಯೇಲಿನ ದೇವರಾದ ಕರ್ತನನ್ನು ಸೇವಿಸಲು ಯೆಹೂದದವರಿಗೆ ಆಜ್ಞಾಪಿಸಿ ದನು.

ಯೆಹೆಜ್ಕೇಲ 45:15

ಇಸ್ರಾಯೇಲಿನ ನೀರುಗಳ ಮೇವುಗಳಿಂದ ಮೇದಿ ರುವ ಇನ್ನೂರರೊಳಗೆ ಒಂದು ಕುರಿಮರಿಯನ್ನು ಮಂದೆಯೊಳಗಿಂದ ಅರ್ಪಣೆಗಾಗಿಯೂ ದಹನಬಲಿ ಗಾಗಿಯೂ ಸಮಾಧಾನ ಯಜ್ಞಕ್ಕಾಗಿಯೂ ಅವರಿ ಗೋಸ್ಕರ ಸಮಾಧಾನಕ್ಕಾಗಿ ಅರ್ಪಿಸಬೇಕೆಂದು ದೇವ ರಾದ ಕರ್ತನು ಹೇಳುತ್ತಾನೆ.

Interlinear

Choose Theme