Home Bibles ನಿರ್ಗಮಕಾಂಡ 14:12 · ಕನ್ನಡ ಬೈಬಲ್
ನಿರ್ಗಮಕಾಂಡ 14:12 · ಕನ್ನಡ ಬೈಬಲ್

ನಾವು ಐಗುಪ್ತದೇಶ ದಲ್ಲಿದ್ದಾಗಲೇ--ನೀನು ನಮ್ಮ ಗೊಡವೆಗೆ ಬರಬೇಡ; ನಾವು ಐಗುಪ್ತ್ಯರಿಗೆ ಸೇವೆಮಾಡುವೆವು. ನಾವು ಅರಣ್ಯ ದಲ್ಲಿ ಸಾಯುವದಕ್ಕಿಂತ ಐಗುಪ್ತ್ಯರಿಗೆ ಸೇವೆ ಮಾಡು ವದು ಒಳ್ಳೇದಾಗಿತ್ತಲ್ಲವೇ ಎಂದು ಹೇಳಿದರು.

Cross references

ನಿರ್ಗಮಕಾಂಡ 3:9

ಆದದರಿಂದ ಈಗ ಕೇಳು, ಇಸ್ರಾಯೇಲ್‌ ಮಕ್ಕಳ ಕೂಗು ನನ್ನ ಬಳಿಗೆ ಬಂದಿತು; ಐಗುಪ್ತ್ಯರು ಅವರನ್ನು ಬಾಧಿಸುವ ಬಾಧೆಯನ್ನು ನಾನು ನೋಡಿದ್ದೇನೆ.

ನಿರ್ಗಮಕಾಂಡ 5:21

ಅವ ರಿಗೆ--ಕರ್ತನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ; ನೀವೇ ಫರೋಹನ ಮುಂದೆಯೂ ಅವನ ದಾಸರ ಮುಂದೆಯೂ ನಮ್ಮನ್ನು ಅವರು ಹೇಸಿಕೊಳ್ಳುವಂತೆ ಮಾಡಿದಿರಿ, ನಮ್ಮನ್ನು ಸಂಹರಿಸುವದಕ್ಕೆ ನೀವು ಅವರ ಕೈಗೆ ಕತ್ತಿಯನ್ನು ಕೊಟ್ಟಿರಿ ಅಂದರು.

ನಿರ್ಗಮಕಾಂಡ 6:9

ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ ಹಾಗೆ ಹೇಳಿ ದಾಗ ಅವರು ಮನೋವೇದನೆಯ ದೆಸೆಯಿಂದಲೂ ಕ್ರೂರವಾದ ದಾಸತ್ವದ ದೆಸೆಯಿಂದಲೂ ಮೋಶೆಯ ಮಾತನ್ನು ಕೇಳಲಿಲ್ಲ.

ಕೀರ್ತನೆಗಳು 106:7

ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.

ಹೊಶೇಯ 4:17

ಎಫ್ರಾಯಾಮನು ವಿಗ್ರಹಗಳಿಗೆ ಸೇರಿಕೊಂಡಿ ದ್ದಾನೆ, ಅವನನ್ನು ಬಿಟ್ಟುಬಿಡು.

ಯೋನ 4:3

ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.

ಯೋನ 4:8

ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.

ಮಾರ್ಕ 1:24

ಅವನು--ನಮ್ಮನ್ನು ಬಿಟ್ಟುಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು.

ಮಾರ್ಕ 5:7

ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.

ಮಾರ್ಕ 5:17

ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು.

Interlinear

Choose Theme