Home Bibles ಮಾರ್ಕ 5:17 · ಕನ್ನಡ ಬೈಬಲ್
ಮಾರ್ಕ 5:17 · ಕನ್ನಡ ಬೈಬಲ್

ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು.

Cross references

ಆದಿಕಾಂಡ 26:16

ಆಗ ಅಬೀಮೆಲೆಕನು ಇಸಾಕನಿಗೆ--ನೀನು ನಮಗಿಂತ ಬಲಿಷ್ಟನಾದಿ ಆದುದ ರಿಂದ ನಮ್ಮ ಬಳಿಯಿಂದ ಹೋಗು, ಅಂದನು.

ದ್ವಿತೀಯೋಪದೇಶಕಾಂಡ 5:25

ಹಾಗಾದರೆ ಈಗ ನಾವು ಯಾಕೆ ಸಾಯಬೇಕು? ಈ ಮಹಾಅಗ್ನಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವದು; ನಾವು ಇನ್ನೂ ನಮ್ಮ ದೇವರಾದ ಕರ್ತನ ಶಬ್ದವನ್ನು ಕೇಳಿದರೆ ಸಾಯುತ್ತೇವೆ.

1 ಅರಸುಗಳು 17:18

ಆಗ ಅವಳು ಎಲೀಯ ನಿಗೆ--ಓ ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವ ದಕ್ಕೂ ನನ್ನ ಮಗನು ಸಾಯುವದಕ್ಕೂ ನನ್ನ ಬಳಿಗೆ ಬಂದಿಯೋ ಅಂದಳು.

ಯೋಬ 21:14

ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ.

ಮತ್ತಾಯ 8:34

ಆಗ ಇಗೋ, ಪಟ್ಟಣದವರೆಲ್ಲರು ಯೇಸುವನ್ನು ಸಂಧಿಸುವದಕ್ಕೆ ಹೊರಗೆ ಬಂದರು; ಮತ್ತು ಅವರು ಆತನನ್ನು ನೋಡಿ ತಮ್ಮ ಮೇರೆಗಳನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.

ಮಾರ್ಕ 1:24

ಅವನು--ನಮ್ಮನ್ನು ಬಿಟ್ಟುಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು.

ಮಾರ್ಕ 5:7

ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.

ಲೂಕ 5:8

ಸೀಮೋನ್‌ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.

ಲೂಕ 8:37

ಆಗ ಗದರೇನನ ಸೀಮೆಯ ಸುತ್ತು ಮುತ್ತಲಿನ ಜನಸಮೂಹವೆಲ್ಲವು ಬಹಳ ಭಯ ಹಿಡಿದವರಾದದರಿಂದ ಆತನು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಆತನನ್ನು ಬೇಡಿ ಕೊಂಡರು; ಆತನು ದೋಣಿಯನ್ನು ಹತ್ತಿಹಿಂದಿರುಗಿ ದನು.

ಅಪೋಸ್ತಲರ ಕೃತ್ಯಗಳು 16:39

ಅವರ ಬಳಿಗೆ ಬಂದು ಅವರು ವಿನಯವಾಗಿ ಮಾತನಾಡಿ ಹೊರಗೆ ಕರೆದುಕೊಂಡು ಹೋಗಿ ಊರನ್ನು ಬಿಟ್ಟು ಹೋಗ ಬೇಕೆಂದು ಅವರನ್ನು ಬೇಡಿಕೊಂಡರು.ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಹೊರಟು ಹೋದರು.

Interlinear

Choose Theme